ಭಾರತದ ತಾರಾ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರು ಟೋಕಿಯೋ ಒಲಿಂಪಿಕ್ಸ್ ಬಳಿಕ ಮತ್ತೊಂದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ನಿನ್ನೆ ಫಿನ್ಲೆಂಡ್‌ನಲ್ಲಿ ನಡೆದ ಕುಒರ್ಟೆನ್ ಗೇಮ್ಸ್‌ನಲ್ಲಿ ನೀರಜ್ ಅವರು 86.69 ಮೀ. ದೂರಕ್ಕೆ ಜಾವೆಲಿನ್ ಎಸೆದು ಬಂಗಾರ ಗೆದ್ದರು. ಟ್ರೆನಿಡಾಡ್ ಆ್ಯಂಡ್ ಟೊಬಾಗೋದ ಕೆಶೋರ್ನ್ ವಾಲ್ಕೊಟ್ ಬೆಳ್ಳಿ, ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ ಕಂಚಿನ ಪದಕ ಗೆದ್ದರು.
ಕಳೆದ ವರ್ಷ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಐತಿಹಾಸಿಕ ಚಿನ್ನ ಗೆದ್ದ ಬಳಿಕ ನೀರಜ್‌ಗೆ ಇದು 2ನೇ ಚಿನ್ನ. ಇದಕ್ಕೂ ಮೊದಲು ಇದೇ ವಾರದ ಆರಂಭದಲ್ಲಿ ಅವರು ಫಿನ್ಲೆಂಡ್‌ನ ಪಾವೊ ನುರ್ಮಿ ಗೇಮ್ಸ್‌ನಲ್ಲಿ 89.30 ದೂರಕ್ಕೆ ಜಾವೆಲಿನ್ ಎಸೆದು ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಆದರೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ರು. ಇದೀಗ ಕುಒರ್ಟೆನ್ ಗೇಮ್ಸ್‌ನಲ್ಲಿ ನೀರಜ್ ಅವರು 86.69 ಮೀ. ದೂರಕ್ಕೆ ಜಾವೆಲಿನ್ ಎಸೆದು ಬಂಗಾರ ಗೆದ್ದಿದ್ದಾರೆ.