Monday, December 23, 2024

ಬಿಜೆಪಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ

ರಾಮನಗರ : ಅಗ್ನಿಪಥ್ ಯೋಜನೆ RSS ಯೋಜನೆ ಎಂಬ ಅನುಮಾನ‌ ಇದೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಯೋಜನೆ RSS ಯೋಜನೆ ಎಂಬ ಅನುಮಾನ‌ ಇದೆ. ಇವರಿಗೆ ಈ ಯೋಜನೆಯ ಸಲಹೆ ಕೊಟ್ಟವರು ಯಾರು. ರಕ್ಷಣಾ ಇಲಾಖೆಗೆ ಯಾರು ಸಲಹೆ ಕೊಟ್ಟರು ಸಂಸದರ ಸಮಿತಿ ಸಲಹೆ ಕೊಟ್ಟಿದೆಯಾ ಅಥವಾ RSS ನವರು ಸಲಹೆ ಕೊಟ್ಟಿದ್ದಾರ..? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದಲ್ಲದೇ, ನಾಜಿ ಸಾಮಾಜ್ರದ ಹಿಟ್ಲರ್ ಸರ್ವಾಧಿಕಾರಿ ಇತ್ತಲ್ಲ, ಆಗಲೇ RSS ಹುಟ್ಟಿಕೊಂಡಿತ್ತು. ಅದೇ ರೀತಿ ಸೇನೆಯಲ್ಲೂ ಹಿಡಿತ ಸಾಧಿಸಲು ಹೊರಟ್ಟಿದ್ದಾರೆ. ಸೇನೆಯಲ್ಲಿ RSS ನವರನ್ನ ತುಂಬಲು ಈ ಪ್ಲ್ಯಾನ್ ಇದೆ. ಇದು RSS ನವರ ಅಗ್ನಿಪಥ್ ಯೋಜನೆ ಚನ್ನಪಟ್ಟಣದ ಭೈರಾಪಟ್ಟಣ ಗ್ರಾಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES