Monday, December 23, 2024

ತಂದೆಯ ಪ್ರೀತಿಯ ಮುಂದೆ ಎಲ್ಲವೂ ಕ್ಷೀಣ

ಅಮ್ಮ ಮಗುವನ್ನು ಒಂಬತ್ತು ತಿಂಗಳು ತನ್ನ ಗರ್ಭದಲ್ಲಿರಿಸಿ ತನ್ನ ಕಂದಮ್ಮನಿಗೆ ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಾಳೆ ಆದರೆ ಅಪ್ಪ ತನ್ನ ಇಡೀ ಸರ್ವಸ್ವವನ್ನೇ ತನ್ನ ಮಗುವಿಗಾಗಿ ಒತ್ತೆ ಇಡುತ್ತಾನೆ. ತನ್ನ ಮಗುವಿನ ಜೀವನಕ್ಕೆ ಸಂಪೂರ್ಣ ಆಸರೆಯಾಗಿ ನಿಲ್ಲುತ್ತಾನೆ.

ಅಪ್ಪ ಅದೆಷ್ಟೋ ನೋವು-ಸಂಕಟಗಳನ್ನು ನುಂಗಿ ಮನೆಯವರ ಹಿತಕ್ಕಾಗಿ ದಿನವಿಡೀ ದುಡಿಯುತ್ತಾರೆ. ಹುಟ್ಟಿದಾಗಿನಿಂದ ಉಜ್ವಲ ಭವಿಷ್ಯ ಕಾಣುವವರೆಗೂ ಮಕ್ಕಳ ಕೈ ಹಿಡಿದು ನಡೆಸುವ ಪ್ರತ್ಯಕ್ಷ ದೇವರು ಅವರು. ಹಗಲಿರುಳು ದುಡಿದು ತನ್ನ ಕಷ್ಟ ಬದಿಗಿಟ್ಟು ಮಕ್ಕಳಿಗೆ ಪ್ರೀತಿಯನ್ನು ಮಾತ್ರ ಉಣಬಡಿಸುವವರು ಅಪ್ಪ ಮಾತ್ರ. ಈ ಎರಡಕ್ಷರದ ಪದದಲ್ಲಿ ಅದೆಷ್ಟು ಗಾಂಭೀರ್ಯ, ದರ್ಪ, ಕೋಪ, ಮುನಿಸು ಜತೆಗೆ ಅಳೆಯಲಾಗದಷ್ಟು ಪ್ರೀತಿ ಇರುವುದಂತು ನಿಜ. ಅದಕ್ಕಾಗಿಯೇ ಅಪ್ಪ ಎಂದರೆ ಆಕಾಶ ಎನ್ನುತ್ತಾರೆ. ಅವರ ತ್ಯಾಗ, ಪ್ರೀತಿ ಆಕಾಶದಷ್ಟೇ ನಿಶ್ಕಲ್ಮಶ ಮತ್ತು ವಿಸ್ತಾರ ದುಡಿದು ಮನೆಯ ಸಾಕುವ ಯಜಮಾನ. ತನಗೆ ಚೆನ್ನಾಗಿರುವ ಶೂ ಇಲ್ಲದಿದ್ದರೂ ತನ್ನ ಮಗನನ್ನು ಉತ್ತಮ ಶಾಲೆಗೆ ಸೇರಿಸುತ್ತಾನೆ. ಉತ್ತಮ ಬಟ್ಟೆ, ಉತ್ತಮ ಆಹಾರ ಕೊಡಿಸುತ್ತಾನೆ. ಮಕ್ಕಳು ಎಲ್ಲವನ್ನು ಕೊಡಿಸುವ ಸಕಾರ ಮೂರ್ತಿ ಅಪ್ಪ.

ಮಕ್ಕಳು ಮತ್ತು ಅಪ್ಪನ ನಡುವಿನ ಬಾಂಧವ್ಯದ ಸಂಕೇತವಾಗಿ ಜೂನ್​ ತಿಂಗಳ ಮೂರನೇ ಭಾನುವಾರದಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ. ಇದಕ್ಕೆ ಇಂತಹುದೇ ದಿನ ಎಂದು ಸೀಮಿತವಾಗಿಲ್ಲ. ಜೂನ್​ ತಿಂಗಳ ಮೂರನೇ ಭಾನುವಾರ ಯಾವ ದಿನ ಬರುತ್ತದೆ ಆ ದಿನದಂದು ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಸ್ಪೇನ್​ ಮತ್ತು ಪೋರ್ಚುಗಲ್​ನಂತಹ ದೇಶಗಳು ಮಾರ್ಚ್​ 19ರಂದು ಸೆಂಟ್​ ಜೋಸೆಫ್​ ದಿನದಂದು ತಂದೆಯ ದಿನಾಚರಣೆಯನ್ನು ಆಚರಿಸುತ್ತಾರೆ. ತೈವಾನ್​ನಲ್ಲಿ ಆಗಸ್ಟ್​ 8ರಂದು ಹಾಗೂ ಥೈಲಾಂಡ್​ನಲ್ಲಿ ಡಿಸೆಂಬರ್​ 5ರಂದು ಆಚರಿಸಲಾಗುತ್ತದೆ.

ಕಣ್ಣ ಹನಿ ಕೆಳಗೆ ಬೀಳದಂತೆ ಕಾಲಿಗೆ ಮುಳ್ಳು ಚುಚ್ಚದಂತೆ ಬೆನ್ನ ಮೇಲೆಯೇ ಹೊತ್ತು ಸಾಕಿದ ಪ್ರೀತಿ ಯಾರಿಂದಲೂ ಸಿಗುವುದಿಲ್ಲ. ಅಪ್ಪ ಜೊತೆಯಲ್ಲಿದ್ದರೆ ಅವರ ಬೆಲೆ ಗೊತ್ತಾಗಲ್ಲ ಅವರನ್ನು ಕಳೆದುಕೊಡವರಿಗಷ್ಟೇ ಆ ನೋವು ಏನು ಎಂದು ತಿಳಿದಿದೆ. ಹೀಗಾಗಿ ಈ ದಿನದಂದು ಮಾತ್ರವಲ್ಲದೇ ಪ್ರತಿ ದಿನ ತನ್ನ ಅಪ್ಪನ ಜೊತೆ ಪ್ರೀತಿಯ ಭಾವನೆಗಳನ್ನು ಹಂಚುತ್ತಾ ತನ್ನ ಮಗಳ ನಗುವಿನಲ್ಲಿ ತನ್ನ ಖುಷಿಯನ್ನು ಕಾಣುತ್ತಾನೆ.

ತಂದೆ ಮಗಳ ಕೈ ಹಿಡಿಯುವುದು ಕೆಲವು ವರ್ಷಗಳು ಮಾತ್ರವೇ ಆದರೆ ಅವಳ ಹೃದಯದಲ್ಲಿ ಮಾತ್ರ ತಂದೆ ಜೀವನ ಪರ್ಯಂತ ಜೀವಂತ

RELATED ARTICLES

Related Articles

TRENDING ARTICLES