Wednesday, January 22, 2025

ಹಳ್ಳ-ಕೊಳ್ಳದಲ್ಲಿ ಸಾಗುತ್ತಿದ್ದ ಜನರಿಗೆ ವ್ಯವಸ್ಥಿತ ರಸ್ತೆ

ಚಿಕ್ಕಮಗಳೂರು : ಒಂದೆಡೆ ಒಬ್ಬರ ಕೈಯನ್ನು ಮತ್ತೊಬ್ಬರು ಹಿಡ್ಕೊಂಡು ಹಳ್ಳ ದಾಟ್ತಿರೋ ಮಕ್ಕಳು.. ಮತ್ತೊಂದೆಡೆ ಕೆಲಸ-ಕಾರ್ಯಗಳಿಗಾಗಿ ಅದೇ ಹಳ್ಳದಲ್ಲಿ ಬರ್ತಿರೋ ಜನ. ಅದೇ ಜಾಗದಲ್ಲಿ ನಿರ್ಮಾಣವಾಗ್ತಿರುವ ಬೃಹತ್ ಸೇತುವೆ. ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಣತಿ ಸಮೀಪದ ಐದಳ್ಳಿ ಗ್ರಾಮದಲ್ಲಿ.

ದುರ್ಗಾ, ಬೆಟ್ಟದಹಳ್ಳಿ, ಗಡಬನಹಳ್ಳಿ ಸೇರಿ ಐದಾರು ಹಳ್ಳಿಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ದುಸ್ಥಿತಿ. ಯಾರೇ ಹುಟ್ಲಿ, ಯಾರೇ ಸಾಯ್ಲಿ, ಮಕ್ಕಳು ಶಾಲೆಗೆ ಹೋಗೋಕ್ಕಾಗ್ಲಿ, ಜನ ಕೆಲಸಕ್ಕೆ ಹೋಗೋಕ್ಕಾಗ್ಲಿ ಎಲ್ಲದಕ್ಕೂ ಈ ಹಳ್ಳವೇ ಗತಿಯಾಗಿತ್ತು. ಜನಪ್ರತಿನಿಧಿಗಳು ಸಂಬಂಧವಿಲ್ಲ ಎಂಬಂತಿದ್ದರು. ಈ ಕುರಿತು ಪವರ್ ಟಿವಿ ಸುದ್ದಿ ಮಾಡುತ್ತಿದ್ದಂತೆ ಶಾಸಕ ಕುಮಾರಸ್ವಾಮಿ ಭೇಟಿ ನೀಡಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಇದೀಗ, ಸೇತುವೆ ಕಾಮಗಾರಿ ಕೂಡ ಪ್ರಗತಿಯಲ್ಲಿದ್ದು, ಇನ್ನೆರಡು ತಿಂಗಳಲ್ಲಿ ಓಡಾಟಕ್ಕೆ ಮುಕ್ತವಾಗಲಿದೆ. ಆದ್ದರಿಂದ ಇಲ್ಲಿನ ಜನ ಪವರ್ ಟಿವಿಗೆ ನಾವು ಋಣಿ ಎಂದಿದ್ದಾರೆ.

ಐದಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಬಹುಪಯೋಗಿ ಮಾರ್ಗ. ಐದಳ್ಳಿ ಗ್ರಾಮದಲ್ಲೂ ಸುಮಾರು 40 ಮನೆಗಳಿವೆ. ಇವ್ರು ಕೇವಲ ಮುಕ್ಕಾಲು ಕಿ.ಮೀ. ದೂರದ ಕಣತಿಗೆ ಬರಬೇಕಂದ್ರೆ ಆರು ಕಿ.ಮೀ. ಸುತ್ತಿ ಬರಬೇಕು. ಇದೀಗ ಈ ಸೇತುವೆ ನಿರ್ಮಾಣವಾಗೋದ್ರಿಂದ ಸುಮಾರು ಅರ್ಧ ಕಿ.ಮೀ.ನಲ್ಲಿ ಕಣತಿ ಗ್ರಾಮಕ್ಕೆ ಬರುತ್ತಾರೆ. ಈ ಗ್ರಾಮದ ಮಕ್ಕಳು ಮಳೆಗಾಲದಲ್ಲಿ ಮೂರ್ನಾಲ್ಕು ತಿಂಗಳು ಶಾಲೆಗೆ ಹೋಗುತ್ತಿರಲಿಲ್ಲ. ತುರ್ತಾಗಿ ಆಸ್ಪತ್ರೆಗೆ ಹೋಗಲು ಹರಸಾಹಸ ಪಡುತ್ತಿದ್ದರು. ಈ ಬಗ್ಗೆ ನಿಮ್ಮ ಪವರ್​ ಟಿವಿ ಸವಿಸ್ತಾರವಾಗಿ ವರದಿ ಮಾಡಿ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಆ ಬೆನ್ನಲ್ಲೇ ಈ ಗ್ರಾಮಕ್ಕೆ 90 ಲಕ್ಷದಲ್ಲಿ ಬಹೃತ್ ಸೇತುವೆಯ ಸೌಭಾಗ್ಯ ಬಂದಿದ್ದು ವರದಾನವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಪವರ್​ ಟಿವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಾರೆ, ಏಳೆಂಟು ದಶಕಗಳಿಂದ ಅನಾಗರಿಕರಂತೆ ಬದುಕಿದ ಜನರ ನೋವಿಗೆ ಹೆಗಲಾದ ಪವರ್ ಟಿವಿಯ ವರದಿಯಿಂದ ಹಳ್ಳಿಯಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಹಾಗಾಗಿ, ಇಲ್ಲಿನ ಜನರ ಮೊಗದಲ್ಲಿ ಮಂದಹಾಸ ಮೂಡಿದ್ದು, ಇಲ್ಲಿನ ಜನ ಪವರ್ ಟಿವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಚಿನ್ ಶೆಟ್ಟಿ ಪವರ್ ಟಿವಿ ಚಿಕ್ಕಮಗಳೂರು

RELATED ARTICLES

Related Articles

TRENDING ARTICLES