Monday, December 23, 2024

‘ವೀರಕಂಬಳ’ದಲ್ಲಿ ಸಿನಿ ದೈತ್ಯರ ರೋಚಕ ಕಾಳಗ..!

ಕರಾವಳಿಯ ಕಂಬಳವನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸೋಕೆ ಅದ್ಧೂರಿ ವೆಚ್ಚದಲ್ಲಿ ವೀರ ಕಂಬಳ ಸಿನಿಮಾ ತಯಾರಾಗ್ತಿದೆ.  ತುಳುನಾಡಿನ ಸಂಸ್ಕೃತಿ, ಪರಂಪರೆಯ ಅದ್ಭುತ ಸಿನಿಮಾ ವೀರ ಕಂಬಳ. ಇದೀಗ ಈ ಜಬರ್ದಸ್ತ್​ ಸಿನಿಮಾದಲ್ಲಿ ಇಬ್ಬರೂ ಸ್ಟಾರ್​ ನಟರ ನಡುವೆ ಮಹಾ ಕಾಳಗ ನಡೆಯಲಿದೆ. ಯೆಸ್​​.. ಆ ಸೂಪರ್​ ಸ್ಟಾರ್ಸ್​ ಯಾರು ಗೊತ್ತಾ..? ಈ ಸ್ಟೋರಿ ನೋಡಿ.

ಕೋರ್ಟ್ ಅಡ್ಡಾದಲ್ಲಿ ಘಟಾನುಘಟಿಗಳ ಫೈಟಿಂಗ್​​

ತುಳುನಾಡಿನಲ್ಲಿ ನಡೆಯೋ ಕಂಬಳ ಕ್ರೀಡೆಯ ಬಗ್ಗೆ ನೀವೆಲ್ಲಾ ಕೇಳೆ ಇರ್ತೀರಾ. ಆದ್ರೇ ಅದರ ಕಂಪ್ಲೀಟ್​ ಸ್ಟೋರಿಯನ್ನು ಸಿಲ್ವರ್​ ಸ್ಕ್ರೀನ್​ ಮೇಲೆ ನೋಡೋ ಭಾಗ್ಯ ಸಿಕ್ಕರೆ. ವಾವ್ಹ್​​..! ಅದ್ಭುತ ಅಲ್ವಾ..? ಯೆಸ್​​.. ಕೋಣಗಳನ್ನು ಆರೈಕೆ ಮಾಡೋಕೆ ಎಸಿ ರೂಮ್,  ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾಕೋ ಕೋಣಗಳನ್ನು ಸಾಕೋ ಓನರ್​ಗಳು. ಹೀಗೆ ಕಂಬಳ ಕೇವಲ ಕ್ರೀಡೆಯಲ್ಲ. ಅದೊಂದು ಎಮೋಷನ್​​.

ಕಂಬಳದಲ್ಲಿ ಭಾಗವಹಿಸೋ ಕೋಣ ನ್ಯಾಷನಲ್​ ಸೂಪರ್​ ಸ್ಟಾರ್​ ಇದ್ದ ಹಾಗೆ. ಇದೀಗ ಈ ಕೋಣಗಳ ಮೇಲೆ ರೋಚಕ ಸಿನಿಮಾ ಬರ್ತಿದೆ. ವಿಶ್ವ ಸಿನಿದುನಿಯಾವನ್ನೇ  ಥಂಡಾ ಹೊಡೆಸೋಕೆ  ಬೆಚ್ಚಿ ಬೀಳಿಸೋ ಸಿನಿಮಾ ತಯಾರಾಗ್ತಿದೆ. ವೀರ ಕಂಬಳ ಪೂರ್ಣ ಪ್ರಮಾಣದಲ್ಲಿ ಕಂಬಳದ ಮೇಲೆ ತಯಾರಾಗ್ತಿರೋ ಸಿನಿಮಾ . ಸ್ಟಾರ್​ ಡೈರೆಕ್ಟರ್​ ರಾಜೇಂದ್ರ ಸಿಂಗ್​ ಬಾಬು ನಿರ್ದೇಶನದಲ್ಲಿ ಕನ್ನಡ ಸಿನಿಲೋಕದಲ್ಲಿ ಹೊಸ ದಾಖಲೆ ಬರೆಯೋಕೆ ಸಜ್ಜಾಗಿದೆ. ಅಸಲಿಗೆ ವಿಷ್ಯ ಏನಪ್ಪಾ ಅಂದ್ರೆ, ಈ ಸಿನಿಮಾದ ಕ್ಲೈಮ್ಯಾಕ್ಸ್​ಗೆ ಘಟನಾಘಟಿಗಳಾದ ಪ್ರಕಾಶ್​ರಾಜ್​​ V/S ರವಿಶಂಕರ್​ ನಡುವೆ ಜಟಾಪಟಿ ನಡೆಯಲಿದೆ.

ಗಲ್ಫ್​​ ರಾಷ್ಟ್ರಗಳು ನಿದ್ದೆ ಬಿಟ್ಟು ನೋಡೋ ವೀರ ಕಂಬಳ

ಕರಾವಳಿಯ ಕಂಬಳದಲ್ಲಿ  ಭೂಗತ ಲೋಕದ ಕಥೆ..!

ತುಳುನಾಡಿನ ದೇಸಿ ಪ್ರತಿಭೆ, ಕನ್ನಡದ ಹುಸೇನ್​​ ಬೋಲ್ಟ್​​ ಶ್ರೀನಿವಾಸಗೌಡ ಈ ಸಿನಿಮಾದಲ್ಲಿ ರಿಯಲ್​ ಹೀರೋ ಆಗಿ ಮಿಂಚಿದ್ದಾರೆ. ಸಿಕ್ಸ್​​ ಪ್ಯಾಕ್​​ ಧೀರ ಕೋಣಗಳನ್ನ ಪಳಗಿಸಿ, ಸಿಲ್ವರ್​ ಸ್ಕ್ರೀನ್​ ಮೇಲೆ ಧೂಳೆಬ್ಬಿಸ್ತಾರಂತೆ. ಜೊತೆಗೆ ಡೆಡ್ಲಿ ಆದಿತ್ಯನ ಗ್ಯಾಂಗ್​ಸ್ಟಾರ್ ಲುಕ್​ ನೋಡಿ, ಒಂದು ಕ್ಷಣ ಅವಕ್ಕಾಗಿ ಹೋಗ್ತಾರಂತೆ. ಥ್ರಿಲ್ಲರ್​ ಸಿನಿಮಾಗಳಲ್ಲಿ ಮಿಂಚ್ತಿದ್ದ ರಾಧಿಕಾ ನಾರಾಯಣ್,​​ ಕಮೀಷನರ್​​ ರೂಲ್​ ಮಾಡಲಿದ್ದಾರೆ. ಪ್ರತಿ ನಿತ್ಯ 40 ರಿಂದ 50 ಸೆಟ್​​ಗಳು, 80 ರಿಂದ 100 ಕೋಣಗಳು, ಸಾವಿರಾರು ಕಲಾವಿದರ ಸಮ್ಮುಖದಲ್ಲಿ ಕೆಜಿಎಫ್ ಲೆವೆಲ್​ನಲ್ಲಿ  ವೀರಕಂಬಳ ಸಿನಿಮಾ ತೆರೆಗೆ ಬರ್ತಿದೆ.

ಒಂದಿಲ್ಲೋಂದು ಸುದ್ದಿಗಳಿಂದ ಸಖತ್​ ಹೈಪ್​ ಕ್ರಿಯೇಟ್​ ಮಾಡ್ತಿರೋ ವೀರ ಕಂಬಳ ಸಿನಿಮಾದ ಕ್ಲೈಮ್ಯಾಕ್ಸ್​ ಸೀನ್​ ಶೂಟ್​ ಮಾಡಲಾಯಿತು. ಈ ದೃಶ್ಯದಲ್ಲಿ ಪ್ರಕಾಶ್​ ರಾಜ್​​ ಲಾಯರ್​ ಆಗಿ ಕಾಣಿಸಿಕೊಂಡಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿತು. ನಿರ್ದೇಶಕ ರಾಜೇಂದ್ರ ಸಿಂಗ್​ ಬಾಬು ಖುದ್ದಾಗಿ ಈ ಸ್ಪೆಷಲ್​​ ಸೀಕ್ವೆನ್ಸ್​ಗೆ ಪ್ರಕಾಶ್​ ರಾಜ್​ ಕಾಲ್​ಶೀಟ್​ ಪಡೆದಿದ್ದಾರೆ. ಈ ಕೋರ್ಟ್​ ಸೀನ್​​​ನಲ್ಲಿ ಪ್ರಕಾಶ್​ಗೆ ಎದುರಾಳಿಯಾಗಿ ಆರ್ಮುಗ ಖ್ಯಾತಿಯ ರವಿಶಂಕರ್​​ ಎದುರಾಗಿದ್ದಾರೆ.

ಕಂಬಳ ಕ್ರೀಡೆಯನ್ನ ನ್ಯಾಚುರಲ್​​ ಆಗಿ ತೋರಿಸೋಕೆ ಭಾರೀ ಮೊತ್ತದ ಸ್ಪೆಷಲ್​​ ಲೆನ್ಸ್​ ತರಿಸಿ, ಕ್ಯಾಮೆರಾಗೆ ಅಳವಡಿಸಲಾಗಿದೆ. ಅರುಣ್​ ರೈ  ತೋಡಾರ್​  ಚಿತ್ರಕ್ಕಾಗಿ ಕೋಟಿ ಕೋಟಿ ಹಣವನ್ನು ನೀರಿನಂತೆ ಸುರಿದಿದ್ದಾರೆ. ಎಲ್ಲೂ ಕಾಂಪ್ರಮೈಸ್​ ಆಗದೆ, ಹಾಲಿವುಡ್ ಸಿನಿಮಾ​​ ರೇಂಜ್​ಗೆ ವೀರ ಕಂಬಳ ಮೂಡಿ ಬರ್ತಿದೆ. ಮಣಿಕಾಂತ್​ ಕದ್ರಿ ಸಂಗೀತ. ವಿಜಯ್​​ಕುಮಾರ್​​ ಕೊಡಿಯಾಲ್​ಬೈಲ್​ ಸಂಭಾಷಣೆ ಇದೆ. ಒಟ್ನಲ್ಲಿ ಕಂಬಳದ ಕ್ರೇಜ್​​ ಕಣ್ಣಿಗೆ ರಾಚುವಂತೆ ಸೆಪ್ಟಂಬರ್​ ವೇಳೆಗೆ ನಿಮ್ಮೆದುರು ಬರಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES