Saturday, November 2, 2024

ಸೊಶಿಯಲ್​ ಮಿಡಿಯಾ ಅವಾಂತರ ಹಿಂದು ಮುಖಂಡ ಗಲಿಬಿಲಿ

ಗದಗ : ಶ್ರೀರಾಮಸೇನೆ ಕಾರ್ಯಕರ್ತನೋರ್ವ ಮುಸ್ಲಿಂ ಸಮುದಾಯ ವಿರುದ್ಧ ಸೊಸಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದಕ್ಕೆ, ತಡರಾತ್ರಿ ಗದಗ ನಗರ ಪೊಲೀಸ್ ಠಾಣೆ ಬಳಿ ಗೊಂದಲ ಸೃಷ್ಟಿಯಾಗಿದೆ.

ಜಮಖಂಡಿ ಜವಾರಿ ಮಂದಿ ಎಂಬ ಫೇಸ್ ಬುಕ್ ಪೋಸ್ಟ್ ನಲ್ಲಿ ಬುರ್ಖಾ ಹಾಕಿಕೊಂಡು ರೆಷನ್ ಪಡೆಯುವ ಫೋಟೋ ಬಳಸಿ ಟ್ರೋಲ್ ಕ್ರಿಯೇಟ್ ಮಾಡಲಾಗಿತ್ತು. ಆ ಟ್ರೋಲ್ ಪೋಸ್ಟನ್ನು ಗದಗ ನಗರದ ಶ್ರೀರಾಮಸೇನೆ ಕಾರ್ಯಕರ್ತ ಕಿರಣ್ ಹಿರೇಮಠ ಎಂಬ ಯುವಕ ತನ್ನ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದ. ಯುವಕನ ಸ್ಟೇಟಸ್ ನಿಂದ ಕೋಮು ಗಲಭೆಗೆ ಕಾರಣವಾಗುತ್ತೆ ಅಂತ ಶಹರ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆತಂದರು.

ಅದಲ್ಲದೇ, ಶ್ರೀರಾಮ ಸೇನೆ ಕಾರ್ಯಕರ್ತರು ಶಹರ ಪೊಲೀಸ್ ಠಾಣೆ ಎದುರು ನೂರಾರು ಜನ ಜಮಾಯಿಸಿದರು. ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಠಾಣೆ ಬಳಿ ಜಮಾಯಿಸಿದ ಜನ್ರರನ್ನು ಪೊಲೀಸರು ಚದುರಿಸಿದರು. ಪರಸ್ಥಿತಿ ವಿಕೋಪಕ್ಕೆ ಹೋಗದಂತೆ ಸ್ಥಳದಲ್ಲಿ ೩ ಡಿ.ಆರ್, ೧ ಕೆ.ಎಸ್.ಆರ್.ಪಿ ತುಕಡಿ ನಿಯೋಜನೆ ಹಾಗೂ ಡಿವೈಎಸ್ ಪಿ, ಸಿ.ಪಿ.ಐ ಹಾಗೂ ಅನೇಕ ಪೊಲೀಸರು ಸ್ಥಳದಲ್ಲೆ ಬೀಡು ಬಿಟ್ಟಿದ್ದರು. ಹಿಂದೂ ಕಾರ್ಯಕರ್ತ ಪೋಸ್ಟ್ ಹಾಕಿದಕ್ಕೆ ಕರೆತಂದು ಕೇಸ್ ಮಾಡ್ತಾರೆ. ಆದ್ರೆ ಹಿಜಾಬ್ ವಿವಾದ ಸಂದರ್ಭದಲ್ಲಿ ಮುಸ್ಲಿಂಮರು ೧೪೪ ಕಲಂ ಉಲ್ಲಂಘನೆ ಮಾಡಿ, ಪ್ರತಿಭಟನೆ ಮಾಡಿದವರ ಮೇಲೂ ಕೇಸ್ ದಾಖಲಿಸಬೇಕೆಂದು ಶ್ರೀರಾಮಸೇನೆ ಧಾರವಾಡ ವಿಭಾಗ ಸಂಚಾಲಕ ರಾಜು ಖಾನಪ್ಪನವರ್ ಒತ್ತಾಯಿಸಿದರು.

RELATED ARTICLES

Related Articles

TRENDING ARTICLES