Sunday, November 3, 2024

ಕರ್ನಾಟಕದಲ್ಲಿ ಮತ್ತೆ ಬಿಜೆಪಿ : ಆರ್.ಅಶೋಕ್

ತುಮಕೂರು : ಜಗ್ಗೇಶ್​​ಗೆ ಒಂದು ಸಲ ಎಂಪಿ ಆಗಬೇಕು ಎಂಬ ಬಯಕೆ ಇತ್ತು,ನನ್ನ ಬಳಿ ಅದನ್ನು ಹೇಳಿಕೊಂಡಿದ್ದರು ಎಂದು ತುರುವೇಕೆರೆಯ ಮಾಯಸಂದ್ರದಲ್ಲಿ ಕಂದಾಯ‌‌ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಡಿಸಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೇಳಿಕೆ ನೀಡಿದ ಅವರು, ಜಗ್ಗೇಶ್ ಬಗ್ಗೆ ಈ ಮೊದಲು ಏಕ ವಚನದಲ್ಲಿ ಮಾತನಾಡುತಿದ್ದೆ. ಈಗ‌ ರಾಜ್ಯ ಸಭಾ ಸದಸ್ಯರಾದ ಬಳಿಕ ಬಹುವಚನದಲ್ಲಿ ಮಾತನಾಡಬೇಕು. ಜಗ್ಗೇಶ್ ಅವರ ಊರಿಗೆ ಗೃಹ ಪ್ರವೇಶ ಮಾಡಿದ್ದೇನೆ. ಅವರು ಬಿಜೆಪಿಗೆ ಸೇರಿದ್ದಾಗ ಅಪಾದನೆ ಇತ್ತು. ಜಡೆ ಮಾಯಸಂದ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುವಂತೆ ಜಗ್ಗೇಶ್ ಅವರು ಕೇಳಿಕೊಂಡಿದ್ದು. ಹಾಗಾಗಿ ಅವರ ಊರಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ ಎಂದರು.

ಅದಲ್ಲದೇ, ನನಗೆ ಗ್ರಾಮ ವಾಸ್ತವ್ಯ ಒಂದು ಪಾಠ ಶಾಲೆ 1 ಲಕ್ಷ ಜನರು ಅರ್ಜಿ ಕೊಟ್ಟಿದ್ದಾರೆ. ಅದರಲ್ಲಿ 50 ಸಾವಿರ ಜನರಿಗೆ ಸವಲತ್ತು ತಲುಪಿಸಿದ್ದೇನೆ. ವಾರಕ್ಕೊಮ್ಮೆ ತಾಲ್ಲೂಕು ಕಚೇರಿಗೆ ಡಿಸಿ ಭೇಟಿ ಮಾಡಬೇಕು. ಅದನ್ನು ಕಡ್ಡಾಯ ಮಾಡಿದ್ದೇನೆ. ದೇವರು ಅವರನ್ನು ಇನ್ನೂ ಮೇಲ್ಮಟ್ಟಕ್ಕೆ ಹುದ್ದೆ ಕೊಟ್ಟರು. ಜಗ್ಗೇಶ್​​ಗೆ ಒಂದು ಸಲ ಎಂಪಿ ಆಗಬೇಕು ಎಂಬ ಬಯಕೆ ಇತ್ತು, ನನ್ನ ಬಳಿ ಅದನ್ನು ಹೇಳಿಕೊಂಡಿದ್ದರು.

ಅದರಂತೆ ಅವರು ಈಗ ಸಂಸದರಾಗಿದ್ದಾರೆ. ಜೆ.ಪಿ.ನಡ್ಡಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಸಭೆ ಮಾಡುತಿದ್ದಾರೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಈಗ ಶಕ್ತಿಶಾಲಿ ಆಗುತ್ತಿದೆ. ಈ ಭಾಗದ ಬಹಳಷ್ಟು ಜನ ಬಿಜೆಪಿಗೆ ಬರುತಿದ್ದಾರೆ. ಮೊದಲ ಕಂತಿನಲ್ಲಿ ಕೆಲವಷ್ಟು ಮುಖಂಡರು ಬಂದಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ಶಾಸಕರು ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ಮಾಡುತಿದ್ದೇವೆ ಎಂದು ಹೇಳಿದರು.
ಇನ್ನು, ಇನ್ನೊಂದು ಕಂತಿನಲ್ಲಿ ಕರೆ ತರಲು ತಯಾರಿ ನಡೆಯುತಿದೆ. ಹಳೇ ಮೈಸೂರು ಪ್ರಾಂತ್ಯದ ಕಾಂಗ್ರೆಸ್-ಜೆಡಿಎಸ್ ನ ಶಾಸಕರು ಬಿಜೆಪಿಗೆ ಸೇರುತ್ತಾರೆ. ೧೦-೧೨ ಜನ ಶಾಸಕರು ಬಿಜೆಪಿಗೆ‌ ಬರುತ್ತಾರೆ.ರಾಜ್ಯ ಸಭಾ ಚುನಾವಣೆಯಲ್ಲಿ ಯಾರು ಯಾರಿಗೆ ಮತ ಹಾಕಿದ್ದಾರೆ ಅನ್ನೋದು ಗೊತ್ತು. ಇದು ಕೇವಲ ಟ್ರೈಲರ್ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ.. ಮತ್ತೇ ಬಿಜೆಪಿ ಕರ್ನಾಟಕದಲ್ಲಿ ಮೋದಿ , ಬೊಮ್ಮಾಯಿ ಯಡಿಯೂರಪ್ಪನವರ ಆಶೀರ್ವಾದ ದಿಂದ ಬಾವುಟ ಹಾರಿಸುತ್ತದೆ ಎಂದರು.

RELATED ARTICLES

Related Articles

TRENDING ARTICLES