Monday, December 23, 2024

ತೆರಿಗೆ ವಂಚಕರ ಬಣ್ಣ ಬಯಲು ಮಾಡಲು ಡ್ರೋನ್ ಸಿದ್ಧ ..!

ಬೆಂಗಳೂರು: ಒಟ್ಟು 843 ಚ. ಕಿಲೋ ಮೀಟರ್. ವಿಸ್ತೀರ್ಣವಿರೋ BBMP ಯಲ್ಲಿ ತೆರಿಗೆ ವ್ಯಾಪ್ತಿಗೆ ಬರೋ 16 ಲಕ್ಷ ಪ್ರಾಪರ್ಟಿಗಳಿದಾವೆ. ಇಷ್ಟು ಬೃಹತ್ ಗಾತ್ರದಲ್ಲಿ ದೊಡ್ಡ ಮಾಲ್ ಗಳು, ಐಟಿ ಕಂಪನಿಗಳಿದ್ರೂ ಆಸ್ತಿ ತೆರಿಗೆ ಸಂಗ್ರಹವಾಗ್ತಿರೋ ತೀರಾ ಕಡಿಮೆ. ಸಾವಿರಾರು ಅಡಿಗಳಷ್ಟು ಕಟ್ಟಡ ಕಟ್ಟಿದ್ರೂ ಸುಳ್ಳು ದಾಖಲೆ ನೀಡಿ ಕಡಿಮೆ ಟ್ಯಾಕ್ಸ್ ಕಟ್ಟುತ್ತಿರೋದು ಗೊತ್ತಾಗಿದೆ. ಇದಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಮುಂದಾಗಿರೋ ಪಾಲಿಕೆ ಇದೀಗ ಡ್ರೋಣ್ ಸರ್ವೆ ನಡೆಸಿ ವಂಚಕರಿಗೆ ಬಿಸಿ ಮುಟ್ಟಿಸೋಕೆ ಹೊರಟಿದೆ.

ಬಿಬಿಎಂಪಿ ತೆರಿಗೆ ಸೋರಿಕೆ ತಡೆಗಟ್ಟಲು ಹಲವು ಯೋಜನೆಗಳನ್ನ ರೂಪಿಸಿದ್ರು ವರ್ಕೌಟ್ ಹಾಗ್ಲಿಲ್ಲ‌. ಅದ್ರೆ ಈಗ ಬಿಬಿಎಂಪಿ ಅಧಿಕಾರಿಗಳು ತಂತ್ರಜ್ಷಾನ ಬಳಸಿ ತೆರಿಗೆ ವಂಚಿತರಿಗೆ ಶಾಕ್ ನೀಡೋದಕ್ಕೆ ಮುಂದಾಗಿದೆ, ಎಸ್ ,, ಬಿಬಿಎಂಪಿ ಅಸ್ತಿ ತೆರಿಗೆ ಮೋಸ ಮಾಡ್ತಿರೋ ಕಟ್ಟಡ ಮಾಲೀಕರಿಗೆ ಈಗ ಡ್ರೋಣ್ ಮುಖಾಂತರ ಕಟ್ಟಡ ಸರ್ವೆ ನಡೆಸಿ ತೆರಿಗೆ ವಸೂಲಿಗೆ ಮುಂದಾಗಿದೆ. ಈಗಾಗಲೇ ಏರ್ ಪೋರ್ಟ್ ರಸ್ತೆಯಲ್ಲಿ ಡ್ರೋಣ್ ಸರ್ವೆ ನಡೆಸಿರೋ ಪಾಲಿಕೆ ಶೇಕಡಾ 30 ರಷ್ಟು ಅಸ್ತಿಗಳು ಕಡಿಮೆ ವಿಸ್ತೀರ್ಣ ತೋರಿಸಿರೋದು ಗೊತ್ತಾಗಿದೆ. ಇದ್ರ ಜತೆಗೆ ಬೆಸ್ಕಾಂ ಬಿಲ್ ಆಧಾರದ ಮೇಲೆ ಆಸ್ತಿಗಳನ್ನ ಮಾಹಿತಿ ಕಲೆಹಾಕಿದೆ. ಪ್ರಾಯೋಗಿಕವಾಗಿ ಎರಡು ವಾರ್ಡ್ ನಲ್ಲಿ ಸರ್ವೆನಡೆಸಿದಾಗ ಒಂದೊಂದು ವಾರ್ಡ್ ನಲ್ಲಿ ಒಂದುಕಾಲು ಕೋಟಿ ಕಡಿಮೆ ಸಂಗ್ರಹವಾಗಿದೆ. ಇಂಥವ್ರಿಗೆ ಬಡ್ಡಿ ಸಮೇತ ಆಸ್ತಿ ತೆರಿಗೆ ಕಟ್ಟಿಸಿಕೊಳ್ಳೋಕೆ ಬಿಬಿಎಂಪಿ ಮುಂದಾಗಿದೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 44 ಮಾಲ್ ಗಳು ಕಾರ್ಯನಿರ್ವಹಣೆ ಮಾಡ್ತಿವೆ. ಈ ಪೈಕಿ ಕೇವಲ 8 ಪ್ರತಿಷ್ಠಿತ ಮಾಲ್ ನಿಂದ ಬಿಬಿಎಂಪಿಗೆ ಬರೋಬ್ಬರಿ 46 ಕೋಟಿ ತೆರಿಗೆ ಬರಬೇಕಿದೆ.

ಯಾವ್ಯಾವ ಮಾಲ್ ನಿಂದ ಎಷ್ಟು ಬರಬೇಕಿದೆ ಮಾಲ್ ಬರಬೇಕಾದ ತೆರಿಗೆ

ಜಿ.ಟಿ ವರ್ಲ್ಡ್ ಮಾಲ್ 3 ಕೋಟಿ 15 ಲಕ್ಷ,

ಮಂತ್ರಿ ಮಾಲ್ 27 ಕೋಟಿ 11 ಲಕ್ಷ,

ರಾಕ್ ಲೈನ್ ಮಾಲ್ 6 ಕೋಟಿ 64 ಲಕ್ಷ,

ರಾಯಲ್ ಮಿನಾಕ್ಷಿ ಮಾಲ್ 4 ಕೋಟಿ 96 ಲಕ್ಷ,

ವರ್ಜಿನಿಯಾ ಮಾಲ್ 60 ಲಕ್ಷದ 70 ಸಾವಿರ,

ಟೋಟಲ್ ಮಾಲ್ 54 ಲಕ್ಷದ 63 ಸಾವಿರ,

ವಿಆರ್ ಮಾಲ್ 3 ಕೋಟಿ 66 ಲಕ್ಷ,

ಒಟ್ಟಿನಲ್ಲಿ ಬೆಂಗಳೂರು ಬೆಳೆದಂತೆ ಸಂಗ್ರಹವಾಗ್ಬೇಕಿರೋ ತೆರಿಗೆ ಮಾತ್ರ ಕಡಿಮೆಯಾಗ್ತಿದೆ. ಇದಕ್ಕೆ ಶಾಶ್ವತ ಬ್ರೇಕ್ ಹಾಕೋ ನಿಟ್ಟಿನಲ್ಲಿ ಡ್ರೋಣ್ ಮೊರೆ ಹೋಗಿದ್ದು, ಆರಂಭದಲ್ಲಿ ಇದು ಯಶಸ್ವಿನೂ ಆಗಿದೆ. ಆದ್ರೆ ಈ ಪ್ರಯೋಗ ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಬಿಬಿಎಂಪಿಗೆ ಸಹಾಯವಾಗುತ್ತೆ.., ಸರ್ವೆ ನಡೆಸಿದ್ರೂ ಎಷ್ಟು ತೆರಿಗೆ ಹೆಚ್ಚು ಸಂಗ್ರಹವಾಗುತ್ತೆ ಅನ್ನೋದಷ್ಟೇ ಪ್ರಶ್ನೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES