Monday, December 23, 2024

ಒಂದು ತಿಂಗಳಲ್ಲಿ ಎರಡು ಕೋಟಿ ಸಂಪಾದಿಸಿದ ಮಲೆಮಹದೇಶ್ವರ

ಚಾಮರಾಜನಗರ : ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟದ ಮಲೆಮಹದೇಶ್ವರನ ಹುಂಡಿಯಲ್ಲಿ ಎರಡು ಕೋಟಿ ಹಣ ಸಂಗ್ರಹವಾಗಿದೆ.

35 ದಿನ ಮಲೆಮಹದೇಶ್ವರನ ಹುಂಡಿಯಲ್ಲಿ ಎರಡು ಕೋಟಿ ಹಣ ಸಂಗ್ರಹವಾಗಿದ್ದು, ಮಾಯಾಕಾರ ಮಾದಪ್ಪನಿಗೆ ಚಿನ್ನ, ಬೆಳ್ಳಿಯನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ಒಂದು ತಿಂಗಳಲ್ಲಿ ಎರಡು ಕೋಟಿ ಸಂಪಾಧಿಸಿದ ಮಲೈ ಮಹದೇಶ್ವರ. ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ.

ಅದಲ್ಲದೇ, ಶುಕ್ರವಾರ ತಡರಾತ್ರಿವರೆಗೂ ನಡೆದ ದೇವಾಲಯದ ಹುಂಡಿ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಒಂದು ತಿಂಗಳಲ್ಲಿ ಬರೋಬ್ಬರಿ ಎರಡು ಕೋಟಿ ರೂ. ನಗದು ಸಂಗ್ರಹವಾಗಿದೆ. ಕೇವಲ 35 ದಿನಗಳಲ್ಲಿ 2,03,25,354 ನಗದು ಸಂಗ್ರಹ, ಚಿನ್ನ, ಬೆಳ್ಳಿ ಸಹ ಕಾಣಿಕೆ ರೂಪದಲ್ಲಿ ಸಲ್ಲಿಸಿರುವ ಭಕ್ತರು. ದಿನನಿತ್ಯದ ವಿವಿಧ ಸೇವಗಳನ್ನು ಹೊರತುಪಡಿಸಿ ಹುಂಡಿಯಲ್ಲೇ ಎರಡು ಕೋಟಿ ಆದಾಯ ಗಳಿಸುತ್ತಿದ್ದಾರೆ. ಕೊರೊನಾ ಬಳಿಕ ಬೆಟ್ಟಕ್ಕೆ ಹರಿದುಬರುತ್ತಿರುವ ಭಕ್ತಸಾಗರ. ವಾರಾಂತ್ಯ ಹಾಗೂ ಸೋಮವಾರದಂದು ಚಿನ್ನದ ರಥ ಸೇವೆ ಮಾಡಲು ಕಿಕ್ಕೇರಿದು ಸೇರುತ್ತಿರುವ ಭಕ್ತರು. ವಾರಾಂತ್ಯದಲ್ಲಿ ಬೆಟ್ಟಕ್ಕೆ ತಿರುಪತಿ ಮಾದರಿಯಲ್ಲೇ ಭಕ್ತರು ಹರಿದುಬರುತ್ತಿದ್ದಾರೆ.

RELATED ARTICLES

Related Articles

TRENDING ARTICLES