777 ಚಾರ್ಲಿ ಸಿನಿಮಾ ಇಷ್ಟ ಪಡದವರು ಯಾರು ಇಲ್ಲ. ಸಿನಿಮಾ ನೋಡಿ ಕಣ್ಣಲ್ಲಿ ನೀರು ಹಾಕದವರೂ ಇಲ್ಲ. ಚಾರ್ಲಿ ಈಗ ಎಲ್ಲರ ಮನೆಯ ಮುದ್ದಿನ ನಾಯಿಯಾಗಿದ್ದಾಳೆ. ಅವಳ ನಟನೆಯ ಮೋಡಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ದೂಳೆಬ್ಬಿಸ್ತಿರೋ 777 ಚಾರ್ಲಿಯ ಕಲೆಕ್ಷನ್ ಎಷ್ಟು ಗೊತ್ತಾ ..? 8ನೇ ದಿನವೂ ಗೆಲುವಿನ ನಾಗಾಲೋಟದಲ್ಲಿ ಮುನ್ನುಗ್ತಿರೋ ಚಾರ್ಲಿಯ ಒಟ್ಟು ಗಳಿಕೆಯ ಬಗ್ಗೆ ನಾವ್ ಹೇಳ್ತೀವಿ. ಜಸ್ಟ್ ವಾಚ್.
ಏಳೇ ದಿನದಲ್ಲಿ ಚಾರ್ಲಿ ಗಳಿಸಿದ್ದೆಷ್ಟು..?ಪಕ್ಕಾ ರಿಪೋರ್ಟ್
ಚಾರ್ಲಿಗೆ ಬಂತು ಒಳ್ಳೆ ಟೈಮ್.. ಬಾಕ್ಸ್ ಆಫೀಸ್ ಬ್ಯಾಂಗ್
ನಾಯಿಗೂ ಒಳ್ಳೆ ಟೈಮ್ ಬರುತ್ತೆ ಅನ್ನೋ ಗಾದೆ ಮಾತು ಖಂಡಿತ ಸುಳ್ಳಲ್ಲ. 777 ಚಾರ್ಲಿ ಚಿತ್ರದ ಸಕ್ಸಸ್ ಕ್ರೆಡಿಟ್ ಕೂಡ ಚಾರ್ಲಿಗೆ ಸೇರಬೇಕು. ಚಾರ್ಲಿ ಸಿನಿಮಾ ನೋಡಿದವ್ರು ರಿಯಲ್ ಹೀರೋ ಚಾರ್ಲಿ ಅಂತಾ ಹಾಡಿ ಹೊಗಳುತ್ತಿದ್ದಾರೆ. ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಂಡು ಮುನ್ನುಗ್ತಿದೆ 777ಚಾರ್ಲಿ. ಬಾಕ್ಸ್ ಆಫೀಸ್ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿ ಗೆಲುವಿನ ನಗೆ ಬೀರಿದೆ ಚಿತ್ರತಂಡ.
ಚಾರ್ಲಿ ಸಿನಿಮಾ ರಿಲೀಸ್ ಆದಾಗಿನಿಂದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಸಿನಿಮಾ ಥಿಯೇಟರ್ಗಳಿಗೆ ಲಗ್ಗೆ ಇಡೋ ಮುನ್ನವೇ ಪ್ರೀ ರಿಲೀಸ್ ಶೋ ಮೂಲಕ ಕೋಟಿ ಕೋಟಿ ಹಣ ಲೂಟಿ ಮಾಡಿತ್ತು. ಸಖತ್ ಪ್ಲ್ಯಾನ್ ಮಾಡಿಕೊಂಡಿದ್ದ ಚಿತ್ರತಂಡ ದೇಶದ 21 ಮಹಾನಗರಗಳಲ್ಲಿ ಪ್ರೀಮಿಯರ್ ಶೋ ಮೂಲಕವೇ ಸಿಕ್ಕಾಪಟ್ಟೆ ಹನ ಗಳಿಸಿಬಿಡ್ತು.
ಕರುನಾಡಿನಲ್ಲಿ ಭರ್ಜರಿ ಕಲೆಕ್ಷನ್.. ರಕ್ಷಿತ್ ಶೆಟ್ಟಿ ಸೇಫ್
ಎಲ್ಲಾ ಭಾಷೆಯ ಪ್ರೇಕ್ಷಕರು 777ಚಾರ್ಲಿಯನ್ನು ಮೆಚ್ಚಿಕೊಂಡಿದ್ದಾರೆ. ಈಗಾಗ್ಲೇ ಚಿತ್ರದ ಕಲೆಕ್ಷನ್ ಎರಡಮಕಿಯನ್ನುದಾಟಿ ಮುನ್ನುಗ್ತಿದೆ. ಐಬಿಟೈಮ್ಸ್ ವರದಿ ಪ್ರಕಾರ ಕರ್ನಾಟಕದಲ್ಲೇ 40 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ತಮಿಳುನಾಡು, ಕೇರಳದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಚಾರ್ಲಿ ಧರ್ಮನ ಕಾಂಬಿನೇಷನ್ಗೆ ಫ್ಯಾನ್ಸ್ ಫಿದಾ ಆಗಿದ್ದು ಈ ವೀಕೆಂಡ್ಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಡಬಲ್ ಆಗೋ ಸಾಧ್ಯತೆ ಇದೆ.
ಕೇವಲ ಕರ್ನಾಟಕವೊಂದರಲ್ಲೇ ವಾರದ ಗಳಿಕೆ 40 ಕೋಟಿ ದಾಟಿದ್ರೆ, ಆಂಧ್ರ-ತೆಲಂಗಾಣ ಸೇರಿ 3 ಕೋಟಿ ದಾಟಿದೆ. ಕೇರಳ ತಮಿಳುನಾಡು ಸೇರಿ 5 ಕೋಟಿ ದಾಟಿದ್ದು, ಬಾಲಿವುಡ್ ಹಾಗೂ ಉಳಿದ ಭಾಗಗಳಲ್ಲಿ 4 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಒಟ್ಟಾರೆಯಾಗಿ ವಿದೇಶದಲ್ಲಿ 8 ಕೋಟಿ ಮೀರುವ ದಾಖಲೆಯ ಕಲೆಕ್ಷನ್ ಮಾಡಿ ಚಿತ್ರತಂಡ ಬೀಗ್ತಿದೆ.
ಅಂದಾಜಿನ ಪ್ರಕಾರ 20 ಕೋಟಿಗೂ ಅಧಿಕ ಬಜೆಟ್ನಲ್ಲಿ ನಿರ್ಮಾಣವಾಗಿರೋ 777ಚಾರ್ಲಿ ಸಿನಿಮಾ ಸ್ಯಾಟಲೈಟ್ ಹಾಗೂ ಡಿಜಿಟಲ್ ರೈಟ್ಸ್ನಲ್ಲೂ ಕೋಟಿ ಕೋಟಿ ಗಳಿಸಿದೆ. ಇದ್ರ ಜೊತೆಯಲ್ಲಿ ದೇಶ ವಿದೇಶಗಳಲ್ಲಿ ಅಬ್ಬರಿಸ್ತಾ ಇರೋ ಚಾರ್ಲಿಗೆ ಸಖತ್ ರೆಸ್ಪಾನ್ಸ್ ಸಿಗ್ತಾ ಇದೆ. ಒಟ್ಟಾರೆ ಅಂದಾಜಿನ ಪ್ರಕಾರ 60 ಕೋಟಿ ಮೀರಿದ ಕಲೆಕ್ಷನ್ ಮಾಡಿದೆ 777 ಚಾರ್ಲಿ.
ಸಹಕಲಾವಿದರಾದ ರಾಜ್ ಬಿ ಶೆಟ್ಟಿ, ಬಾಬಿ ಸಿಂಹ, ನಟಿ ಸಂಗೀತಾ ಶೃಂಗೇರಿ ಕ್ಲಾಸ್ ಆ್ಯಕ್ಟಿಂಗ್ ಮಾಡಿದ್ದಾರೆ. ನಿರ್ದೇಶಕ ಕಿರಣ್ರಾಜ್ ನಿರ್ದೇಶನಕ್ಕೆ ಚಿತ್ರರಸಿಕರು ಫುಲ್ಮಾರ್ಕ್ಸ್ ಕೊಟ್ಟಿದ್ದು. ಅವರ ಹಾರ್ಡ್ವರ್ಕ್, ಡೆಡಿಕೇಷನ್, ಕ್ರಿಯೇಟಿವಿಟಿಗೆ ಫಿದಾ ಆಗಿದ್ದಾರೆ. ನಟ ರಕ್ಷಿತ್ ಶೆಟ್ಟಿ ಹಾಗೂ ಜಿ ಎಸ್ ಗುಪ್ತಾ ನಿರ್ಮಾಣದಲ್ಲಿ ಸಕ್ಸಸ್ ಕಂಡಿದೆ ಚಾರ್ಲಿ ಸಿನಿಮಾ. ನೋಬಿನ್ ಪೌಲ್ ಮ್ಯೂಸಿಕ್, ಅರವಿಂದ್ ಕಶ್ಯಪ್ ಕ್ಯಾಮೆರಾ ಮೋಡಿ ಮಾಡಿದೆ. ಎನಿವೇ ಇಂತಹ ಅದ್ಭುತ ಸಿನಿಮಾ ಮಿಸ್ ಮಾಡಿದ್ರೆ , ವೀಕೆಂಡ್ಗೆ ತಪ್ಪದೇ ಹೋಗಿ ಸಿನಿಮಾ ನೋಡಿ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ