Monday, December 23, 2024

ಕಮಲ ನಾಯಕರಿಗೆ ಶಾಸಕ​ ಯತ್ನಾಳ್​ ಎಚ್ಚರಿಕೆ

ಹಾವೇರಿ: 2ಎ ಮೀಸಲಾತಿ ಕೊಟ್ರೆ ಪಂಚಮಸಾಲಿ ಸಮಾಜ ಬಿಜೆಪಿ ಪರ ಇರುತ್ತೆ ಎಂದು ಹಾವೇರಿಯಲ್ಲಿ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ಎ ಮೀಸಲಾತಿ ಕೊಟ್ರೆ ಪಂಚಮಸಾಲಿ ಸಮಾಜ ಬಿಜೆಪಿ ಪರ ಇರುತ್ತೆ. ಇಲ್ಲದಿದ್ರೆ ಪರಿಷತ್ ಚುನಾವಣೆ ಫಲಿತಾಂಶ ಏನಾಯಿತು..? ಶಿಗ್ಗಾಂವ್​ನಲ್ಲಿ ನಮ್ಮ ಸಮಾಜದ 50 ಸಾವಿರ ಜನರಿದ್ದಾರೆ. ನಾನು ಯಾವುದಕ್ಕೂ ಅಂಜುವುದಿಲ್ಲ. ಮಂತ್ರಿಯಾಗುವುದಿಲ್ಲ ಅಂದ್ಮೇಲೆ ಯಾಕೆ ಅಂಜಬೇಕು..? ಎಂದರು.

ಅದಲ್ಲದೇ, ಕಾಂಗ್ರೆಸ್​ ನಾಯಕರ ಹೋರಾಟಕ್ಕೂ ಯತ್ನಾಳ್​ ಕಿಡಿಕಾಡಿದ್ದು, ಕಾಂಗ್ರೆಸ್​ನವರು ನೀರಾವರಿಗಾಗಿ ಹೋರಾಟ ಮಾಡ್ತಿದಾರಾ..? ನ್ಯಾಷನಲ್ ಹೆರಾಲ್ಡ್ ಆಸ್ತಿ ಲೂಟಿ ಮಾಡಿರೋ ಹೋರಾಟಕ್ಕೆ ಅರ್ಥವಿಲ್ಲ. ಖರ್ಗೆಯವರಿಗೆ ನೋಟಿಸ್ ಕೊಟ್ಟಾಗ ಯಾಕೆ ಹೋರಾಟ ಮಾಡಲಿಲ್ಲ. ಸೋನಿಯಾಗಾಂಧಿ ಮಾತ್ರವಲ್ಲ, ಯಡಿಯೂರಪ್ಪ ಜೈಲಿಗೆ ಹೋಗ್ತಾರೆ. ಯಡಿಯೂರಪ್ಪನವರ ಜೊತೆ ಲಿಂಗಾಯತರಿಲ್ಲ ಎಂದು ಹಾವೇರಿಯಲ್ಲಿ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES