Monday, December 23, 2024

ತ್ರಿವಿಕ್ರಮನ ವೇದಿಕೆಯಲ್ಲಿ ಮತ್ತೆ ಒಂದಾಗ್ತಾರೆ ಕುಚಿಕು ಫ್ರೆಂಡ್ಸ್

ಸ್ಯಾಂಡಲ್ ವುಡ್ ಕನಸುಗಾರ ರವಿಚಂದ್ರನ್ ಮಗನ ಕನಸು ನನಸಾಗೊ ಕಾಲ ಕೂಡಿ ಬಂದಿದೆ. ಅದ್ದೂರಿ ವೆಲ್ಕಮ್​ಗೆ ಸಕಲ ಸಿದ್ಧತೆಗಳು ಭರ್ಜರಿಯಾಗಿ ನಡಿತಿವೆ. ವಿಕ್ರಮ್ ಅಭಿನಯದ ತ್ರಿವಿಕ್ರಮ ಸಿನಿಮಾ ಭರಾಟೆಗೆ ದಿನಗಣನೆ ಶುರುವಾಗಿದೆ. ಪ್ರೀ ರಿಲೀಸ್ ಇವೆಂಟ್​​ಗೆ ಸೂಪರ್ ಸ್ಟಾರ್ಸ್​​ಗಳು ಸಾಕ್ಷಿಯಾಗಲಿದ್ದಾರೆ. ಯೆಸ್.. ಈ ಅಮೋಘ ಕ್ಷಣಕ್ಕೆ ರಂಗು ತುಂಬೋ ಸ್ಟಾರ್ಸ್ ಯಾರು ಗೊತ್ತಾ?

ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ತ್ರಿವಿಕ್ರಮನ ರಂಗಿನ ಹಬ್ಬ

ಒಂದೇ ವೇದಿಕೆಯಲ್ಲಿ ಮತ್ತೊಮ್ಮೆ ಕುಚಿಕು ಫ್ರೆಂಡ್ಸ್..!

ಕರ್ನಾಟಕದಾದ್ಯಂತ ಚಿತ್ರದ ಪ್ರಮೋಷನ್ಸ್ ಕಾರುಬಾರು

ಜೂನ್ 24ಕ್ಕೆ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಜೋರು

ರವಿಮಾಮನ ದ್ವಿತೀಯ ಪುತ್ರ ವಿಕ್ರಮ್ ಅಭಿನಯದ ಚೊಚ್ಚಲ ಸಿನಿಮಾ ತ್ರಿವಿಕ್ರಮ. ಚಿತ್ರರಂಗಕ್ಕೆ ಗ್ರ್ಯಾಂಡ್ ಆಗಿ ಲಾಂಚ್ ಮಾಡೋ ಬಹುದೊಡ್ಡ ಕನಸು ಕಂಡಿದ್ದ ಕ್ರೇಜಿಸ್ಟಾರ್ ಈ ಸಿನಿಮಾ ಮೂಲಕ ಕನ್ನಡದ ಚಿತ್ರರಸಿಕರಿಗೆ ಜ್ಯೂನಿಯರ್ ರಣಧೀರನ ಪರಿಚಯ ಮಾಡಿಸ್ತಿದ್ದಾರೆ. ತಂದೆಗೆ ತಕ್ಕ ಮಗನಾಗಿ ನಟನೆಯಲ್ಲಿ ಪಳಗಿರೋ ವಿಕ್ರಮ್ ಆನ್ ಸ್ಕ್ರೀನ್​​ನಲ್ಲಿ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಇದೀಗ ಈ ಚಿತ್ರದ ಪ್ರೀ ರಿಲೀಸ್ ಇವೆಂಟ್​ಗೆ ಅದ್ದೂರಿ ತಯಾರಿ ನಡೆತಿದೆ.

ತಡವಾದರೂ ಜಡವಾಗದೇ ಲೆಟೆಸ್ಟ್ ಎಂಟ್ರಿ ಕೊಡ್ತಿರೋ ವಿಕ್ರಮ್ ತ್ರಿವಿಕ್ರಮ ಚಿತ್ರದ ಮೂಲಕ ಕನ್ನಡಿಗರ ದಿಲ್ ದೋಚಲಿದ್ದಾರೆ. ಮೊದಲ ಸಿನಿಮಾದಲ್ಲೆ ಅಪೂರ್ವ ಅಭಿನಯ, ಬಿಂದಾಸ್ ಡ್ಯಾನ್ಸ್ ಮಾಡಿರುವ ವಿಕ್ರಮ್, ಅಭಿನಯದಲ್ಲಿ ಸಾಣೆ ಹಿಡಿದ ಹರಿತ ಕತ್ತಿಯಾಗಿದ್ದಾರೆ. ಅಖಾಡದಲ್ಲಿ ಧುಮುಕೋ ಮುಂಚೆ ಎಲ್ಲಾ ಪಟ್ಟುಗಳನ್ನು ಕಲಿತು ತ್ರಿವಿಕ್ರಮ ಸಿನಿಮಾಗೆ ಕೈ ಹಾಕಿರೋದು ಟೀಸರ್ ನೋಡಿದ್ರೇನೆ ತಿಳಿಯುತ್ತೆ. ಇನ್ನೂ ಇದೇ ತಿಂಗಳ ಜೂನ್ 19ರ ಪ್ರೀ ರಿಲೀಸ್ ಇವೆಂಟ್​​ಗೆ ಸೆಂಚೂರಿ ಸ್ಟಾರ್ ಶಿವಣ್ಣ, ರವಿಚಂದ್ರನ್ ಮತ್ತೆ ಒಂದಾಗಿ ಎಲ್ಲರನ್ನು ರಂಜಿಸೋ ಸುಳಿವು ಕೊಟ್ಟಿದ್ದಾರೆ.

ಚಿತ್ರ ಸೆಟ್ಟೇರಿದ ದಿನದಿಂದ ಇಲ್ಲಿಯವರೆಗೂ ಪ್ರಮೋಷನ್ ವಿಚಾರದಲ್ಲಿ ಗಲ್ಲಿ ಗಲ್ಲಿ ಯಲ್ಲೂ ಅಬ್ಬರದ ಸೌಂಡ್ ಮಾಡ್ತಿದೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಪ್ರಚಾರ ಮಾಡ್ತಿರುವ ಚಿತ್ರತಂಡ ಯುವಜನತೆಯನ್ನು ತನ್ನತ್ತ ಸೆಳಿತಿದೆ. ಇನ್ನೂ ಪ್ರೀರಿಲೀಸ್ ಇವೆಂಟ್​​ಗೆ ಯಾರೆಲ್ಲಾ ಬರ್ತಾರೆ ಅನ್ನೋ ಕುತೂಹಲವನ್ನು ಚಿತ್ರತಂಡ ರಿವೀಲ್ ಮಾಡಿದೆ. ಡಾಲಿ ಧನಂಜಯ, ಶಿವಣ್ಣ, ರವಿಚಂದ್ರನ್,ಮನೋರಂಜನ್ ರವಿಚಂದ್ರನ್, ಧ್ರುವ ಸರ್ಜಾ, ನೀನಾಸಂ ಸತೀಶ್​​​, ಶರಣ್​​​ ಸಾಥ್ ನೀಡ್ತಿದ್ದಾರೆ. ಇದಲ್ಲದೆ ಇನ್ನಿತರ ಸ್ಟಾರ್ಸ್ ಕೂಡ ಬರೋ‌ ನಿರೀಕ್ಷೆ ಇದೆ. ಅಂತೂ ಜೂನ್ 19 ರಂದು ಸಿನಿದೀಪಾವಳಿಯ ಹಾವಳಿ ಜೋರಾಗಿರಲಿದೆ.

ಚಿತ್ರದ ಪ್ರತಿಯೊಂದು ಹಾಡುಗಳು ಕೇಳುಗರ ಎದೆತಮಟೆಯನ್ನು ಕುಣಿಸಿದ್ದು ಸಿಕ್ಕಾಪಟ್ಟೆ ಮನರಂಜನೆ ನೀಡಿವೆ. ಟೀಸರ್, ಪೋಸ್ಟರ್ ಮೂಲಕವೇ ಚಿತ್ರಪ್ರೇಮಿಗಳ ದಿಲ್ ಖುಷ್ ಆಗಿದೆ. ಸೆಂಚೂರಿ ಸ್ಟಾರ್ ಶಿವಣ್ಣ ಕೂಡ ಪ್ಲೀಜ್ ಮಮ್ಮಿ ಸಾಂಗ್ ರಿಲೀಸ್ ಮಾಡಿ ಸಾಥ್ ಕೊಟ್ಟಿದ್ದಾರೆ. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಗೆ ದಿನಗಣನೆ ಶುರುವಾಗಿದೆ. ಸಿನಿಮಾ ರಿಲೀಸ್​ಗೆ  ಕೌಂಟ್ ಡೌನ್ ಶುರುವಾಗಿದ್ದು, ಸದ್ಯ ಪ್ರಿ ರಿಲೀಸ್ ಇವೆಂಟ್ ಕಾವು ಹೆಚ್ಚಾಗಿದೆ. ಸಹನಾಮೂರ್ತಿ ನಿರ್ದೇಶನ, ಸೋಮಣ್ಣ ನಿರ್ಮಾಣ, ಅರ್ಜುನ್ ಜನ್ಯಾ ಸಂಗೀತದ ಅಲೆಯಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದೆ. ನಟಿ ಆಕಾಂಕ್ಷ ಶರ್ಮಾ, ಜಯಪ್ರಕಾಶ್ ತಾರಾಗಣದಲ್ಲಿ ಹೊಸ ಇತಿಹಾಸ ಬರೆಯಲಿದೆ. ಎನಿವೇ ತ್ರಿಕ್ರಮ ಸಿನಿಮಾಗೆ ಆಲ್ ದಿ ಬೆಸ್ಟ್.

ರಾಕೇಶ್ ಆರುಂಡಿ ,ಫಿಲ್ಮ್ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES