ತುಮಕೂರು : ನಡು ರಸ್ತೆಯಲ್ಲೇ ವಿದ್ಯಾರ್ಥಿಗಳನ್ನು ಕೆಳಗಿಳಿಸಿ ಹೊರಟ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಗೊರಗೊಂಡನಹಳ್ಳಿಯಲ್ಲಿ ನಡೆದಿದೆ.
ಬಸ್ ಪಾಸ್ ಮಾಡಿಸಿರೋ ಪೋಷಕರೆಲ್ಲಾ ಈ ಸ್ಟೋರಿ ನೋಡಲೇಬೇಕು. ಅದ್ರಲ್ಲೂ ಮಕ್ಕಳನ್ನ ಬಸ್ ಹತ್ತಿಸಿ ಬಂದ ಪೋಷಕರೇ ಈ ಸ್ಟೋರಿ ನೋಡಿ. ಪೋಷಕರು ಈ ಮಕ್ಕಳ ಪಾಡು ನೋಡಿದ್ರೆ ಹೊಟ್ಟೆ ಚುರು ಅನ್ನುತ್ತೆ. ಶಿಕ್ಷಣ ಸಚಿವರ ಸ್ವಕ್ಷೇತ್ರದಲ್ಲಿ ಮಕ್ಕಳ ನೋವು ಕೇಳೋರಿಲ್ಲಾ.
ಇನ್ನು ಪ್ರತಿನಿತ್ಯ ತುರುವೇಕೆರೆಯಿಂದ ನೊಣವಿನಕೆರೆ ಮಾರ್ಗವಾಗಿ ತಿಪಟೂರಿಗೆ ಬರೋ ವಿದ್ಯಾರ್ಥಿಗಳು. ಸೇತುವೆ ಕುಸಿದಿದೆ ಅನ್ಯ ಮಾರ್ಗ ಬಳಸಿದ್ರೆ ಆರು ಕಿಮೀ ಸುತ್ತ ಬೇಕು ಎಂದು ವಿದ್ಯಾರ್ಥಿಗಳ ಕೆಳಗಿಳಿಸಿದ ಸಿಬ್ಬಂದಿ. ಕಳೆದ ಆರು ತಿಂಗಳಿನಿಂದ ನಡೆಯುತ್ತಿರೋ ತಿಪಟೂರು ವೈ.ಟಿ.ರಸ್ತೆ ಕಾಮಗಾರಿ. ಕರಡಿ ಮಾರ್ಗವಾಗಿ ತಿಪಟೂರಿಗೆ ಬಾರದೇ ಸೂಚನೆ ಇಲ್ಲ ಎಂದು ನಡುರಸ್ತೆಯಲ್ಲೇ ಕೆಳಗಿಳಿಸಿ ಸಿಬ್ಬಂದಿ ಹೀಗಾಗಿ ವಿದ್ಯಾರ್ಥಿಗಳು ಸುಮಾರು 2 ಕಿಮೀ ನಡೆದು ಕಾಲೇಜು, ಹೈಸ್ಕೂಲ್ ಬಂದು ಸೇರಿದ್ದಾರೆ. ರಸ್ತೆಯಲ್ಲಿ ಸಾಗುವಾಗ ವಿದ್ಯಾರ್ಥಿಗಳಿಗೆ ಅಪಘಾತವಾದ್ರೆ ದೇವರೇ ದಿಕ್ಕು ಹೀಗಾಗಿ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳ ವರ್ತನೆಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.