Sunday, December 22, 2024

ACB ದಾಳಿ: 21 ಭ್ರಷ್ಟರು ಬಲೆಗೆ, ಕೆ.ಜಿ.ಗಟ್ಟಲೇ ಚಿನ್ನಾಭರಣ, ಆಸ್ತಿ ಪತ್ರಗಳು ಪತ್ತೆ

ಬೆಂಗಳೂರು: ರಾಜ್ಯವ್ಯಾಪಿ ಭ್ರಷ್ಟರಿಗೆ ಎಸಿಬಿ ಬಿಸಿ ಮುಟ್ಟಿಸಿದೆ. ಭ್ರಷ್ಟಾಚಾರ ನಿಗ್ರಹ ದಳ ಜನರ ದುಡ್ಡನ್ನು ತಿಂದು ತೇಗಿದ್ದ ಅಧಿಕಾರಿಗಳಿಂದ ಅಪಾರ ಅಕ್ರಮ ಸಂಪತ್ತನ್ನು ಬಯಲಿಗೆಳೆದಿದೆ. ಎಸಿಬಿ ಬಲೆಗೆ ಭ್ರಷ್ಟರು, ಅವರು ಮಾಡಿದ್ದ ಅಕ್ರಮ ಆಸ್ತಿ ಎಷ್ಟು..?

ರಾಜ್ಯಾದ್ಯಂತ ಎಸಿಬಿ ಮಹಾಬೇಟೆಯಾಡಿದೆ.ಏಕಕಾಲದಲ್ಲಿ ವಿವಿಧೆಡೆ ನಡೆದ ದಾಳಿಯಲ್ಲಿ 21 ಭ್ರಷ್ಟ ಅಧಿಕಾರಿಗಳು ಬಲೆಗೆ ಬಿದ್ದಿದ್ದಾರೆ.ಅಧಿಕಾರಿಗಳು ಅಡ್ಡದಾರಿಯಲ್ಲಿ ಕೋಟಿ ಕೋಟಿ ಲೂಟಿ ಮಾಡಿ ಮಾಡಿದ್ದ ಅಪಾರ ಅಕ್ರಮ ಸಂಪತ್ತನ್ನು ಎಸಿಬಿ ಪತ್ತೆ ಹಚ್ಚಿದೆ. ಸುಮಾರು 80 ಕಡೆ.. 300ಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಭ್ರಷ್ಟ ಅಧಿಕಾರಿಗಳ ಸಾಮ್ರಾಜ್ಯದಲ್ಲಿ ತಲಾಶ್​ ನಡೆಸಿದ್ದಾರೆ.ದಾಳಿ ವೇಳೆ ಅಪಾರ ಪ್ರಮಾಣದ ನಗದು, ಕೆಜಿಗಟ್ಟಲೇ ಚಿನ್ನಾಭರಣ, ಕೋಟಿ ಕೋಟಿ ಆಸ್ತಿ ಪತ್ರಗಳು ಪತ್ತೆಯಾಗಿದ್ದು, ಮಿತಿಮೀರಿದ ಅಕ್ರಮ ಆಸ್ತಿ ಕಂಡು ಎಸಿಬಿ ಅಧಿಕಾರಿಗಳೇ ಕಕ್ಕಾಬಿಕ್ಕಿಯಾಗಿದ್ದಾರೆ.

ಯಾರ್ಯಾರಿಗೆ ಎಸಿಬಿ ಶಾಕ್​..? 

1. ಭೀಮಾ ರಾವ್​, ಸೂಪರಿಡೆಂಟ್​ ಆಫ್​ ಇಂಜಿನಿಯರ್​, ಬೆಳಗಾವಿ
2. ಹರೀಶ್​, ಸಹಾಯಕ​​ ಇಂಜಿನಿಯರ್​, ಸಣ್ಣ ನೀರಾವರಿ ಇಲಾಖೆ, ಉಡುಪಿ
3. ರಾಮಕೃಷ್ಣ, AEE, ಸಣ್ಣ ನೀರಾವರಿ ಇಲಾಖೆ, ಹಾಸನ
4. ರಾಜೀವ್​ ಪುರಸಯ್ಯ, ಸಹಾಯಕ ಇಂಜಿನಿಯರ್, PWD, ಕಾರವಾರ
5. B.R.ಬೋಪಯ್ಯ, ZP ಜ್ಯೂನಿಯರ್​ ಇಂಜಿನಿಯರ್​, ಪೊನ್ನಂಪೇಟೆ
6. ಮಧು, ಡಿಸ್ಟ್ರಿಕ್ಟ್‌ ರಿಜಿಸ್ಟ್ರಾರ್, ಬೆಳಗಾವಿ
7. ಪರಮೇಶ್ವರಪ್ಪ, ಕಿರಿಯ ಇಂಜಿನಿಯರ್, ಹೂವಿನಹಡಗಲಿ
8. ಯಲ್ಲಪ್ಪ.ಎನ್.ಪಡಸಾಲಿ, RTO ಬಾಗಲಕೋಟೆ
9. ಶಂಕ್ರಪ್ಪ ನಾಗಪ್ಪ ಗೋಗಿ, ಪ್ರಾಜೆಕ್ಟ್‌ ಡೈರೆಕ್ಟರ್, ಬಾಗಲಕೋಟೆ
10. ಪ್ರದೀಪ್‌.ಎಸ್‌.ಆಲೂರು, ಪಂಚಾಯಿತಿ ಕಾರ್ಯದರ್ಶಿ, ಗದಗ
11. ಸಿದ್ದಪ್ಪ.ಟಿ, ಉಪಮುಖ್ಯ ವಿದ್ಯುತ್ ಅಧಿಕಾರಿ, ಬೆಂಗಳೂರು
12. ತಿಪ್ಪಣ್ಣ ಪಿ.ಸಿರಸಗಿ, ಜಿಲ್ಲಾ ಕಾರ್ಯಕ್ರಮಾಧಿಕಾರಿ, ಬೀದರ್
13. ಮೃತ್ಯುಂಜಯ ಚೆನ್ನಬಸಯ್ಯ ತಿರಾಣಿ, ಸಹಾಯಕ ಕಂಟ್ರೋಲರ್, ಬೀದರ್
14. ಮೋಹನ್ ಕುಮಾರ್, ನೀರಾವರಿ ಇಲಾಖೆ ಇಇ, ನೀರಾವರಿ ವಿಭಾಗ ಚಿಕ್ಕಬಳ್ಳಾಪುರ
15. ಶ್ರೀಧರ್, ಜಿಲ್ಲಾ ನೋಂದಣಾಧಿಕಾರಿ, ಕಾರವಾರ
16. ಮಂಜುನಾಥ್, PWD ಇಲಾಖೆ ನಿವೃತ್ತ ಇಂಜಿನಿಯರ್
17. ಶಿವಲಿಂಗಯ್ಯ, ಬಿಡಿಎ ಗಾರ್ಡನರ್‌
18. ಉದಯ್ ರವಿ, ಪೊಲೀಸ್ ಇನ್ಸ್‌ಪೆಕ್ಟರ್, ಕೊಪ್ಪಳ
19. ಬಿ.ಜಿ.ತಿಮ್ಮಯ್ಯ, ಕೇಸ್ ವರ್ಕರ್, ಕಡೂರು ಪುರಸಭೆ
20. ಚಂದ್ರಪ್ಪ.ಸಿ.ಹೊಳೇಕರ್, UTP ಕಚೇರಿ, ರಾಣೆಬೆನ್ನೂರು
21. ಜನಾರ್ದನ್, ನಿವೃತ್ತ ರಿಜಿಸ್ಟ್ರಾರ್, ಭೂ ಮೌಲ್ಯಮಾಪನ ವಿಭಾಗ

ACB ದಾಳಿ ವೇಳೆ ಬನಶಂಕರಿ ಬಿಡಿಎ ಕಚೇರಿ ಗಾರ್ಡನರ್ ಶಿವಲಿಂಗಯ್ಯ ಗಳಿಸಿದ್ದ ಕೋಟಿ ಕೋಟಿ ಆಸ್ತಿಯನ್ನು ಕಂಡು ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲೂ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿ-ಪಾಸ್ತಿ ಮಾಡಿದ್ದಾರೆ.ತಿಂಗಳ ಸಂಬಳ ಕೇವಲ 48 ಸಾವಿರ ರೂಪಾಯಿ ಇದ್ದರೂ.. ನೂರಾರು ಕೋಟಿ ಆಸ್ತಿ ಮಾಡಿದ್ದಾನೆ. ಬೆಂಗಳೂರಿನಲ್ಲಿ 3 ಮನೆ, 5 ಖಾಲಿ ಸೈಟ್, ಚನ್ನಪಟ್ಟಣ ತಾಲ್ಲೂಕಿನಲ್ಲಿ 1 ಎಕರೆ 10 ಗುಂಟೆ ಜಮೀನು, ಮೈಸೂರು-ಬೆಂಗಳೂರು ಕಾರಿಡಾರ್​ನಲ್ಲಿ 1 ಎಕರೆ ಕಮರ್ಷಿಯಲ್ ಜಾಗ ಹೊಂದಿರುವುದು ಬೆಳಕಿಗೆ ಬಂದಿದೆ.

ಎಸಿಬಿ ದಾಳಿ ವೇಳೆ ಕೋಟಿ ಕೋಟಿ ಆಸ್ತಿ ಪತ್ತೆ :

PWD ಇಲಾಖೆ ನಿವೃತ್ತ ಇಂಜಿನಿಯರ್ ‘ಮಂಜುನಾಥ’ನ ಅಕ್ರಮ ಸಂಪತ್ತು ಎಸಿಬಿ ಅಧಿಕಾರಿಗಳನ್ನೆ ಕಕ್ಕಾಬಿಕ್ಕಿಯಾಗಿಸಿದೆ.2018ರ ಮೇನಲ್ಲಿ ನಿವೃತ್ತಿ ಹೊಂದಿರುವ ಮಂಜುನಾಥ್ ತಿಂಗಳಿಗೆ 1 ಲಕ್ಷ ಸಂಬಳ ಪಡೆಯುತ್ತಿದ್ದ.ಬೆಂಗಳೂರಿನ ಬಸವೇಶ್ವರನಗರದ ಶಾರದಾ ಕಾಲೋನಿಯ ಮನೆ, ಜಯನಗರ 4th ಬ್ಲಾಕ್​ನಲ್ಲಿ ಚೈತನ್ಯ ಗೋಲ್ಡ್ ಕಾಂಪ್ಲೆಕ್ಸ್, ಮಗಳ ಹೆಸರಲ್ಲಿ ಕಾರ್ಬನ್ ಕಾರ್ನರ್ ಸ್ಟೋನ್ ಅಪಾರ್ಟ್ಮೆಂಟ್, ತಾಯಿಯ ಹೆಸರಲ್ಲಿ 4 ಎಕರೆ ಜಮೀನು, ಬ್ಯಾಟರಾಯನಪುರದಲ್ಲಿ 60 ಲಕ್ಷ ಮೌಲ್ಯದ 30*40 ನಿವೇಶನ, ನಾಗವಾರಪಾಳ್ಯದಲ್ಲಿ 50 ಲಕ್ಷ ಮೌಲ್ಯದ 3 ಅಂಗಡಿಗಳು, ಹಲಗೆವಾಡರಹಳ್ಳಿಯಲ್ಲಿ 40 ಲಕ್ಷ ಮೌಲ್ಯದ 1000 ಚದರಡಿ ಸೈಟ್, ರಾಜಾಜಿನಗರದಲ್ಲಿ 1 ಕೋಟಿ ಮೌಲ್ಯದ 3 ಮಹಡಿಯ ಕಟ್ಟಡ, 10 ಲಕ್ಷ ಮೌಲ್ಯದ ಒಂದು ಕಿಯಾ ಸೆಲ್ಟೊ ಕಾರು ಸೇರಿ ಕೋಟಿ ಕೋಟಿ ಅಕ್ರಮ ಸಂಪತ್ತು ಪತ್ತೆಯಾಗಿದೆ.

ಚಿಕ್ಕಮಗಳೂರಿನಲ್ಲಿ ಎಸಿಬಿ ಭರ್ಜರಿ ಬೇಟೆಯಾಡಿದ್ದಾರೆ.SDA ತಿಮ್ಮಯ್ಯ ನಿವಾಸದಲ್ಲಿ ಅಕ್ರಮ‌ ಸಂಪತ್ತು ಪತ್ತೆಯಾಗಿದೆ.ಕಡೂರು ಪಟ್ಟಣದಲ್ಲಿ 3 ನಿವೇಶನ, 8 ಗುಂಟೆ ಜಮೀನು, ಬಸೂರು ಸಮೀಪ 80 ಲಕ್ಷ ಮೌಲ್ಯದ 20 ಎಕರೆ ತೋಟ, ಬಸೂರಿನಲ್ಲಿ 5 ಎಕರೆ ಖಾಲಿ ನಿವೇಶನ, 50 ಸಾವಿರ ನಗದು,100 ಗ್ರಾಂ ಬೆಳ್ಳಿ, 250 ಗ್ರಾಂ ಚಿನ್ನ ಪತ್ತೆಯಾಗಿದೆ.ಅಪಾರ ಪ್ರಮಾಣದ ಅಕ್ರಮ ಆಸ್ತಿ, ನಿವೇಶನ ಪತ್ರಗಳು ಪತ್ತೆಯಾಗಿವೆ.

ಸಹಾಯಕ ಇಂಜಿನಿಯರ್ ‘ಪರಮ’ ಪುರಾಣ :

ಕೂಡ್ಲಿಗಿ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ‘ಪರಮ’ ಪುರಾಣ ಬಗೆದಷ್ಟೂ ಬಯಲಾಗ್ತಿದೆ.
ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿ ಪತ್ರಗಳು ಪತ್ತೆಯಾಗಿದೆ.ಪತ್ನಿಗೆ ಎರಡೆರಡು ಮಾಂಗಲ್ಯ ಸರ ಮಾಡಿಸಿದ್ದು, ನೆಕ್ಲೆಸ್​, ಉಂಗುರ, ಬಂಗಾರದ ಬಳೆಗಳು, ಬೆಳ್ಳಿಯ ನಾಣ್ಯ ಹಾಗೂ ಲಕ್ಷಾಂತರ ರೂಪಾಯಿ ಪತ್ತೆಯಾಗಿದೆ.ಹಗರಿಬೊಮ್ಮನಹಳ್ಳಿಯ ನಿವಾಸದಲ್ಲಿ ಹಲವು‌ ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಮೋಹನ್ ಕುಮಾರನ ಮಹಾಮೋಸದಾಟ :

ಅಕ್ರಮ ಸಂಪಾದನೆಯಲ್ಲಿ ಪಳಗಿದ್ದ ಚಿಕ್ಕಬಳ್ಳಾಪುರ ಜಿಲ್ಲಾ‌ ಸಣ್ಣ ನೀರಾವರಿ ಇಲಾಖೆಯ EE ಮೋಹನ್​ ಕುಮಾರ್ ಅಕ್ರಮ ಆಸ್ತಿ ಬಗೆದಷ್ಟೂ ಬಯಲಾಗ್ತಿದೆ. ಅಕ್ರಮ ಸಂಪಾದನೆಯಲ್ಲಿ ಬೃಹತ್ ಬಂಗಲೆಗಳನ್ನೇ ಕಟ್ಟಿದ್ದಾರೆ.ನಾಗರಬಾವಿಯ ಮನೆಗಳು ಸೇರಿ ಬ್ಯಾಂಕ್ ಲಾಕರ್‌ಗಳಲ್ಲಿ ಶೋಧ ನಡೆದಿದ್ದು, ಮೂರು ಸೈಟ್, ಕೆ.ಜಿ.ಗಟ್ಟಲೇ ಬಂಗಾರ ಸಿಕ್ಕಿದೆ ಎನ್ನಲಾಗಿದೆ.ಅಲ್ಲದೆ,ಸಂಬಂಧಿಕರ ಮನೆಯ ಮೇಲೆಯೂ ದಾಳಿ
ಮಾಡಲಾಗಿದೆ.

ಆರ್‌ಟಿಒ ಮನೆಯಲ್ಲಿ ಕಂತೆ ಕಂತೆ ನೋಟು :

ಬಾಗಲಕೋಟೆ ಆರ್‌ಟಿಓ ಇನ್‌ಸ್ಪೆಕ್ಟರ್ ಯಲ್ಲಪ್ಪ ಪಡಸಾಲೆ ಅವರ ಧಾರವಾಡದ ಮನೆಯಲ್ಲಿ 500 ಮುಖಬೆಲೆಯ 20 ಲಕ್ಷ ನೋಟಿನ ಕಂತೆಗಳು ಪತ್ತೆಯಾಗಿವೆ.

ಬಾತ್‌ರೂಮ್‌ನಲ್ಲಿತ್ತು ಐದು ಲಕ್ಷ ರೂಪಾಯಿ :

ಬೆಳಗಾವಿಯ pwd ಅಧೀಕ್ಷಕ ಬಿ.ವೈ.ಪವಾರ್ ಮನೆಯ ಬಾತ್‌ರೂಮ್‌ನಲ್ಲಿ ಸುಮಾರು 5 ಲಕ್ಷದಷ್ಟು ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಪ್ಲಾಸ್ಟಿಕ್ ಚೀಲವೊಂದರಲ್ಲಿ ನೋಟಿನ ಕಂತೆಗಳನ್ನು ನೇತು ಹಾಕಿದ್ದನ್ನು ಕಂಡು ಅಧಿಕಾರಿಗಳೇ ಕಕ್ಕಾಬಿಕ್ಕಿಯಾದರು.
ಫ್ಲೋ.. BGM B Y POWER 5 LAKH

ಒಟ್ಟಾರೆ ರಾಜ್ಯದಲ್ಲಿ ತಿಮಿಂಗಿಲಗಳಾಗಿ ಬೆಳೆದು ನಿಂತಿದ್ದ 21 ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್ ಕೊಟ್ಟಿದ್ದು, ಶೋಧ ಇನ್ನೂ ಮುಂದುವರಿದಿದ್ದು, ಮತ್ತಷ್ಟು ಅಕ್ರಮ ಸಂಪತ್ತು ಪತ್ತೆಯಾಗಲಿದೆ.

ಬ್ಯೂರೋ ರಿಪೋರ್ಟ್ ಪವರ್ ಟಿವಿ

RELATED ARTICLES

Related Articles

TRENDING ARTICLES