Monday, December 23, 2024

ಸಿದ್ದರಾಮಯ್ಯ ಜಂಬ ಸೊಕ್ಕಿನ ಮಾತು ಬಿಡಬೇಕು : ಪ್ರತಾಪ್ ಸಿಂಹ

ಮೈಸೂರು: ನಂಜನಗೂಡು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಪಿಂಕ್ ನೋಟ್ ಹಂಚಿ ಗೆದ್ದು ನಾನೇ ಜಗದೇಕ ವೀರ ಅಂತಾ ಸಿದ್ದರಾಮಯ್ಯ ಬೀಗುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6 ತಿಂಗಳ ಹಿಂದೆಯೇ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿತ್ತು‌‌. ಅವರ ಸಂಸ್ಥೆ ನೌಕರರನ್ನ ಬಳಸಿಕೊಂಡು ಚೆನ್ನಾಗಿ ಕೆಲಸ ಮಾಡಿದ್ರು. ಎಂಎಲ್ಸಿ ಮರಿತಿಬ್ಬೇಗೌಡ ಕಾಂಗ್ರೆಸ್ ಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ರು. ಇದೆಲ್ಲದರ ಪರಿಣಾಮ ಕಾಂಗ್ರೆಸ್ ಗೆದ್ದಿದೆ‌ ಎಂದರು.

ಅದಲ್ಲದೇ, 2016ರಲ್ಲಿ ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರವೀಂದ್ರ ತಗೆದುಕೊಂಡಿದ್ದು ಕೇವಲ 6 ಸಾವಿರ ಮಾತ್ರ. ನಂಜನಗೂಡು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಪಿಂಕ್ ನೋಟ್ ಹಂಚಿ ಗೆದ್ದು ನಾನೇ ಜಗದೇಕ ವೀರ ಅಂತಾ ಸಿದ್ದರಾಮಯ್ಯ ಬೀಗುತ್ತಿದ್ದಾರೆ. ಚುನಾವಣೆ ಎಂದ ಮೇಲೆ ವ್ಯತ್ಯಾಸ ಆಗೋದು ಸಹಜ. ನನ್ನ ಅಣ್ಣನನ್ನು ಗೆಲ್ಲಿಸಲು ಆಗಲಿಲ್ಲ ಅನ್ನೋ ನೋವು ನನಗೂ ಇದೆ. ಎಲ್ಲಿ ತೊಂದರೆಯಾಗಿದೆ ಅನ್ನೋದನ್ನ ಸೋಲಿನ ಪರಾಮರ್ಶೆ ಮಾಡ್ತೀವಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು.

RELATED ARTICLES

Related Articles

TRENDING ARTICLES