ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಗುಂಡಿ, ಭ್ರಷ್ಟಾಚಾರ, ರಾಜಕಾಲುವೆ ಸಮಸ್ಯೆ ಮುಂತಾದ ವಿಚಾರದಿಂದ ಬೆಂಗಳೂರಿನಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಈಗ ಚುನಾವಣೆ ನಡೆದ್ರೆ, ಬಿಜೆಪಿ ಸೋತು ಬಿಡುತ್ತೆ ಎಂಬ ಚರ್ಚೆಯೂ ಶುರುವಾಗಿದೆ. ಹೀಗಾಗಿ ಬಿಬಿಎಂಪಿ ಚುನಾವಣೆಗೆ ಬಿಜೆಪಿ ಹೊಸ ಅಸ್ತ್ರ ಪ್ರಯೋಗಕ್ಕೆ ಸಿದ್ದವಾಗಿದೆ. ಅದೇ ಪ್ರಧಾನಿ ಮೋದಿ.
ಪ್ರಧಾನಿ ಮೋದಿಗೆ ರಾಜ್ಯದಲ್ಲಿ ಅವರದ್ದೇ ಆದ ಇಮೇಜ್ ಇದೆ. ಹೀಗಾಗಿ ಪ್ರಧಾನಿ ಮೋದಿ ಇದೇ ಜೂನ್ 20 ರಂದು ಬೆಂಗಳೂರಿಗೆ ಕರೆತರಲು ಬಿಜೆಪಿ ಸಮಯ ನಿಗದಿ ಮಾಡಿದೆ. ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹೆಸರಲ್ಲಿ ಸಿಲಿಕಾನ್ ಸಿಟಿಗೆ ಪ್ರಧಾನಿ ಬರುತ್ತಿದ್ದು, ಈ ವೇಳೆ ಭರ್ಜರಿ ರೋಡ್ ಶೋಗೆ ಪ್ಲಾನ್ ಮಾಡಲಾಗಿದೆ. ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣದಲ್ಲಿ ತಲಾ ಒಂದೊಂದು ರೋಡ್ ಶೋ ಏರ್ಪಡಿಸಲು ಪ್ಲ್ಯಾನ್ ಇದೆ. ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ, ಮಲ್ಲೇಶ್ವರಂನಲ್ಲಿ ಒಂದು ರೋಡ್ ಶೋ ಪ್ಲಾನ್ ಇದೆ. ವಿಜಯನಗರ, ಮಹಾಲಕ್ಷ್ಮೀ ಲೇಔಟ್, ಚಾಮರಾಜಪೇಟೆ, ಚಿಕ್ಕಪೇಟೆ, ಜಯನಗರ ಕಡೆ ಜನರನ್ನ ಸೇರಿಸಿ ಕೊಮ್ಮಗಟ್ಟದಿಂದ ನಾಗರಭಾವಿ ವರೆಗೂ ರೋಡ್ ಶೋ ನಡೆಸಲು ಚಿಂತನೆ ನಡೆದಿದೆ. ಒಟ್ಟು 12 ಕಿಲೋ ಮೀಟರ್ ಮೋದಿ ರೋಡ್ ಶೋ ಸಿದ್ದತೆಗೆ ಸೂಚನೆ ದೊರೆತಿದೆ ಎನ್ನಲಾಗುತ್ತಿದೆ.
ಜೂ. 20, 21ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ
ಜೂ. 20ರಂದು ಬೆಳಗ್ಗೆ 11.55ಕ್ಕೆ ಯಲಹಂಕ ವಾಯುನೆಲೆಗೆ ಆಗಮನ
ಅಲ್ಲಿಂದ ಮ.12.20ಕ್ಕೆ ಹೆಲಿಕಾಪ್ಟರ್‌ನಲ್ಲಿ ಕೊಮ್ಮಘಟ್ಟ ಹೆಲಿಪ್ಯಾಡ್‌ಗೆ
ಮ.12.30ರಿಂದ 1.45ರವರೆಗೆ ಸಬ್ಅರ್ಬನ್ ರೈಲು & ಲಾಜಿಸ್ಟಿಕ್ ಪಾರ್ಕ್ ಶಿಲಾನ್ಯಾಸ
ಅಲ್ಲಿಂದ ಮ. 2.30 ರಿಂದ 3.30 ರವರೆಗೆ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಉದ್ಘಾಟನೆ
ಉದ್ಘಾಟನೆ ಮಾಡಿದ ನಂತರ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಲಿದ್ದಾರೆ
ಅಲ್ಲಿಂದಲೇ 150 ಮೇಲ್ದರ್ಜೆಗೇರಿಸಲ್ಪಟ್ಟ ITI ಗಳ ಲೋಕಾರ್ಪಣೆ
ಇದ್ರ ನಡುವೆ ರೋಡ್ ಶೋಗೆ ಸಮಯ ನಿಗದಿ ಮಾಡುವಂತೆ ಪ್ರಧಾನಿ ಕಾರ್ಯಾಲಯ ಸಿಎಂಗೆ ಸೂಚಿಸಿದೆ
ಜೂನ್ 20, 21ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಜೂನ್ 20ರಂದು ಬೆಳಗ್ಗೆ 11.55ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಆಗಮಿಸಲಿದ್ದಾರೆ. ಅಲ್ಲಿಂದ ಮಧ್ಯಾಹ್ನ 12.20ಕ್ಕೆ ಹೆಲಿಕಾಪ್ಟರ್‌ನಲ್ಲಿ ಕೊಮ್ಮಘಟ್ಟ ಹೆಲಿಪ್ಯಾಡ್ಗೆ ತೆರಳಲಿದ್ದಾರೆ. ಅಲ್ಲಿ ಮಧ್ಯಾಹ್ನ 12.30ರಿಂದ 1.45ರವರೆಗೆ ಬೆಂಗಳೂರು ಸಬ್ಅರ್ಬನ್ ರೈಲು ಯೋಜನೆಗೆ ಮತ್ತು ಲಾಜಿಸ್ಟಿಕ್ ಪಾರ್ಕ್‌ಗೆ ಶಂಕುಸ್ಥಾಪನೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಲ್ಲಿಂದ ಮಧ್ಯಾಹ್ನ 2.30 ರಿಂದ 3.30 ರವರೆಗೆ ಜ್ಞಾನಭಾರತಿ ಆವರಣದಲ್ಲಿ ನಡೆಯುವ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಉದ್ಘಾಟನೆ ಮಾಡಿ, ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಅಲ್ಲಿಂದಲೇ 150 ಮೇಲ್ದರ್ಜೆಗೇರಿಸಲ್ಪಟ್ಟ ಐಟಿಐ ಗಳ ಲೋಕಾರ್ಪಣೆಗೊಳಿಸಲಿದ್ದಾರೆ. ಇದ್ರ ನಡುವೆಯೇ ರೋಡ್ ಶೋಗೆ ಸಮಯ ನಿಗದಿ ಮಾಡುವಂತೆ ಪ್ರಧಾನಿ ಕಾರ್ಯಾಲಯ ಸಿಎಂಗೆ ಸೂಚಿಸಿದೆ
ಜೂ.20ರ ಸಂಜೆ 4 ಗಂಟೆಗೆ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ
ಸಂಜೆ 5 ಗಂಟೆಗೆ ಐಐಎಸ್ ಹೆಚ್ ಎಕ್ಸಲೆನ್ಸ್ ಸೆಂಟರ್ ಲೋಕಾರ್ಪಣೆ
ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದ
ಸಂಜೆ 6.30ಕ್ಕೆ ಸುತ್ತೂರು ಮಠಕ್ಕೆ ಭೇಟಿ ನೀಡಿ ವೇದ ಪಾಠಶಾಲಾ ಕಟ್ಟಡ ಲೋಕಾರ್ಪಣೆ
ರಾತ್ರಿ 7.30 ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಂತರ ರಾತ್ರಿ 8.10ಕ್ಕೆ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ
21ರಂದು ಮೈಸೂರಿನಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಭಾಗಿ
ಇಷ್ಟೆಲ್ಲಾ ಕಾರ್ಯಕ್ರಮಗಳ ಮಧ್ಯೆ ಪ್ರಧಾನಿ ಮೋದಿಯನ್ನು ಬೆಂಗಳೂರಿಗೆ ಕರೆಸಿ ವಿವಿಧ ಕಾರ್ಯಕ್ರಮ ಆಯೋಜಿಸುವ ಪ್ಲಾನ್ ನಡೆದಿದೆ. ಈ ಮೂಲಕ ಬೆಂಗಳೂರಿಗರ ಮನಗೆಲ್ಲಲು ಬಿಜೆಪಿ ಹೊರಟಿದೆ. ಇದು ಎಷ್ಟರಮಟ್ಟಿಗೆ ಪ್ಲಸ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ