ಕಲಬುರಗಿ : ಭೀಮಾ ತೀರಾ ಈ ಹೆಸರು ಕೇಳಿದ್ರೆ ಪ್ರತಿಯೊಬ್ಬರ ಎದೆ ಒಂದು ಕ್ಷಣ ಝಲ್ಲೆನ್ನುತ್ತೆ. ಸೇರಿಗೆ ಸವ್ವಾ ಸೇರು ಎಂಬಂತೆ ಈ ನೆಲದಲ್ಲಿ ಹಗೆತನಕ್ಕೆ ಅದೆಷ್ಟೋ ಬಲಿಯಾಗಿದ್ದಾರೆ. ಇದರ ಮಧ್ಯೆ ಇದೇ ನೆಲದಲ್ಲಿ ಸಹೋದರರ ಜಮೀನು ವಿವಾದದಲ್ಲಿ ಅಮಾಯಕ ಕೆಲಸಗಾರನೋರ್ವನನ್ನ ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಲಾಗಿದೆ.
ಭೀಮಾ ತೀರವೆಂದ ಕುಖ್ಯಾತಿ ಗಳಿಸಿರೋ ಕಲಬುರಗಿ ಜಿಲ್ಲೆಯಲ್ಲಿ ರಕ್ತದ ಕೋಡಿ ಹೆಚ್ಚಾಗ್ತಿದೆ. ವ್ಯಕ್ತಿಯ ಹೆಸರು ಅಕ್ಷಯ್ ಶಿರವಾಳ ಗ್ರಾಮದವನು ಗೌರ್ (ಕೆ) ಗ್ರಾಮದ ಸಂಜಯ್ ಎಂಬಾತರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ. ಅಷ್ಟಕ್ಕೂ ಕಾಶಿನಾಥ್ ಬಂಡೆ ಎಂಬುವರ ಬಳಿ ಸಂಜಯ್ ಉಕುಳಿ ಎಂಬುವರು ಕಳೆದ ವರ್ಷ ಆರು ಎಕರೆ ಜಮೀನನ್ನ ಖರೀದಿಸಿದ್ದರು. ಆದರೆ, ಕಾಶಿನಾಥ್ ಬಂಡೆ ಜಮೀನು ಮಾರುವುದಕ್ಕೆ ಸಹೋದರರಾದ ನೀಲಪ್ಪ ಬಂಡೆ, ಹನುಮಂತ ಬಂಡೆಣ ಮಲ್ಲಪ್ಪ ಬಂಡೆ ವಿರೋಧವಿತ್ತು. ಆದರೂ ವಿರೋಧರ ಮಧ್ಯೆಯೂ ಕಾಶಿನಾಥ್ ಜಮೀನನ್ನ ಸಂಜಯ್ ಎಂಬುವರಿಗೆ ಮಾರಾಟ ಮಾಡಿದ್ದ. ವಿವಾದದಲ್ಲಿದ್ದ ಆರು ಎಕರೆ ಜಮೀನನ್ನ ಸಂಜಯ್ ಖರೀದಿ ಮಾಡಿದ್ದ ವಿಚಾರ ಪೊಲೀಸ್ ಠಾಣೆಯ ಮೇಟ್ಟಿಲೇರಿತ್ತು.. ವರ್ಷದ ಹಿಂದೆ ರಾಜೀಯಾದರು ಸಹ, ಜಮೀನು ಖರೀದಿ ಮಾಡಿದ್ದ ಸಂಜಯ್ ಮೇಲೆ ಕೊತಕೊತ ಕುದಿಯುತ್ತಿದ್ದ ಕಾಶಿನಾಥ್ ಬಂಡೆ ಸಹೋದರರು, ಹೇಗಾದರೂ ಮಾಡಿ ಸಂಜಯ್‌ಗೆ ಗತಿ ಕಾಣಿಸಬೇಕೆಂದು ಸ್ಕೆಚ್ ಹಾಕಿ ಮಾರಕಾಸ್ತ್ರಗಳ ಸಮೇತ ಜಮೀನಿಗೆ ಬಂದಿದ್ದಾರೆ. ಆದರೆ, ಈ ವೇಳೆ ಜಮೀನಿನಲ್ಲಿದ್ದ ನೇಮಣ್ಣ ಬಂಡೆಯ ಟಿನ್‌ಶೆಡ್ ತೆರವುಗೊಳಿಸುವ ವೇಳೆ, ಅಕ್ಷಯ್ ಮತ್ತು ರಮೇಶ್ ಮೇಲೆ ನೀಲಪ್ಪ ಬಂಡೆಣ ಹನುಮಂತ ಬಂಡೆ ಮತ್ತು ಮಲ್ಲಪ್ಪ ಬಂಡೆ ಸೇರಿಕೊಂಡು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿ ಮಾಡ್ತಿದ್ದಂತೆ ರಮೇಶ್ ಪರಾರಿಯಾದ್ರೆ, ಇತ್ತ ಅಕ್ಷಯ್ ತಲೆ ಮೇಲೆ ಕಲ್ಲು ಎತ್ತಿಹಾಕಿ ತಲವಾರ್‌ನಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ.
ತಾನು ಖರೀದಿ ಮಾಡಿದ ಜಮೀನಲ್ಲಿನ ಟಿನ್‌ಶೆಡ್ ತೆರವು ಮಾಡಿಕೊಳ್ಳುವಂತೆ ನೇಮಣ್ಣನಿಗೆ ಕಾಶಿನಾಥ್ ಹೇಳಿದ್ದಾನೆ.. ಆದರೆ ಅದಕ್ಕೆ ಲೇಬರ್ ಚಾರ್ಜ್ ಹತ್ತು ಸಾವಿರ ರೂಪಾಯಿ ಹಣ ಬೇಕಾಗುತ್ತೆ ಅಂತಾ ನೇಮಣ್ಣ ಹೇಳಿದ್ದಾನೆ. ಆದರೆ, ಸಂಜಯ್ ಹಣ ಕೊಡಲು ಹೋಗದೇ ಹತ್ತು ಸಾವಿರ ಹಣವನ್ನ ರಮೇಶ್ ಎಂಬಾತನಿಗೆ ಕೊಟ್ಟು ನೇಮಣ್ಣಗೆ ಕೊಡುವಂತೆ ಹೇಳಿದ್ದಾನೆ. ಅದರಂತೆ ರಮೇಶ್ ಮತ್ತು ಅಕ್ಷಯ್ ಸೇರಿಕೊಂಡು ಹಣ ಕೊಡಲು ಜಮೀನಿಗೆ ಬಂದಿದ್ದಾರೆ. ಈ ವೇಳೆ ಸಂಜಯ್ ಮೇಲಿನ ಸಿಟ್ಟಿಗೆ ನೀಲಪ್ಪ ಬಂಡೆ, ಹನುಮಂತ ಬಂಡೆ ಮತ್ತು ಮಲ್ಲಪ್ಪ ಬಂಡೆ ಸೇರಿಕೊಂಡು ರಮೇಶ್ ಮತ್ತು ಅಕ್ಷಯ್ ಮೇಲೆ ತಲವಾರ್ ಮತ್ತು ಕಬ್ಬು ಕಡಿಯುವ ಆಯುಧದಿಂದ ಹಲ್ಲೆ ಮಾಡಿದ್ದಾರೆ..
ಅದೇನೇ ಇರಲಿ ಸಹೋದರರ ಜಮೀನು ವಿವಾದದಲ್ಲಿ ಕೆಲಸ ಮಾಡುವ ಅಮಾಯಕ ಅಕ್ಷಯ್ ಬರ್ಬರವಾಗಿ ಹತ್ಯೆಯಾಗಿದ್ದು, ಗಂಡನನ್ನ ಕಳೆದುಕೊಂಡ ಪತ್ನಿ ಮತ್ತು ತಂದೆ ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ.
ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ