Sunday, January 19, 2025

ಇಂದಿನ ಪಂದ್ಯ ಗೆಲ್ಲುತ್ತಾ ಭಾರತ..?

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟಿ-20 ಪಂದ್ಯಗಳನ್ನು ಸೋತು ಮೂರನೇ ಕದನದಲ್ಲಿ ಗೆಲುವಿನ ಲಯಕ್ಕೆ ಮರಳಿರುವ ಭಾರತ ತಂಡ ಇದೀಗ ನಾಲ್ಕನೇ ಪಂದ್ಯಕ್ಕೆ ಸಜ್ಜಾಗಿದೆ. ಇಂದು ರಾಜ್​​ಕೋಟ್​​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾರತ- ದಕ್ಷಿಣ ಆಫ್ರಿಕಾ ನಡುವೆ ನಾಲ್ಕನೇ ಪಂದ್ಯ ನಡೆಯಲಿದೆ.

ದಕ್ಷಿಣ ಆಫ್ರಿಕಾ ಈಗಾಗಲೇ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು , ಉಳಿದಿರುವ ಎರಡರಲ್ಲಿ ಒಂದು ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಆದರೆ, ರಿಷಭ್ ಪಂತ್ ಪಡೆಗೆ ಬಾಕಿ ಇರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕು.

ಸತತ 2 ಸೋಲುಗಳ ಹೊರತಾಗಿಯೂ 3ನೇ ಪಂದ್ಯದಲ್ಲಿ ಬದಲಾವಣೆ ಇಲ್ಲದ ತಂಡವನ್ನು ಕಣಕ್ಕಿಳಿಸಿ ಯಶಸ್ಸು ಕಂಡ ಭಾರತ, ಈ ಬಾರಿ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಆಡಿದ 3 ಪಂದ್ಯಗಳಲ್ಲೂ ವಿಕೆಟ್ ಖಾತೆ ತೆರೆಯಲು ವಿಫಲರಾಗಿರುವ ವೇಗಿ ಆವೇಶ್ ಖಾನ್ ಬದಲಿಗೆ ಅರ್ಷದೀಪ್ ಸಿಂಗ್ ಅವಕಾಶ ಗಿಟ್ಟಿಸಿಕೊಳ್ಳಬಹುದು.

RELATED ARTICLES

Related Articles

TRENDING ARTICLES