Monday, December 23, 2024

‘ಫರ್ನಿಚರ್​ ಎಕ್ಸ್​​ಪೋ’ಗೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ

ಬೆಂಗಳೂರು: ‘ನಮ್ಮ ಬೆಂಗಳೂರು ಫರ್ನಿಚರ್​ ಎಕ್ಸ್​​ಪೋ 2022’ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಪವರ್​ ಟಿವಿ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದು, ಇಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಅಲ್ಲದೇ ಸ್ಯಾಂಡಲ್​ವುಡ್​​ನ ಪ್ರತಿಭಾನಿತ್ವ ನಟ, ನಿರ್ಮಾಪಕ ಡಾಲಿ ಧನಂಜಯ್​ ಅವರು ಸಹ ಆಗಮಿಸಿ ಫರ್ನಿಚರ್​ ಎಕ್ಸ್​​ಪೋಗೆ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ಪವರ್​ ಟಿವಿ ಎಂಡಿ ರಾಕೇಶ್​​ ಶೆಟ್ಟಿ ಸೇರಿದಂತೆ ಚಾನಲ್​ನ ಎಲ್ಲಾ ಪ್ರಮುಖ ಸಿಬ್ಬಂದಿಗಳು ಭಾಗಿವಹಿಸಿದ್ದರು.

ಇನ್ನು ಈ ಎಕ್ಸ್​​ಪೋ ಜೂನ್​ 17, 18, 19, 20ರವರೆಗೆ ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದು.

RELATED ARTICLES

Related Articles

TRENDING ARTICLES