Sunday, January 19, 2025

ಬೆಳ್ಳಂ ಬೆಳಗ್ಗೆ ಭ್ರಷ್ಟರಿಗೆ ಬಿಗ್​ ಶಾಕ್​..!

ಬಾಗಲಕೋಟೆ : ಬೆಳ್ಳಂಬೆಳಿಗ್ಗೆ ಅಧಿಕಾರಿಗೆ ಎಸಿಬಿ ಶಾಕ್ ನೀಡಿದ್ದು, ನಿಮಿ೯ತಿ ಕೇಂದ್ರದ ಯೋಜನಾಧಿಕಾರಿ ಶಂಕರಲಿಂಗ ಗೂಗಿ ಮನೆ ಮೇಲೆ ದಾಳಿ ಮಾಡಿದೆ.

ನಗರದಲ್ಲಿಂದು ಎಸಿಬಿ ಡಿವೈಎಸ್ಪಿ ಸುರೇಶ ರೆಡ್ಡಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಬಾಗಲಕೋಟೆಯ ನವನಗರದ 55ನೇ ಸೆಕ್ಟರ್ ನಲ್ಲಿರೋ ಮನೆ. ವಿದ್ಯಾಗಿರಿಯ ನಿಮಿ೯ತಿ ಕೇಂದ್ರದ ಕಚೇರಿ ಮೇಲೂ ದಾಳಿ ಮಾಡಿ ಪರಿಶೀಲನೆಯನ್ನು ಮಾಡಿದ್ದಾರೆ. ಶಂಕರಲಿಂಗ ಅವರ ಅಸೋಸಿಯೇಟ್ 3 ಜನರ ಮನೆ ಮೇಲೂ ದಾಳಿ ಮಾಡಲಾಗಿದ್ದು, ಶಂಕರಲಿಂಗ ಅಸೋಸಿಯೇಟ್ ದೇಸಾಯಿ, ಹಿರೇಮಠ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಧಾರವಾಡದಲ್ಲಿರುವ ಗಣೇಶ ಎಂಬುವವರ ಮನೆ ಮೇಲೂ ದಾಳಿ ಮಾಡಲಾಗಿದ್ದು, ದಾಳಿ ವೇಳೆ ಆಸ್ತಿ ಕಾಗದ ಪತ್ರಗಳು, ನಗದು ಸೇರಿ ವಶಕ್ಕೆ ಪಡೆದು ಪರಿಶೀಲನೆಯನ್ನು ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES