ಬೆಂಗಳೂರು: ಆಸ್ತಿ ತೆರಿಗೆ ಸೋರಿಕೆ ತಟ್ಟೆಗಟ್ಟಲು ಹೊಸ ಪ್ರಯೋಗ ಮಾಡಲಾಗಿದ್ದು, ಆಸ್ತಿ ತೆರಿಗೆ ವಂಚಿತ ಕಟ್ಟಡಗಳನ್ನ ಡ್ರೋನ್ ಮೂಲಕ ಸರ್ವೆ ಮಾಡಲಾಗಿದೆ.
ಪ್ರಾಯೋಗಿಕವಾಗಿ ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡಗಳನ್ನು ಸರ್ವೆ ಮಾಡಲಾಗಿದ್ದು, ನೂರು ಕಟ್ಟಡಗಳ ಸರ್ವೆಯಲ್ಲಿ 35 ಕಟ್ಟಡಗಳಿಂದ ತೆರಿಗೆ ವಂಚನೆ ಬಯಲಾಗಿದೆ. ಕಟ್ಟಡಗಳ ಸುಳ್ಳು ಮಾಹಿತಿ ನೀಡಿ ಬಿಬಿಎಂಪಿ ಗೆ ಕೋಟ್ಯಾಂತರ ರೂ ತೆರಿಗೆ ವಂಚನೆ ಮಾಡಲಾಗಿದ್ದು, ಖಾಲಿ ಜಾಗ, ಕಟ್ಟಡ, ಸ್ವಂತಕ್ಕೆ ಬಳಕೆ,ಎಸಿ ಇಲ್ಲ. ಎಂದು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ.
ಅದಲ್ಲದೇ, ನೀಡಿರೋದರ ಜೊತೆ ಅಳತೆಯಲ್ಲಿ ಕಡಿಮೆ ತೋರಿಸುವುದು. ಹೀಗೆ ಹಲವು ಸುಳ್ಳು ಮಾಹಿತಿ ನೀಡಿದ ಕಟ್ಟಡ ಮಾಲೀಕರ ಬಂಡವಾಳ ಡ್ರೋನ್ ಸರ್ವೆ ಮೂಲಕ ಬಯಲು ಮಾಡಲಾಗಿದ್ದು, ಡ್ರೋನ್ ಸರ್ವೆ ನಂತರ ಬಯಲಾಯ್ತು ಕಟ್ಟಡ ಮಾಲೀಕರ ತೆರಿಗೆ ವಂಚನೆ. ಈಗಾಗಲೆ ಕಟ್ಟಡಗಳ ಪರಿಶೀಲನೆ ಮಾಡಿ ಮಾಲೀಕರಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ಆಸ್ತಿ ತೆರಿಗೆ ವಂಚಿತ ಮಾಲೀಕರಿಗೆ ಬಿಬಿಎಂಪಿ ಯಿಂದ ಖಡಕ್ ನೋಟೀಸ್ ನೀಡಿದ್ದಾರೆ. ಕೂಡಲೇ ವಂಚಿತ ತೆರಿಗೆಯನ್ನು ಪವಾತಿಸಿ ಇಲ್ಲವದ್ರೆ ಕಾನೂನು ಅಡಿ ಕೇಸ್ ದಾಖಲಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.