Monday, December 23, 2024

BBMP ವಾರ್ಡ್​ಗಳ ಸಂಖ್ಯೆ ಏರಿಕೆ ಮಾಡಿದ್ದಾಯ್ತು: ವಲಯಗಳ‌ ಸಂಖ್ಯೆ ಹೆಚ್ಚಳಕ್ಕೆ ನಿರ್ಧಾರ

ಬೆಂಗಳೂರು: ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ ಏರಿಕೆ ಮಾಡಿದ್ದಾಯಿತು ಇದೀಗ ವಲಯಗಳ‌ ಸಂಖ್ಯೆಯಲ್ಲಿ ಹೆಚ್ಚಳ ಕ್ಕೆ ನಿರ್ಧಾರ ಮಾಡಲಾಗಿದೆ.

ಸರ್ಕಾರಕ್ಕೆ ಸಲ್ಲಿಕೆಯಾದ ವಾರ್ಡ್ ಮರುವಿಂಗಡಣಾ ವರದಿ ಹಾಗೂ ವಲಯಗಳ ಸಂಖ್ಯೆ ಹೆಚ್ಚಳದ ವರದಿ 198 ವಾರ್ಡ್ ಗಳನ್ನು 243ಕ್ಕೆ ಏರಿಕೆ ಮಾಡಿದ್ದಾಯಿತು. ಇದೀಗ ಅದಕ್ಕೆ ತಕ್ಕಂತೆ ಈಗಿರುವ 8 ವಲಯಗಳನ್ನು 12 ವಲಯ ಮಾಡಲು ಚಿಂತನೆ ಮಾಡಿದ್ದಾರೆ. ಇನ್ಮುಂದೆ ಬಿಬಿಎಂಪಿ 10 ಇಲ್ಲವೇ 12 ವಲಯಗಳಾಗಿ ಮಾಡಲು ನಿರ್ಧಾರಿಸಿದ್ದು, ಬಿಬಿಎಂಪಿ ಕಾಯ್ದೆ 2020ರಂತೆ ವಾರ್ಡ್‌ಗಳ ಸಂಖ್ಯೆ 225-250ರೊಳಗೆ ಇರಬೇಕು ಎಂದು ಉಲ್ಲೇಖವಾಗಿದೆ. ಅದರ ಪ್ರಕಾರ ಈಗ 243 ವಾರ್ಡ್‌ಗಳನ್ನು ರಚನೆ ಮಾಡಲಾಗಿದೆ.

ಅದಲ್ಲದೇ, 12 ರಿಂದ 15 ವಲಯಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗಿದ್ದು, ವಲಯಗಳ ಸಂಖ್ಯೆ 10 ರಿಂದ 12ಕ್ಕೆ ಹೆಚ್ಚಳವಾಗುವ ಸಾಧ್ಯತೆ ಇದೆ. ದಕ್ಷಿಣ, ಪಶ್ಚಿಮ ಹಾಗೂ ಪೂರ್ವ ವಲಯಗಳಲ್ಲಿ ತಲಾ 44 ವಾರ್ಡ್‌. ಉಳಿದ ವಲಯಗಳಲ್ಲಿ ಭಾರೀ ಪ್ರಮಾಣದ ವಾರ್ಡ್. ಉಳಿದಂತೆ ವಲಯಗಳಲ್ಲಿ 20 ವಾರ್ಡ್ ಸಂಖ್ಯೆ ಮೀರಿಲ್ಲ.

ಯಾವ್ಯಾವ ವಲಯದಲ್ಲಿ ಎಷ್ಟೆಷ್ಟು ವಾಡ್೯ ಗಳಿವೆ ಅಂತ ನೋಡೋದಾದ್ರೆ ..?

ದಕ್ಷಿಣ ವಲಯ 44
ಪಶ್ಚಿಮ ವಲಯ 44
ಪೂರ್ವ ವಲಯ 44
ಬೊಮ್ಮನಹಳ್ಳಿ ವಲಯ 16
ಮಹದೇವಪುರ ವಲಯ 15
ಯಲಹಂಕ ವಲಯ 11
ರಾಜರಾಜೇಶ್ವರಿನಗರ14
ದಾಸರಹಳ್ಳಿ ವಲಯದಲ್ಲಿ 10 ವಾರ್ಡ್‌ಗಳಿವೆ…

ಇನ್ನು, ಬಿಬಿಎಂಪಿ ಕಾಯ್ದೆ 2020ರಂತೆ ವಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಸರ್ಕಾರದ ನಿರ್ಧಾರ ಮಾಡಲಾಗಿದ್ದು, ಅದಕ್ಕಾಗಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸಬೇಕಿದೆ. ವಲಯಗಳ ಗಡಿ ಗುರುತು, ಹೆಚ್ಚಳ ಅನಿವಾರ್ಯವಾಗಿದ್ದು, ಸರ್ಕಾರ ವಲಯ ಗಡಿಗುರುತು ಆಯೋಗ ಸ್ಥಾಪಿಸುವ ಬಗ್ಗೆಯೂ ಉಲ್ಲೇಖಿಸಲಾಗಿದೆ.

RELATED ARTICLES

Related Articles

TRENDING ARTICLES