Monday, December 23, 2024

ಹಣ ಮತ್ತು ಆಸ್ತಿ ಎಲ್ಲಿಂದ ಬಂತು ಅಂತ ಸಾಬೀತು ಮಾಡಬೇಕು : ಆರಗ ಜ್ಞಾನೇಂದ್ರ

ಬೆಂಗಳೂರು : ಶುದ್ದ ಆಡಳಿತವನ್ನ ನೀಡಲು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಈ ರೀತಿ ರೈಡ್ ಗಳು ಆಗುತ್ತೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 21 ಅಧಿಕಾರಿಗಳ 80 ನಿವಾಸ ಮತ್ತು ಬೇರೆ ಬೇರೆ ಕಡೆ ದಾಳಿಯಾಗಿದೆ. 350 ಕ್ಕೂ ಹೆಚ್ಚು ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದಾರೆ. ಒಟ್ಟಾರೆ ಶುದ್ದ ಆಡಳಿತವನ್ನ ನೀಡಲು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಈ ರೀತಿ ರೈಡ್ ಗಳು ಆಗುತ್ತೆ ಒಂದು ಸಾರಿ ದಾಳಿ ಆದ ಮೇಲೆ ಅಕೌಂಟ್ ಕೊಡಬೇಕಾಗುತ್ತೆ ಎಂದು ಹೇಳಿದರು.

ಅದಲ್ಲದೇ, ಅವ್ರ ಹಣ ಮತ್ತು ಆಸ್ತಿ ಎಲ್ಲಿಂದ ಬಂತು ಅಂತ ಸಾಬೀತು ಮಾಡಬೇಕಾಗುತ್ತೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ಕೋರ್ಟ್​ಗೆ ಹೋಗಲು ಅವಕಾಶ ಇದೆ. ಹೀಗಾಗಿ ವರ್ಷಾನುಗಟ್ಟಲೆ ಆಗುತ್ತೆ. ಆದರೆ ಚುರುಕು ಮುಟ್ಟಿಸುವ ಕೆಲಸ ಎಸಿಬಿಯಿಂದ ಆಗುತ್ತೆ ಎಂದರು.

ಅಗ್ನಿಪಥ್​​ಗೆ ವಿರೋಧ ಪಕ್ಷಗಳ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಭವಿಷ್ಯದಲ್ಲಿ ಎನೂ ಆಗುತ್ತೆ ಅಂತ ಇವತ್ತು ಬೆಂಕಿ ಹಚ್ಚುವ ಕೆಲಸ ಆಗಬಾರದು. ಈ ದೇಶದಲ್ಲಿ ಕೆಲವೊಂದು ವರ್ಗ ಇದೆ. ಎನು ಪರಿವರ್ತನೆ ಆಗೋಕೆ ಬಿಡಲ್ಲ. ಅವರು, ಮಾಡ್ತಾ ಇರೋ ಕೆಲಸ ಇದು. ಇನ್ನು ಜಾರಿ ಆಗಿಲ್ಲ. ತುಂಬಾ ಒಳ್ಳೆ ಯೋಜನೆ ಅದು. ಇಸ್ರೇಲ್ ಅಂತ ದೇಶಗಳಲ್ಲಿ ಯುವಕರು ಕಡ್ಡಾಯವಾಗಿ ಮಿಲಿಟರಿ ತರಬೇತಿ ಪಡೆದಿರಬೇಕು. ನಮ್ಮ ದೇಶದಲ್ಲಿ ನಾಲ್ಕು ವರ್ಷ ತರಬೇತಿ ಕೊಡ್ತೀವಿ. ಒಂದಷ್ಟು ಸೌಲಭ್ಯ ಕೊಡ್ತೀವಿ. ಇದರಿಂದ ಶೇ 25 ರಷ್ಟು ಜನರನ್ನ ಸೇನೆಗೆ ಸೇರಿಸಿಕೊಳ್ತೀವಿ. ಅದೇ ರೀತಿ ತರಬೇತಿ ಪಡೆದವರನ್ನ ಪೊಲೀಸ್ ಇಲಾಖೆಗೆ ಸೇರಿಸಿಕೊಳ್ತೀವಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES