ನವದೆಹಲಿ: ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ‘ಅಗ್ನಿಪಥ್’ ಯೋಜನೆಯನ್ನು ಉದ್ಯೋಗಾಕಾಂಕ್ಷಿಗಳು ವಿರೋಧಿಸುತ್ತಿದ್ದು, ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಿವೆ.
ಇದೀಗ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಮನೀಶ್ ತಿವಾರಿ ಅವರು, ‘ಅಗ್ನಿಪಥ್ ಯೋಜನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ‘ಅಗ್ನಿಪಥ್ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಆತಂಕಗೊಂಡಿರುವ ಯುವ ಸಮುದಾಯದ ವಿಚಾರದಲ್ಲಿ ನಾನು ಸಹಾನುಭೂತಿ ಹೊಂದಿದ್ದೇನೆ. ವಾಸ್ತವವೇನೆಂದರೆ ತಂತ್ರಜ್ಞಾನ, ಆಯುಧಗಳ ಅರಿವಿರುವ ಯುವ ಸಶಸ್ತ್ರ ಪಡೆಯ ಅಗತ್ಯ ಭಾರತಕ್ಕೆ ಇದೆ. ದೇಶದ ಸಶಸ್ತ್ರ ಪಡೆಗಳು ಉದ್ಯೋಗ ಖಾತರಿ ಕಾರ್ಯಕ್ರಮವಾಗಬಾರದು ಎಂದಿದ್ದಾರೆ.
ಇದಕ್ಕೂ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಅಗ್ನಿಪಥ’ವನ್ನು ವಿರೋಧಿಸಿದ್ದರು. ‘ಮೋದಿ ಅವರು ನಿರುದ್ಯೋಗಿ ಯುವಜನರ ಮಾತು ಕೇಳಬೇಕು. ಅಗ್ನಿಪಥದಲ್ಲಿ ನಡೆಸಿ ಅವರ ತಾಳ್ಮೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಬಾರದು ಎಂದು ತಿಳಿಸಿದರು.
I do empathise with youth who have concerns over Agnipath recruitment Process.Reality is India needs a younger armed force with lighter human footprint savvy on technology, equipped with state of art weaponry. Armed forces of Union shouldn’t be an employment guarantee programme
— Manish Tewari (@ManishTewari) June 16, 2022