Monday, December 23, 2024

ಕೋರ್ಟ್​​ ಅಂಗಳದಲ್ಲಿ ವೆಡ್ಡಿಂಗ್​ ಕಲಹಕ್ಕೆ ಟ್ಯಾಬ್ಲೆಟ್

ಸ್ಯಾಂಡಲ್​​ವುಡ್​ನಲ್ಲಿ ಕಾಮನಬಿಲ್ಲಿನಂತೆ ಮಿಂಚಿ ಮರೆಯಾಗಿದ್ದ ಬ್ಯೂಟಿ ಕ್ವೀನ್​ ಪ್ರೇಮಾ ಮತ್ತೆ ಕಂಬ್ಯಾಕ್​ ಆಗಿದ್ದಾರೆ. ಸಖತ್ ಚ್ಯೂಸಿ ರೋಲ್​ ಸೆಲೆಕ್ಟ್​ ಮಾಡ್ತಿರೋ ಚಂದನವನದ ಚೆಲುವೆ, ವೆಡ್ಡಿಂಗ್​ ಗಿಫ್ಟ್​ ಚಿತ್ರದಲ್ಲಿ ಲಾಯರ್​ ಆಗಿ ಬಣ್ಣ ಹಚ್ಚಿದ್ದಾರೆ. ಟೀಸರ್​ನಿಂದ್ಲೇ ಬೇಜಾನ್​ ಹೈಪ್​ ಕ್ರಿಯೇಟ್​ ಮಾಡಿದ್ದ ಚಿತ್ರತಂಡದಿಂದ ಟ್ರೈಲರ್ ಕೂಡ ರಿಲೀಸ್ ಆಗಿದೆ. ಸಖತ್​ ಸದ್ದು ಮಾಡ್ತಿರೋ ಟ್ರೈಲರ್​​ನ ಇಂಟ್ರೆಸ್ಟಿಂಗ್​​ ಸ್ಪೆಷಾಲಿಟಿಗಳೇನು ಗೊತ್ತಾ..?

ಕೋರ್ಟ್​​ ಅಂಗಳದಲ್ಲಿ ವೆಡ್ಡಿಂಗ್​ ಕಲಹಕ್ಕೆ ಟ್ಯಾಬ್ಲೆಟ್..!

ವೆಡ್ಡಿಂಗ್​ ಗಿಫ್ಟ್​ಗೆ ಸೂಪರ್​ ರೆಸ್ಪಾನ್ಸ್​..100% ಹಿಟ್ ಚಿತ್ರ

ವೆಡ್ಡಿಂಗ್​ ಗಿಫ್ಟ್​ ಕ್ರೈಂ ಸ್ಟೋರಿ..ಐಪಿಸಿ ಸೆಕ್ಷನ್ಸ್​ ಜಟಾಪಟಿ

ಲಾಯರ್ ಪ್ರೇಮಾಗೆ ಎದುರಾಗಿ ಅಚ್ಯುತ್​ ಸವಾಲು..!

ಕನ್ನಡದ ಬಹುನಿರೀಕ್ಷಿತ ಸಿನಿಮಾ ವೆಡ್ಡಿಂಗ್​ ಗಿಫ್ಡ್​ ಟೀಸರ್​ನಿಂದ್ಲೇ ಒಂದು ವರ್ಗದ ಜನರನ್ನು ಸೆಳೆದಿದೆ. ಸಖತ್​ ಹೈಪ್ ಕ್ರಿಯೇಟ್​ ಮಾಡಿರೋ ಕೋರ್ಟ್​ ಡ್ರಾಮಾ ಟೀಸರ್​​ ನೋಡಿದ ಮೇಲೆ ಸಿಕ್ಕಾಪಟ್ಟೆ ಕೂತೂಹಲ ಮನೆ ಮಾಡಿದೆ. ಸ್ಯಾಂಡಲ್​ವುಡ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಹಿಟ್​ ಸಿನಿಮಾ ಕೊಟ್ಟಿದ್ದ ಹಿರಿಯ ನಟಿ ಪ್ರೇಮಾ ಮೊದಲ ಬಾರಿಗೆ ಡಿಫರೆಂಟ್​ ಗೆಟಪ್​​ನಲ್ಲಿ ಮಿಂಚ್ತಿದ್ದಾರೆ. ಲಾಯರ್​ ರೋಲ್​ ನಲ್ಲಿ ಫ್ಯಾಮಿಲಿ ಹೈಡ್ರಾಮಾಕ್ಕೆ ನ್ಯಾಯ ಕೊಡಿಸಲು ಹೊರಟಿದ್ದಾರೆ.

ವೆಡ್ಡಿಂಗ್​ ಗಿಫ್ಟ್​ ಚಿತ್ರದ ಶೂಟಿಂಗ್​ ಎಲ್ಲವೂ ಕಂಪ್ಲೀಟ್​ ಆಗಿದ್ದು ಇನ್ನೇನು ಸಿಲ್ವರ್​ ಸ್ಕ್ರೀನ್​ ಮೇಲೆ ಬರೋಕೆ ತಯಾರಾಗಿದೆ. ಚಿತ್ರದ ಹಾಡುಗಳೂ ಕೂಡ ಚಿತ್ರರಸಿಕರ ಹೃದಯ ಗೆದ್ದಿವೆ. ಕೋರ್ಟ್​ ಹೈಡ್ರಾಮ ಸಖತ್​ ಸಸ್ಪೆನ್ಸ್​ ಥ್ರಿಲ್ಲಿಂಗ್​​ ಆಗಿರೋದ್ರಿಂದ, ಸಹಜವಾಗಿ ಸಿನಿಮಾ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಇದೀಗ ಚಿತ್ರತಂಡದಿಂದ ಅಫಿಶಿಯಲ್​ ಟ್ರೈಲರ್​ ರಿಲೀಸ್​ ಅಗಿದ್ದು, ಚಿತ್ರದ ಮೇಲಿನ ಕೂತೂಹಲ, ಕಾತರ ಡಬಲ್  ಆಗಿದೆ.

ಆಟೋನ ಓಡಿಸೋದ್ರಿಂದ ಹಿಡಿದು, ವಿಮಾನವನ್ನ ಹಾರಿಸೋದ್ರಲ್ಲಿ ಕೂಡ ಹೆಣ್ ಮಕ್ಕಳು ಮುಂದಿದ್ದಾರೆ. ಇದು ವೆಡ್ಡಿಂಗ್​​ ಗಿಫ್ಟ್ ಟ್ರೈಲರ್​ನ ಆರಂಭದ ಡೈಲಾಗ್​ಗಳು. ಚಿತ್ರದ ನಾಯಕನಾಗಿರೋ ವಿಲಾಸ್​ ರಾವ್​​ ಗೋಮುಖ ವ್ಯಾಘ್ರನಾಗಿ ಹೆಂಡತಿಯ ಮೇಲೆ ಹಲ್ಲೆ ಮಾಡಿರೋ ಆರೋಪದಲ್ಲಿ ಬಂಧಿಸಲಾಗುತ್ತೆ. ವಿಲಾಸ್​ಗೆ ಹೆಂಡತಿ ಹಾಗೂ ನೊಂದ ಸಂತ್ರಸ್ತೆಯಾಗಿ ನಟಿ ಸೋನು ಗೌಡ ಕಾಣಿಸಿದ್ದಾರೆ. ಒಟ್ಟಾರೆ ಇಂದಿನ ಸಮಾಜದಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯವನ್ನು ತೋರಿಸೋ ಪ್ರಯತ್ನವನ್ನು ಈ ಚಿತ್ರದಲ್ಲಿ  ಮಾಡಲಾಗಿದೆ.

ಕೋರ್ಟ್​ ಮೆಟ್ಟಿಲೇರೋ ಯಾವುದೇ ಕೇಸ್​ಗಳಿರಲಿ, ವಿಚಾರಣೆಯ ನಂತ್ರ ಸತ್ಯ ಹೊರ ಬರುತ್ತೆ. ಇಲ್ಲಿ ಕೂಡ ಅಪಾಯಕಾರಿ ಕ್ರಿಮಿನಲ್​​ ವಿಲಾಸ್​ ವಿರುದ್ಧವಾಗಿ ಲಾಯರ್​ ಅಚ್ಯುತ್​​ಕುಮಾರ್​ ವಾದ ಮಂಡಿಸುತ್ತಿದ್ದಾರೆ. ನಟಿ ಪ್ರೇಮಾ ವಿಲಾಸ್​ಗೆ ನ್ಯಾಯ ಕೊಡಿಸೋಕೆ ಸಖತ್ ಸರ್ಕಸ್​ ಪಡ್ತಿದ್ದಾರೆ. ರಾಜೇಂದ್ರ ಸಿಂಗ್​ ಬಾಬು ಬಳಿ ಅಸಿಸ್ಟೆಂಟ್​ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ವಿಕ್ರಮ್​ ಪ್ರಭು ತಮ್ಮದೇ ಬ್ಯಾನರ್​ನಲ್ಲಿ  ನಿರ್ಮಾಣದ ಜೊತೆಗೆ ಕಥೆ ಬರೆದು ವೆಡ್ಡಿಂಗ್​ ಗಿಫ್ಟ್​ ಚಿತ್ರಕ್ಕೆ ನಿರ್ದೇಶನ ಕೂಡ ಮಾಡಿದ್ದಾರೆ. ಚಿತ್ರದ ಟ್ರೈಲರ್​ ನೋಡಿದ್ರೆ ಕ್ರೈಂ ಕಥೆ ಥ್ರಿಲ್ಲಿಂಗ್​ ಎಲಿಮೆಂಟ್​​ನೊಂದಿಗೆ  ಯಾವ ಹಂತ ತಲುಪಬಹುದು ಅನ್ನೋ ಕ್ಯೂರಿಯಾಸಿಟಿ ಹುಟ್ಟುತ್ತೆ.

ನಟಿ ಸೋನು ಗೌಡ ಗೆ ಚಿತ್ರದ ಪಾತ್ರ ತುಂಬಾ ಕಾಡಿದೆಯಂತೆ. ಮೊದಲ ಬಾರಿಗೆ ವಿಭಿನ್ನ ರೋಲ್​ನಲ್ಲಿ ಅಭಿನಯಿಸ್ತಾ ಇರೋದ್ರಿಂದ ಚಿತ್ರದ ಮೇಲೆ ಸಿಕ್ಕಾಪಟ್ಟೆ ಕುತೂಹಲ ಕೂಡ ಇದೆ. ನಾಯಕ ನಿಶಾನ್​​ ಹಾಗೂ ಪವಿತ್ರಾ ಲೋಕೇಶ್​​​ ಸೇರಿದಂತೆ ಮುಂತಾದ ಕಲಾವಿದರು ಚಿತ್ರದಲ್ಲಿದ್ದಾರೆ. ಬಾಲಚಂದ್ರು ಪ್ರಭು ಮ್ಯೂಸಿಕ್​ ಕಂಪೋಸಿಂಗ್​ ಸಖತ್​ ಹಿಟ್​ ಆಗಿದೆ. ಉದಯ್​ ಲೀಲಾ ಕ್ಯಾಮರಾ ಕಣ್ಣು ಚಿತ್ರಕ್ಕೆ ಪ್ಲಸ್​ ಆಗಲಿದೆ. ಒಟ್ಟಾರೆ ಸದ್ಯದಲ್ಲೇ ಸಿಲ್ವರ್​ ಸ್ಕ್ರೀನ್​ ಮೇಲೆ ಸಸ್ಪೆನ್ಸ್​ ಥ್ರಿಲ್ಲರ್​ ಕೋರ್ಟ್​ ಹೈಡ್ರಾಮ ನೋಡಬಹುದು.

ರಾಕೇಶ್​​ ಆರುಂಡಿ, ಫಿಲ್ಮ್ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES