Monday, December 23, 2024

ಉಪಾಧ್ಯಕ್ಷ ಸ್ಥಾನಕ್ಕೆ ಕಾಮಿಡಿ ಚಿಕ್ಕಣ್ಣ ನಾಮಿನೇಷನ್​​​

ಸಿನಿಮಾದಲ್ಲಿ ಹೀರೋ ಆಗ್ತೀನಿ ಎಂದು ಕನಸಿನಲ್ಲೂ ಯೋಚಿಸಿರದ ಕನ್ನಡದ ಹಾಸ್ಯ ಕಲಾವಿದ ಇಂದು ಹೀರೋ ಆಗಿ ಮಿಂಚೋಕೆ ಸಜ್ಜಾಗಿದ್ದಾರೆ. ಅಧ್ಯಕ್ಷನಾಗಿ ಶರಣ್​ ಜೊತೆ ಕಾಮಿಡಿ ಪಂಚ್ ಮೂಲಕ ಸಿಕ್ಕಾಪಟ್ಟೆ ನಕ್ಕು ನಗಿಸಿದ್ದ ಚಿಕ್ಕಣ್ಣ ಇಂದು ಉಪಾಧ್ಯಕ್ಷನ ಸ್ಥಾನ ಅಲಂಕರಿಸಿದ್ದಾರೆ. ಯೆಸ್​​.. ಕನ್ನಡ ಸಿನಿಲೋಕದಲ್ಲಿ ಕಾಮಿಡಿ ಚಿಕ್ಕಣ್ಣನ  ಜಮಾನ ಶುರುವಾಗಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಕಾಮಿಡಿ ಚಿಕ್ಕಣ್ಣ  ನಾಮಿನೇಷನ್​​​..!

ಹೀರೋ ಪಟ್ಟಕ್ಕೇರಿದ ಕರುನಾಡಿನ ಮನೆಮಗ ಚಿಕ್ಕಣ್ಣ

ಪ್ರೀತಿಯ ಮಗನ ಚಿತ್ರಕ್ಕೆ ಕ್ಲಾಪ್​​ ಮಾಡಿದ ನಿಂಗಮ್ಮ..!

ನಿರ್ಮಾಪಕ ಉಮಾಪತಿಯ ಕನಸಿಗೆ ಚಿಕ್ಕಣ್ಣ ಸಾಥ್​​​

ಲೇಟ್​ ಆದ್ರೂ ಲೇಟೆಸ್ಟ್​ ಆಗಿ ಸ್ಯಾಂಡಲ್​ವುಡ್​ಗೆ ಹೀರೋ ಆಗಿ ಗ್ರ್ಯಾಂಡ್​ ಎಂಟ್ರಿ ಕೊಟ್ಟಿದ್ದಾರೆ ಚಿಕ್ಕಣ್ಣ. ರಾಜಾಹುಲಿ, ಅಧ್ಯಕ್ಷ ಸಿನಿಮಾಗಳ ನಂತ್ರ ನಾಯಕನಾಗಿ ಅನೇಕ ಆಫರ್​ಗಳು ಬಂದ್ರೂ ಕೂಡ ನಯವಾಗಿ ರಿಜೆಕ್ಟ್​ ಮಾಡಿದ್ದ ಚಿಕ್ಕಣ್ಣ ಕೊನೆಗೂ ಹೀರೋ ಪಟ್ಟಕ್ಕೇರಿದ್ದಾರೆ. ಕನ್ನಡಿಗರನ್ನು ತಮ್ಮ ವಿಭಿನ್ನ ಶೈಲಿಯ ಮ್ಯಾನರಿಸಂ ಮೂಲಕ ನಕ್ಕು ನಗಿಸುತ್ತಿದ್ದ ಚಿಕ್ಕಣ್ಣನ ಉಪಾದ್ಯಕ್ಷ ಚಿತ್ರಕ್ಕೆ ಇಂದು ಅದ್ಧೂರಿ ಮೂಹೂರ್ತ  ನೆರವೇರಿದೆ.

ಕನ್ನಡದ ಬಹುತೇಕ ಎಲ್ಲಾ ಸ್ಟಾರ್​ಗಳ ಜೊತೆ ನಟಿಸಿರೋ ಚಿಕ್ಕಣ್ಣ ಬಹುಬೇಡಿಕೆಯ ಕಾಮಿಡಿಯನ್​ ಕೂಡ ಹೌದು. ಸಾಲು ಸಾಲು ಸಿನಿಮಾಗಳಲ್ಲಿ ಸಖತ್​ ಬ್ಯುಸಿ  ಇರೋ ಚಿಕ್ಕಣ್ಣನ ಕಾಲ್​ ಶೀಟ್​ ಸಿಗೋಕೆ ನಿರ್ಮಾಪಕರು ಪರದಾಡಬೇಕು. ಆ ಲೆವೆಲ್​​ಗೆ ಸ್ಟಾರ್​ಡಮ್​ ಹುಟ್ಟುಹಾಕಿರೋ ಚಿಕ್ಕಣ್ಣ ಕೊನೆಗೂ ಹೀರೋ ಆಗೋ ಮೂಲಕ ಅಭಿಮಾನಿಗಳಿಗೆ ಗುಡ್​ ನ್ಯುಸ್​ ಕೊಟ್ಟಿದ್ದಾರೆ.

ಕೊರೋನ ಹೆಮ್ಮಾರಿ ಶುರುವಾಗಿನಿಂದ ಚಿಕ್ಕಣ್ಣ ಹೀರೋ ಆಗಿ ಅಭಿನಯಿಸ್ತಾರೆ ಅನ್ನೋ ಸುದ್ಧಿ ಗಾಂಧೀನಗರದಲ್ಲಿ ಸದ್ದು ಮಾಡ್ತಾ ಇತ್ತು. ಇದೀಗ ನಿರ್ಮಾಪಕ ಉಮಾಪತಿಯವರ  ಕನಸಿನಂತೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಯಾಂಡಲ್​ವುಡ್​ ಸ್ಟಾರ್​ಗಳ ಸಮ್ಮುಖದಲ್ಲಿ ಚಿಕ್ಕಣ್ಣ ನಾಮಿನೇಷನ್​ ಸಲ್ಲಿಸಿದ್ದಾರೆ. ನಗರದ ಬನಶಂಕರಿ ದೇವಾಸ್ಥಾನದಲ್ಲಿ ಪೂಜೆ ಪುನಸ್ಕಾರಗಳೊಂದಿಗೆ ಅದ್ಧೂರಿ ಮೂಹೂರ್ತ ನೆರವೇರಿದೆ. ಉಮಾಪತಿಯವರ ಹೆಂಡತಿ ಸ್ವಪ್ನಾ ಹಾಗೂ ಚಿಕ್ಕಣ್ಣ ತಾಯಿ ನಿಂಗಮ್ಮ ಕ್ಲಾಪ್​ ಮಾಡುವ ಜೊತೆಗೆ ಕ್ಯಾಮೆರಾ ಸ್ವಿಚ್​ ಆನ್ ಮಾಡಿ ಶುಭ ಹಾರೈಸಿದ್ದಾರೆ.

ಉಮಾಪತಿ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಆಗ್ತಿರೋ ಉಪಾಧ್ಯಕ್ಷ ಚಿತ್ರದ ಮೂಹೂರ್ತಕ್ಕೆ  ಸಾಧುಕೋಕಿಲ, ಕರಿಸುಬ್ಬು, ಗರುಡ ರಾಮ್​​ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಇದ್ರ ಜೊತೆಗೆ ಸಾಧುಕೋಕಿಲ ಮಾತನಾಡಿ, ಈ ಸಿನಿಮಾದಲ್ಲಿ ನಾನು ಕೂಡ ಚಿಕ್ಕ ಪಾತ್ರದಲ್ಲಿ ನಟಿಸ್ತಾ ಇದ್ದೇನೆ. ಚಿಕ್ಕಣ್ಣ ಅವರಿಗೆ ಒಳ್ಳೇದ್​ ಆಗಲಿ ಎಂದ್ರು.

ಉಪಾಧ್ಯಕ್ಷ ಚಿತ್ರಕ್ಕೆ ನಾಯಕಿಯಾಗಿ ಮೊದಲ ಬಾರಿಗೆ ಮಲೈಕಾ ನಟಿಸ್ತಿದ್ದಾರೆ. ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡೋಕೆ ಉಮಾಪತಿ ಮುಂದಾಗಿದ್ದಾರೆ. ನಿರ್ದೇಶಕ ಅನಿಲ್​ಕುಮಾರ್​​ ಉಪಾಧ್ಯಕ್ಷನಿಗೆ ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ. ಒಟ್ಟಾರೆ ಕಾಮಿಡಿಯನ್​ ಆಗಿ ಎಲ್ಲರ ಹೃದಯ ಗೆದ್ದಿರೋ ಚಿಕ್ಕಣ್ಣ ಹೀರೋ ಆಗಿ ಸಕ್ಸಸ್​ ಆಗಲಿ ಅಂತಾ ಶುಭ ಹಾರೈಸೋಣ.

ರಾಕೇಶ್​ ಅರುಂಡಿ, ಫಿಲ್ಮ್ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES