ಬೆಂಗಳೂರು: ಬೆಳಗಾವಿ ಶಿಕ್ಷಕರ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಗೆದ್ದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.
ಇಂದು ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲ ರೌಂಡ್ನಲ್ಲೇ ಕೋಟಾ ರೀಚ್ ಆಗಿ ಗೆದ್ದಿದ್ದಾರೆ. ಅಲ್ಲಿ ಎರಡು ಬಾರಿ ಬಿಜೆಪಿಯ ಅರುಣ್ ಶಹಪೂರ್ ಗೆದ್ದಿದ್ರು. ಬಿಜೆಪಿ ಅಭ್ಯರ್ಥಿಯನ್ನ ಸೋಲಿಸಿ ಪ್ರಕಾಶ್ ಹುಕ್ಕೇರಿ ಗೆದ್ದಿದ್ದಾರೆ. ಬೆಳಗಾವಿ, ಬಿಜಾಪುರ, ಬಾಗಲಕೋಟೆಯ ಉಪಾಧ್ಯಾಯ ಶಿಕ್ಷಕರಿಗೆ ಧನ್ಯವಾದ ಹೇಳ್ತೇನೆ. ಸತೀಶ್ ಜಾರಜಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಎಲ್ಲರಿಗೂ ಧನ್ಯವಾದ ಹೇಳ್ತೇನೆ. ಎಂ.ಬಿ ಪಾಟೀಲ್, ಜಿಲ್ಲಾಧ್ಯಕ್ಷರು ಹೋರಾಟ ಮಾಡಿ ಗೆಲ್ಲಿಸಿದ್ದಾರೆ ಎಂದರು.
ಇನ್ನು ಹೊರಟ್ಟಿ ಜೆಡಿಎಸ್ನಿಂದ ಹೋಗಿ ಬಿಜೆಪಿಯಿಂದ ಗೆದ್ದಿದ್ದಾರೆ. ಅಲ್ಲೂ ನಮ್ಮ ಅಭ್ಯರ್ಥಿಗೆ ಒಳ್ಳೆಯ ಮತ ಕೊಟ್ಟು ಬೆಂಬಲಿಸಿದ್ದಾರೆ. ಟೀಚರ್ಸ್, ಗ್ರಾಜ್ಯುಯೇಟ್ಸ್ ಬದಲಾವಣೆ ಬಯಸಿದ್ದಾರೆ. ಬಿಜೆಪಿಯವರು ಪಾಪ ನಾಲ್ಕೂ ಸ್ಥಾನ ಗೆಲ್ತೀವಿ ಎಂದುಕೊಂಡಿದ್ರು ಸ್ವತಃ ಮುಖ್ಯಮಂತ್ರಿಗಳೇ ಹೋಗಿ ಪ್ರಚಾರ ಮಾಡಿದ್ರು ನಮಗೆ ಸಂಪನ್ಮೂಲ ಇಲ್ಲದಿದ್ರೂ ಗೆದ್ದಿದ್ದೇವೆ. ಈ ಫಲಿತಾಂಶ ಮುಂದಿನ ಚುನಾಚಣೆ ದಿಕ್ಸೂಚಿ ಅಂತಾ ಹೇಳಲ್ಲ. ಆದರೆ, ಕಾಂಗ್ರೆಸ್ ಪರ ಅಲೆ ಇದೆ. 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ನುಡಿದರು.
ಸದ್ಯ ನಮ್ಮ ಅಭ್ಯರ್ಥಿ ಪದವೀಧರರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದ್ದಾರೆ. ಮಧು ಜಿ ಮಾದೇಗೌಡ ಗೆಲುವಿಗೆ ಸಂಘಟಿತ ಹೋರಾಟ ಕಾರಣ. ನಾಲ್ಕೂ ಜಿಲ್ಲೆಯ ಪದವೀಧರ ಮತದಾರರು ಮತ ಕೊಟ್ಟಿದ್ದಾರೆ. ನಮ್ಮ ಮುಖಂಡರಿಗೆ, ಕಾರ್ಯಕರ್ತರಿಗೆ ಧನ್ಯವಾದ ಹೇಳ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಅಲ್ಲದೇ, ವಿಧಾನ ಪರಿಷತ್ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಆಗಿದೆ. ಮೈಸೂರಿನಲ್ಲಿ ಎಲಿಮಿನೇಶನ್ ಪ್ರೊಸೆಸ್ಗೆ ಹೋಗಿತ್ತು. ನಮ್ಮ ಅಭ್ಯರ್ಥಿ ಮಧು ಜಿ. ಮಾದೇಗೌಡ 12,205 ಮತಗಳ ಅಂತರದಿಂದ ಜಯ ಆಗಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ವಿ ರವಿಶಂಕರ್ ಪರಾಭವಗೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿಗೆ ಕೇವಲ 19,630 ಮತ. ಕಳೆದ ಎರಡು ಬಾರಿ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ರು ಈ ಬಾರಿ ಸೋಲ್ತೀನಿ ಅಂತಾ ಶ್ರೀಕಂಠೇಗೌಡ ನಿಲ್ಲಿಲ್ಲ, ದಕ್ಷಿಣ ಪದವೀಧರ ಕ್ಷೇತ್ರದಿಂದ ನಾವು ಗೆದ್ದೇ ಇರಲಿಲ್ಲ, ಫಸ್ಟ್ ಟೈಮ್ ಗೆದ್ದಿದ್ದೇವೆ. ಜೆಡಿಎಸ್ ಭದ್ರಾಕೋಟೆ ಅಂತಿದ್ರು, ಬಿಜೆಪಿಯವರು ಕೂಡ ಭದ್ರಾಕೋಟೆ ಅಂತಿದ್ರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು.