ಚಿಕ್ಕಬಳ್ಳಾಪುರ: ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ ಆದ್ರೆ ಸಂದರ್ಭ ಮುಖ್ಯ. ಹೈಕೋರ್ಟ್ ಫ್ರೀಡಂ ಪಾರ್ಕ್ನಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರತಿಭಟಿಸಲು ತಿಳಿಸಿದೆ. ಆದರೆ, ಕಾಂಗ್ರೆಸ್ನವರು ಎಲ್ಲಾ ರಸ್ತೆಗಳಲ್ಲಿ ಹಾದಿಬೀದಿ ರಂಪಾಟ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಹೇಳಿದರು.
ಕಾಂಗ್ರೆಸ್ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ದೇಶದಲ್ಲಿ ಕೋವಿಡ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಕಡಿವಾಣ ನನ್ನ ಕರ್ತವ್ಯ. ಆರೋಗ್ಯ ಸಚಿವನಾಗಿ ರಾಜ್ಯದ ಜನರ ಆರೋಗ್ಯ ಕಾಪಾಡೋದು ನನ್ನ ಪ್ರಥಮ ಕೆಲಸ. ಎರಡನೇ ಅಲೆಯಲ್ಲಿ ಕೋವಿಡ್ ಹೆಚ್ಚಾದಾಗ ಸರ್ಕಾರದ ವಿರುದ್ದ ಟೀಕೆ ಮಾಡಿರಲಿಲ್ವಾ(?) ಈಗ ನಾಳೆ ಹೆಚ್ಚು ಕಡಿಮೆ ಆದರೆ ಯಾರು ತಲೆಗೆ ಬರುತ್ತೆ(?) ಯಾರು ಜವಾಬ್ದಾರಿ(?) ಸಿದ್ದರಾಮಯ್ಯ, ಹರಿಪ್ರಸಾದ್, ಡಿ.ಕೆ ಶಿವಕುಮಾರ್ ಜವಾಬ್ದಾರಿ ಅಲ್ಲ. ಸುಧಾಕರ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರದ್ದೇ ಜವಾಬ್ದಾರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಜನ ಕಾಂಗ್ರೆಸ್ನ ಪ್ರತಿಭಟನೆಗಳನ್ನ ನೋಡುತ್ತಿದ್ದರೆ ಕಾಂಗ್ರೆಸ್ನಿಂದ ಪ್ರಜಾಪ್ರಭುತ್ವ ಕಗ್ಗೊಲೆ. ತನಿಖಾ ಸಂಸ್ಥೆಗಳನ್ನ ಯಾರನ್ನ ವಿಚಾರಣೆಗ ಕರೆಯಬಾರದು ಅಂತ ಪ್ರತಿಭಟನೆ. ನಾಳೆ ದಿನ ಯಾರೂ ಸಹ ಕಾನೂನಿಗೆ, ಸಂವಿಧಾನಕ್ಕೆ ಗೌರವ ಕೋಡೋದಿಲ್ಲ. ಕಾಂಗ್ರೆಸ್ನವರೇ ನೀವು ಮಾಡ್ತಿರೋದು ಸರಿಯಿದೆಯಾ ಆತ್ಮ ವಿಮರ್ಶೆ ಮಾಡಿಕೊಳ್ಳಿ. ದೆಹಲಿಯಿಂದ ಬೆಂಗಳೂರಿನವರೆಗೂ ಏನ್ ಮಾಡ್ತಿದ್ದಾರೆ ಜನ ಗಮನಿಸುತ್ತಿದ್ದಾರೆ ಎಂದು ಸಚಿವ ಸುಧಾಕರ್ ಅವರು ಹೇಳಿದರು