Monday, December 23, 2024

ಇಂದಿನಿಂದ ಮೋದಿಯ 2 ದಿನಗಳ ಪ್ರವಾಸ ಆರಂಭ

ಹಿಮಾಚಲ ಪ್ರದೇಶದ ಧರ್ಮಾಶಾಲಾಗೆ ಭೇಟಿ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಪ್ರವಾಸವನ್ನು ಇಂದು ಆರಂಭಿಸಿದ್ದಾರೆ.

ಧರ್ಮಶಾಲಾದ ಪೊಲೀಸ್​​ ಸ್ಟೇಡಿಯಂನಲ್ಲಿ ವಿಶೇಷವಾಗಿ ರಚಿಸಲಾದ ಹೆಲಿಪ್ಯಾಡ್​ಗೆ ಮೋದಿ ಆಗಮಿಸಲಿದ್ದು, ಅಲ್ಲಿ ರಾಜ್ಯದ ರಾಜ್ಯಪಾಲರು, ಸಿಎಂ ಮತ್ತು ಕೇಂದ್ರ ಸಚಿವ ಅನುರಾಗ್​​ ಠಾಕೂರ್​​​​ ಅವರನ್ನು ಸ್ವಾಗತಿಸಲಿದ್ದಾರೆ.

ಪ್ರಧಾನಿ ಭೇಟಿಗೂ ಮುನ್ನ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಂ ಠಾಕೂರ್​​​ ಬುಧವಾರ ಭೇಟಿಯ ಸಿದ್ಧತೆಗಳನ್ನು ಪರಿಶೀಲಿಸಿದರು. ಮುಖ್ಯಮಂತ್ರಿಗಳು ಪರೀಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ, ಶಿಷ್ಟಾಚಾರದ ಪ್ರಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

RELATED ARTICLES

Related Articles

TRENDING ARTICLES