ಚಿತ್ರದುರ್ಗ: ಕಾನೂನು ಗೌರವಿಸುವುದು ಎಲ್ಲರ ಕರ್ತವ್ಯ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಗುರುವಾರ ಹೇಳಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವಿಚಾರಣೆ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯನ್ನು ಇಡಿ ವಿಚಾರಣೆ ಮಾಡುತ್ತಿದೆ. ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದು ಪರಮಾವಧಿಯ ಮುರ್ಖತನ ಎಂದು ಕಾಂಗ್ರೆಸ್ ನಡವಳಿಕೆಯನ್ನು ಅವರು ಟೀಕಿಸಿದರು.
ಇನ್ನು ಈ ದೇಶದಲ್ಲಿ ಕಾನೂನಿಗೆ ಗೌರವ ಬೇಡ್ವಾ(?) ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ತಪ್ಪು ಮಾಡಿಲ್ಲಾಂದ್ರೆ ವಿಚಾರ ಮಾಡಬಾರದು ಅಂದ್ರೆ ಹೇಗೆ(?) ವಿಚಾರಣೆ ಮಾಡುವುದು ತಪ್ಪು ಅನ್ನೊದಾದರೆ ಕಾನೂನು ಯಾಕೆ ಬೇಕು(?) ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದನ್ನು ಪ್ರತಿಭಟಿಸುವುದು ಉದ್ದಟತನ. ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬಿಜೆಪಿ ದೂರು ಕೊಟ್ಟಿಲ್ಲ, ಸರ್ಕಾರ ಇದೆ. ವಿಚಾರಣೆ ಮಾಡುತ್ತಿದೆ ಎಂದು ಸಚಿವ ಬಿಸಿ ಪಾಟೀಲ್ ಅವರು ಪ್ರಶ್ನೆ ಮಾಡಿದರು.