ಕೆಜಿಎಫ್ ಸಿನಿಮಾ ನಂತ್ರ ಕನ್ನಡ ಚಿತ್ರರಂಗದ ಹೊಸ ಅಧ್ಯಾಯ ಶುರುವಾಗಿದೆ. ರಾಕಿಭಾಯ್ ಫೀವರ್ ಇಡೀ ಭೂ ಮಂಡಲದ ಸಿನಿಲೋಕ ಬೆಕ್ಕಸ ಬೆರಗಾಗಿ ನೋಡುವಂತೆ ಮಾಡಿದೆ. ಯೆಸ್.. ಪದಗಳಿಂದ ವರ್ಣಿಸಲಾಗದ ಅದ್ಭುತ ದೃಶ್ಯಕಾವ್ಯ ಕೆಜಿಎಫ್. ಈ ಚಿತ್ರದಲ್ಲಿ ಬಳಸಲಾಗಿದ್ದ ಕೆಲವು ವಸ್ತುಗಳು ಇಂದು, ಮುಂದು ಸಿಕ್ಕಾಪಟ್ಟೆ ಫೇಮಸ್. ಅಭಿಮಾನಿಗಳ ಹೃದಯ ಗೆದ್ದ ಆ ವಸ್ತುಗಳು ಯಾವುವು ಗೊತ್ತಾ..?
ಸುತ್ತಿಗೆ, ದೊಡ್ಡಮ್ಮ..KGF ಯೂನಿವರ್ಸಲ್ ಕಲೆಕ್ಷನ್ಸ್..!
KGF ಸಿನಿಮಾ ಮಾತ್ರವಲ್ಲ..ಅದೊಂದು ಎಮೋಷನ್
ಕೆಜಿಎಫ್-2 ಗೆಲ್ಲಿಸಿದ್ದ ಹ್ಯಾಮರ್ಗೆ ಸಿಕ್ತು ಗೌರವ ಸಮರ್ಪಣೆ..!
ದೊಡ್ಡಮ್ಮನ ಘರ್ಜನೆಗೆ ರಾಕಿಭಾಯ್ ಫ್ಯಾನ್ಸ್ ಕ್ಲೀನ್ ಬೋಲ್ಡ್
ಕನ್ನಡದಲ್ಲಿ ತೆರೆಕಂಡ ಸಾವಿರ ಸಿನಿಮಾಗಳಿಗಿಂತ ವಿಭಿನ್ನ ಸಾಲಿನ ಸಿನಿಮಾ ಕೆಜಿಎಫ್-2. ರಾಕಿಭಾಯ್ ಈ ಚಿತ್ರದ ಮೂಲಕ ಭಾರತೀಯ ಸಿನಿಲೋಕದಲ್ಲಿ ಎಂದೆಂದಿಗೂ ಮುರಿಯಲಾಗದ ಹೊಸ ದಾಖಲೆ ಬರೆದ್ರು. ಹೆಜ್ಜೆ ಹೆಜ್ಜೆಗೂ ಕೋಟಿ ಕೋಟಿ ಗಳಿಸಿ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲೂ ಧೂಳೆಬ್ಬಿಸಿದ ಚಿತ್ರ ಇದು. ಕೆಜಿಎಫ್ ಸಿನಿಮಾ ನೋಡಿದವ್ರು ಇಂದಿಗೂ ಅದರ ಹ್ಯಾಂಗೋವರ್ನಿಂದ ಆಚೆ ಬರೋಕಾಗಿಲ್ಲ.
ಪ್ರಶಾಂತ್ ನೀಲ್ ಕಲಾ ಕುಸುರಿಯಲ್ಲಿ ಅರಳಿದ ಕೆಜಿಎಫ್-2 ಸಿನಿಮಾದ ಪ್ರತಿ ರೋಲ್ಗಳು ನಮ್ಮನ್ನು ಬಿಟ್ಟು ಬಿಡದೇ ಕಾಡುತ್ತವೆ. ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಮೇಕಿಂಗ್ ಸ್ಟೈಲ್ನ ಕಿಕ್ಕು ಶರಾಬಿನ ಅಮಲಿನಲ್ಲಿ ಎಲ್ಲರನ್ನು ತೇಲಿಸಿಬಿಡುತ್ತೆ. ಚಿತ್ರದ ಪಾತ್ರಗಳ ಸೃಷ್ಠಿಯ ಮೇಲೆ ನೀಲ್ ಮಾಡಿರುವ ಹಾರ್ಡ್ವರ್ಕ್ ಅಂತದ್ದು. ಕೆಜಿಎಫ್ ಚಿತ್ರದಲ್ಲಿ ಬಳಸಲಾಗಿದ್ದ ಕೆಲವು ವಸ್ತುಗಳು ಇಂದಿಗೂ ಎಲ್ಲರ ಚಿತ್ತದಲ್ಲಿ ಅಚ್ಚಳಿಯದೇ ಉಳಿದಿವೆ. ಯೆಸ್.. ಕೆಜಿಎಫ್-2 ಚಿತ್ರದಲ್ಲಿ ಬಳಸಲಾಗಿದ್ದ ಸುತ್ತಿಗೆ, ದೊಡ್ಡಮ್ಮ ಗನ್, ಕಾರ್,ಬೈಕ್, ಎಲ್ಡೊಱಡೋ ಮರೆಯೋಕೆ ಸಾಧ್ಯ ಇಲ್ಲ ಅಲ್ವಾ..?
ಹೊಸ ಇತಿಹಾಸ ಬರೆದ ರಾಕಿಭಾಯ್ ಸಿನಿಮಾ ಕೆಜಿಎಫ್-2 ಇನ್ನು ಯುಗಗಳೇ ಕಳೆದರೂ ಮುಂದಿನ ಸಿನಿಮಾಗಳಿಗೆ ದಾರಿದೀಪ. ಟೆಕ್ನಿಕಲ್ ಸಿನಿಮಾ ಕೆಜಿಎಫ್ನ ಪ್ರತಿಯೊಂದು ಮೇಕಿಂಗ್ ಸ್ಟೈಲ್ ಕಾಪಿ ಪೇಸ್ಟ್ ಮಾಡಿ ಸಿನಿಮಾ ಮಾಡೋ ಖಯಾಲಿ ಶುರುವಾಗಿದೆ. ಈ ಚಿತ್ರದಲ್ಲಿ ರಾಕಿಭಾಯ್ ಕೈಯಲ್ಲಿ ಹಿಡಿದಿದ್ದ ಸುತ್ತಿಗೆ ಪ್ರಪಂಚದಾದ್ಯಂತ ಹೈಲೈಟ್ ಆಗಿದೆ. ಥಿಯೇಟರ್ ಹೊರಗೆ ಸುತ್ತಿಗೆ ಹೊಡಿದು ರಾಕಿಭಾಯ್ ಡೈಲಾಗ್ ಹೊಡೆಯೋ ಅಭಿಮಾನಿಗಳನ್ನು ಮರೆಯೋಕೆ ಆಗಲ್ಲ.
ಕೆಜಿಎಫ್ ಚಾಪ್ಟರ್- 2 ಚಿತ್ರದಲ್ಲಿ ಬಳಸಲಾಗಿದ್ದ ಹ್ಯಾಮರ್ ಈ ಲೆವೆಲ್ಗೆ ಸೌಂಡ್ ಮಾಡಿದ್ರೆ, ಇದ್ರ ಜೊತೆಗೆ ದೊಡ್ಡಮ್ಮನ ಘರ್ಜನೆಯ ಚೀರಾಟಕ್ಕೆ ಥಿಯೇಟರ್ ಒಳಗಿದ್ದ ಪ್ರೇಕ್ಷಕರ ಎದೆಯಲ್ಲಿ ಸಂಚಲನ ಉಂಟಾಗಿತ್ತು. ಎಲ್ಲರಿಗೂ ದೊಡ್ಡಮ್ಮನ ಮೇಲೆ ಲವ್ ಆಗಿತ್ತು. ಆ ಲೆವೆಲ್ಗೆ ಬ್ಯಾರೆಲ್ ಗನ್ ಸುದ್ದಿ ಮಾಡಿತ್ತು. ಹಾಗಾಗಿ ಸಿನಿಮಾವನ್ನು ಬೇರೆ ಲೆವೆಲ್ಗೆ ಕೊಂಡೊಯ್ದ ವಸ್ತುಗಳಿಗೆ ಹೊಂಬಾಳೆ ಟೀಮ್ ಗೌರವ ಸಮರ್ಪಿಸಿದೆ.
ಕೆಜಿಎಫ್ ಚಾಪ್ಟರ್ ಒಂದರಲ್ಲೇ ಎಲ್ಡೋಱಡೋ ಬಗ್ಗೆ ಕುತೂಹಲ ಕೆರಳಿಸಿದ್ದ ನೀಲ್, ಸೀಕ್ವೆಲ್ ಚಿತ್ರದಲ್ಲಿ ಅದನ್ನು ರಿವೀಲ್ ಮಾಡಿದ್ರು. ಹೂತಿಟ್ಟ ಎಲ್ಡೊಱಡೋ ಕೂಡ ಎಲ್ಲರನ್ನು ಇಂಪ್ರೆಸ್ ಮಾಡಿತ್ತು. ರಾಕಿ ಹೆಸರಿರೋ ಬೈಕ್, ಚಾಪ್ಟರ್-2ನಲ್ಲಿ ಬಳಸಿರೋ ಸೆಡಾನ್ ಕಾರ್ ಎಲ್ಲಾ ಸಿಕ್ಕಾಪಟ್ಟೆ ಹೆಸರು ಮಾಡಿವೆ. ಇದೀಗ ಹೊಂಬಾಳೆ ಟೀಮ್ ತಮ್ಮ ಅಫಿಶಿಯಲ್ ಪೇಜ್ನಲ್ಲಿ ಯೂನಿವರ್ಸಲ್ ಕಲೆಕ್ಷನ್ಸ್ ಅನ್ನೋ ಟೈಟಲ್ ಕೊಟ್ಟು ಗೌರವಾರ್ಥವಾಗಿ ವೀಡಿಯೋ ರಿಲೀಸ್ ಮಾಡಿದೆ. ಇದೀಗ ಈ ವೀಡಿಯೋ ಕೆಲವೇ ಕ್ಷಣಗಳಲ್ಲಿ ಲಕ್ಷಗಟ್ಟಲೇ ವ್ಯೂ ಕಂಡಿದೆ. ಎನಿವೇ ಕೆಜಿಎಫ್ ಯಶಸ್ಸಿನ ಪಾತ್ರಧಾರಿಗಳಾದ ಈ ವಸ್ತುಗಳಿಗೂ ನಾವು ಧನ್ಯವಾದ ಸಲ್ಲಿಸೋಣ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ