ಬೆಂಗಳೂರು: ಕೆಪಿಸಿಸಿ ಮುಂದೆ ಕಾಂಗ್ರೆಸ್ ಪ್ರತಿಭಟನೆ ಆರಂಭಗೊಂಡಿದ್ದು, ರಾಹುಲ್ ಗಾಂಧಿ ಅವರ ಆಸ್ತಿಗಳನ್ನ ಜನರಿಗೆ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಭಾರತ್ ಜೋಡೋ ಘೋಷಿಸಿದ್ದಾರೆ. ಇದು ಬಿಜೆಪಿ ನಾಯಕರ ನಿದ್ರೆ ಕೆಡಿಸಿದೆ. ಹಾಗಾಗಿ ಸುಳ್ಳು ಕೇಸುಗಳನ್ನ ಹಾಕಿದ್ದಾರೆ. ರಾಹುಲ್ ಗಾಂಧಿ ಅವರ ಆಸ್ತಿಗಳನ್ನ ಜನರಿಗೆ ಕೊಟ್ಟಿದ್ದಾರೆ. ನ್ಯಾಷನಲ್ ಹೆರಾಲ್ಡ್ ಕೇಸ್ ಅವರ ಸ್ವಂತ ಆಸ್ತಿಯಲ್ಲ. ಅದು ಕಾಂಗ್ರೆಸ್ ಕಾರ್ಯಕರ್ತರ ದೇಣಿಗೆ ಹಣದ್ದು ಎಂದರು.
ಅದಲ್ಲದೇ, ಇಂದಿರಾ ದೇಶಕ್ಕೆ ಪ್ರಾಣ ತ್ಯಾಗ ಮಾಡಿದ್ರು. ರಾಜೀವ್ ಗಾಂಧಿ ದೇಶಕ್ಕೆ ಪ್ರಾಣ ತ್ಯಾಗ ಮಾಡಿದ್ರು. ಸೋನಿಯಾ,ರಾಹುಲ್ ಅಧಿಕಾರ ತ್ಯಾಗ ಮಾಡಿದ್ರು. ಇಂದು ಅಂತವರಿಗೆ ಕಿರುಕುಳ ಕೊಡ್ತಿದ್ದೀರ. ಹಾಗಾಗಿ ಇಂದು ನಾವು ಬೀದಿಗಿಳಿದಿದ್ದೇವೆ. ಸೋನಿಯಾ,ರಾಹುಲ್ ಪರವಾಗಿ ನಾವಿದ್ದೇವೆ. ರಾಜಭವನ ಮುತ್ತಿಗೆಯನ್ನ ಹಾಕ್ತಿದ್ದೇವೆ. ಐಟಿ,ಇಡಿ,ಬಿಜೆಪಿ ಕೈಗೊಂಬೆಯಾಗಬಾರದು. ನಾಳೆ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದರು.