ದಾವಣಗೆರೆ: ಕಾಂಗ್ರೆಸ್ ರಾಜಭವನ ಚಲೋ ಹಿನ್ನಲೆ ದಾವಣಗೆರೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ತೀವ್ರ ಅಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಇದು ಕಾನೂನು ಬಾಹಿರ ಕೆಲಸಕ್ಕೆ ಸಪೋರ್ಟ್ ಮಾಡುತ್ತಿರುವುದು ಕಾಂಗ್ರೆಸ್ನ ದುರಂತವಾಗಿದೆ ಎಂದು ಕಿಡಿಕಾಡಿದರು.
ಅಲ್ಲದೇ ಈ ತರ ಹೋರಾಟ ಮಾಡಿದರೆ ಜನ ಮನೆಗೆ ಚಲೋ ಮಾಡ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಇನ್ನು ಇದೇ ವೇಳೆ ಪಠ್ಯದ ವಿರುದ್ದ ಸಾಹಿತಿಗಳ ಹೋರಾಟದ ವಿಚಾರ ಪ್ರತಿಕ್ರಿಯಿಸಿ, ಯಾರೇ ಸಲಹೆ ಕೊಟ್ಟರು ಸ್ವೀಕರಿಸುತ್ತೇವೆ. ಹಿಂದಿನ ಪಠ್ಯ ಪುಸ್ತಕದ ಬಗ್ಗೆಯೂ ಆಕ್ಷೇಪಣೆ ಇದೆ ಎಂದು ಮಾಹಿತಿ ತಿಳಿಸಿದರು.
ಹಿಂದಿ ಭಾಷೆ ಬರುವವರಿಗೆ ಮಾತ್ರ ಉತ್ತರಕಾಂಡ ಪ್ರವಾಸ ಎಂಬ ವಿಚಾರ ಹಿನ್ನೆಲೆ, ಖಂಡಿತವಾಗಿ ಇದು ಸರಿಯಾದ ಕ್ರಮ ಅಲ್ಲ, ಈ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಹೇಳಿದ್ದೇನೆ ಎಂದರು.
ಮೇಕೆದಾಟು ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲದಕ್ಕೂ ಉತ್ತರ ಕೊಡೋ ಅವಶ್ಯಕತೆ ಇಲ್ಲ . ಸುಪ್ರೀಂ ತೀರ್ಪು ಆಗಿದೆ. ಸಿಡಬ್ಲೂಎಂಎ ರೆಫರ್ ಆಗಿದೆ. ಅವರಿಗೆ ಅಧಿಕಾರ ಇದೆ. ಮುಂದಿನ ವಾರ ಮೀಟಿಂಗ್ ಕರೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.