Sunday, November 24, 2024

ರಾಜ್ಯಸಭಾ ಚುನಾವಣೆ ಗೆದ್ದರೂ ಸಿಎಂಗೆ ಸಂಕಷ್ಟ

ಬೆಂಗಳೂರು: ರಾಜ್ಯಸಭಾ ಚುನಾವಣೆ ಗೆದ್ದರೂ ಸಿಎಂಗೆ ಸಂಕಷ್ಟ ಎದುರಾಗಿದ್ದು, ಮೇಲ್ಮನೆ ಸೋಲಿನ ಸುಳಿಯಲ್ಲಿ ಬಸವ’ರಾಜ’ ಬೊಮ್ಮಾಯಿ ಕುರ್ಚಿಗೆ ಆಪತ್ತು ತಂದಿದೆ.

ಬೊಮ್ಮಾಯಿ ಕುರ್ಚಿಗೆ ಕುತ್ತು ತಂದಿದ್ಯಾ ಶಹಾಪುರ ಸೋಲು..? ಮತ್ತೆ ಬೊಮ್ಮಾಯಿ ನಾಯಕತ್ವ ಪ್ರಶ್ನೆ ಮಾಡುತ್ತಿರೋ ಪರಿಷತ್ ಸೋಲು. ಬಲಿಷ್ಠ ಕೇಸರಿ ಸಾಮ್ರಾಜ್ಯ ಆಡಳಿತ ಪ್ರದೇಶದಲ್ಲಿಯೇ ತಾವರೆ ಮುದುಡಿದೆ. ಇದು ಸಿಎಂ ಬಸವರಾಜ ಬೊಮ್ಮಾಯಿ ವರ್ಚಸ್ಸಿಗೆ ಕಂಟಕ ತಂದಿದ್ದು, ಇದೇ ಮುಂದುವರಿದರೆ ಮುಂದಿ‌‌ನ‌ 23ರ ಸಮರದ ಕಥೆ ಏನು..? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ಅದಲ್ಲದೇ, ಬಿಜೆಪಿ ರಾಜಕೀಯ ಪಡಶಾಲೆಯಲ್ಲಿ ಬಿಸಿಬಿಸಿ ರಾಜಕೀಯ ಚರ್ಚೆಯಾಗಿದ್ದು, ಕೇಸರಿ ಮೂಲ ಜಾಗದಲ್ಲೇ ಕಮಲದ ಹಿಡಿತ ತಪ್ಪಿದ್ದೇಕೆ..? ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಅರುಣ್ ಶಹಾಪುರ ಸೋಲಿಗೆ ಕಾರಣವೇನು..? 25 ಶಾಸಕರು, 5 ಸಂಸದರು, 4 ಮಂತ್ರಿಗಳಿರುವ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ‌ಗೆ ಸೋಲುಂಟಾಗಿದೆ.

ಇನ್ನು, ಇಡೀ ಕೇಸರಿ‌ ಬ್ರಿಗೇಡ್ ಇದ್ರೂ ಸೋಲು‌ ಹೇಗಾಯ್ತು..? ಇಷ್ಟೆಲ್ಲಾ ದಂಡು ದಳವಾಯಿ ಇದ್ರೂ‌ ಶಹಾಪುರ ಸೋತಿದ್ದೇಕೆ..? ಶಹಾಪುರ ಸೋಲಿಗೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿದ್ದು ಕಾರಣವಾಯ್ತೇ..? ಅಥವಾ ಶಹಾಪುರ ಸೋಲಿಗೆ ಬಿಜೆಪಿ ಸ್ಥಳೀಯ ನಾಯಕರೇ ಬರೆ ಎಳೆದ್ರಾ..? ಇದೆಲ್ಲಾ ಪ್ರಬಲ‌ ನಾಯಕತ್ವದ ಕೊರತೆಯೆ..? ಎಂದು ಪ್ರಶ್ನೆಯಾಗಿಯೇ ಉಳಿದಿದೆ.

RELATED ARTICLES

Related Articles

TRENDING ARTICLES