ಬೆಂಗಳೂರು: ಇಂದಿನಿಂದ ವೃತ್ತಿಪರ ಕೋರ್ಸ್ಗಳ ಸಿಇಟಿ ಪರೀಕ್ಷೆ 3 ದಿನ ನಡೆಯಲಿದೆ
ಈ ಬಾರಿ ನೀಟ್ ಮಾದರಿಯಲ್ಲಿ ನಡೆಯಲಿದೆ ಸಿಇಟಿ ಪರೀಕ್ಷೆ. ಸಿಇಟಿ ಪರೀಕ್ಷೆಯಿಂದಲೂ ಹಿಜಾಬ್ ಕಿಕ್ ಔಟ್ ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸಿ ಸಿಇಟಿ ಪರೀಕ್ಷೆಗೆ ಬರುವಂತಿಲ್ಲ. ಈ ಬಾರಿ 2.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 1.4 ಲಕ್ಷ ಪುರುಷ ವಿದ್ಯಾರ್ಥಿಗಳು, 1.7 ಲಕ್ಷ ಮಹಿಳಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ .
ಅದಲ್ಲದೇ, ಪರೀಕ್ಷಾ ಕೇಂದ್ರಗಳ ಬಳಿ ಜಾಮರ್, ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಲು 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹಾಗೆನೇ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಜೆರಾಕ್ಸ್ ಅಂಗಡಿಗಳನ್ನ ಮುಚ್ಚುವುದು ಕಡ್ಡಾಯವಾಗಿದೆ.
ಸಿಇಟಿ ಪರೀಕ್ಷಾ ವೇಳಾಪಟ್ಟಿ
16-6-22ರಂದು 10.30 ರಿಂದ11.30 ಜೀವಶಾಸ್ತ್ರ
16-6-22ರಂದು 2.30 ರಿಂದ 3.30 ಗಣಿತ
17-6-22ರಂದು 10.30 ರಿಂದ11.30 ಭೌತಶಾಸ್ತ್ರ
17-6-22ರಂದು 2.30 ರಿಂದ3.30 ರಸಾಯನಶಾಸ್ತ್ರ
ಹೊರನಾಡ ಕನ್ನಡಿಗರಿಗೆ, ಕನ್ನಡ ಪರೀಕ್ಷೆ ನಡೆಯಲಿದೆ.