Friday, November 22, 2024

ಕಾಂಗ್ರೆಸ್ ನಾಯಕರಿಗೆ ಸಿ.ಟಿ. ರವಿ ಖಡಕ್​​ ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನ್ಯಾಷನಲ್​​ ಹೆರಾಲ್ಡ್​​ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ದೇಶದ್ಯಾಂತ ಪ್ರತಿಭಟನೆ ವಿಚಾರ ಹಿನ್ನೆಲೆ ಕಾಂಗ್ರೆಸ್ ನಾಯಕರಿಗೆ ಸಿಟಿ ರವಿ ಪಂಚ ಪ್ರಶ್ನೆಗಳನ್ನು ಕೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರತಿಭಟನೆ ಮಾಡ್ತಿರೋ ಕಾಂಗ್ರೆಸ್‌ನವರಿಗೆ ಹಾಗೂ ಯಾವಾಗಲೂ ಕಾನೂನಿನ ಬಗ್ಗೆ ಮಾತನಾಡುವವರಿಗೆ ಪಂಚ ಪ್ರಶ್ನೆ ಕೇಳ್ತೀನಿ ಅದಕ್ಕೆ ಉತ್ತರಿಸುತ್ತಾರೆಯೇ ಎಂದು ಹೇಳಿದರು. ಸೋನಿಯಾ ರಾಹುಲ್ ಕುಟುಂಬ ಕಾನೂನಿಗಿಂತ ಅತೀತರೇ.? ಅ ರೀತಿ ಕಾನೂನಿಗಿಂತ ಅತೀತರಾಗಿದ್ರೆ ಸಂವಿಧಾನದ ಯಾವ ಅಡಿಯಲ್ಲಿ ಪ್ರಾತಿನಿಧ್ಯ ನೀಡಿದೆ.?ಅಸೋಸಿಯೇಷನ್ ಜನರಲ್​​ನಲ್ಲಿರೋ ಮೂಲ ಷೇರುದಾರರು ಎಷ್ಟು ? ಯಂಗ್ ಇಂಡಿಯಾದಲ್ಲಿರೋ ಪಾಲುದಾರರು ಎಷ್ಟು.? ಅಲ್ಲಿ ಷೇರುದಾರರು, ಇಲ್ಲಿ ಪಾರುದಾರರು ಎಷ್ಟು ? ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು AJL ಆರಂಭವಾದಾಗ ಆರಂಭದಲ್ಲಿ ಐದುವರೆ ಸಾವಿರ ಷೇರುದಾರರಿದ್ದರು. ಯಂಗ್ ಇಂಡಿಯಾಗೆ ವರ್ಗಾವಣೆ ಮಾಡುವಾಗ ಇದ್ದದ್ದು 1,500.  ಇಲ್ಲಿ ವರ್ಗಾವಣೆ ಆದಾಗ ನಾಲ್ಕು ಜನ ಪಾಲುದಾರರಿದ್ದಾರೆ. ಸೋನಿಯಾ 38%, ರಾಹುಲ್ 38%, ಮೋತಿಲಾಲ್ ಓರಾ, ಆಸ್ಕರ್ ಫರ್ನಾಂಡೀಸ್. ಮೋತಿಲಾಲ್ ಓರಾ, ಫರ್ನಾಂಡಿಸ್ ಶಿವನ ಪಾದ ಸೇರಿದ್ದಾರೆ. ಪ್ರೈವೆಟ್ ಕಂಪನಿಗೆ ವರ್ಗಾವಣೆ ಮಾಡುವಾಗ ಕಾನೂನಿನಲ್ಲಿ ಅಧಿಕಾರವಿದೆಯಾ.? ಹಾಗೂ ವರ್ಗಾವಣೆ ಮಾಡುವಾಗ ಮೂಲ ಶೇರುದಾರರ ಅನುಮತಿ ಇದೆಯಾ.? ಎಂದು ಪ್ರಶ್ನೆ ಮಾಡಿದ್ದಾರೆ.

ಅಷ್ಟೆಅಲ್ಲದೇ ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ವರ್ಗಾವಣೆ ಮಾಡುವಾಗ AJL ಕಂಪನಿಯ ಸಾಲ ಎಷ್ಟಿತ್ತು. ಆಸ್ತಿಯ ಪ್ರಮಾಣ ಇವತ್ತಿನ ಮಾರುಕಟ್ಟೆ ದರ ಅಲ್ಲ. ಸಬ್ ರಿಜಿಸ್ಟ್ರಾರ್ ಮೌಲ್ಯ 2ಸಾವಿರ ಕೋಟಿ ಬೆಲೆ ಬಾಳುವ ಆಸ್ತಿ, ಅಸೆಸ್ ಮಾಡದೇ, ಕೇವಲ 50 ಲಕ್ಷಕ್ಕೆ ವರ್ಗಾವಣೆ ಮಾಡಿರೋದು ಅಕ್ರಮ ಅಲ್ವಾ.? ಯಂಗ್ ಇಂಡಿಯಾ ಕಂಪನಿ ಈಗ ಯಾವ ವಹಿವಾಟು ನಡೆಸುತ್ತಿದೆ ಎಂದು ಪ್ರಶ್ನೆ ಮಾಡಿ, ಈ ನನ್ನ  ಪಂಚ ಪ್ರಶ್ನೆಗಳಿಗೆ ಉತ್ತರ ಕೊಡ್ತಾರೆ ಅಂತ ಭಾವಿಸಿದ್ದೇನೆ ಎಂದು ಪ್ರತಿಕ್ರಿಯಿಸಿದರು.

RELATED ARTICLES

Related Articles

TRENDING ARTICLES