Monday, December 23, 2024

ರಂಗೇರಲಿದೆ ತ್ರಿವಿಕ್ರಮ ಕ್ರೇಜಿ ಪ್ರೀ ರಿಲೀಸ್ ಇವೆಂಟ್

ಕ್ರೇಜಿಸ್ಟಾರ್​ ಪುತ್ರ ವಿಕ್ರಮ್​ ರವಿಚಂದ್ರನ್​ ಸದ್ಯ ಪ್ರಮೋಷನ್ಸ್​ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ತ್ರಿವಿಕ್ರಮನ ಪರಾಕ್ರಮ ನೋಡೋಕೆ ಫ್ಯಾನ್ಸ್ ​ಕೂಡ ತುದಿಗಾಲಲ್ಲಿ ಕಾಯ್ತಾ ಇದ್ದಾರೆ. ಇತ್ತ ವಿಕ್ರಮ್​ ಟೆಂಪಲ್​ ರನ್​ ಜೊತೆಗೆ ಎಲ್ಲಾ ಕಡೆ ಪ್ರಮೋಷನ್ಸ್ ಮಾಡ್ತಾ ಬ್ಯುಸಿಯಾಗಿಬಿಟ್ಟಿದ್ದಾರೆ. ಇದ್ರ ಜೊತೆಗೆ ತೆರೆಮರೆಯಲ್ಲಿ ತ್ರಿವಿಕ್ರಮ ಚಿತ್ರದ ಅದ್ಧೂರಿ ಪ್ರೀ- ರಿಲೀಸ್​ ಇವೆಂಟ್​ಗೆ ಭರ್ಜರಿ ಸಿದ್ಧತೆ  ನಡೀತಿದೆ.

ರಂಗೇರಲಿದೆ ತ್ರಿವಿಕ್ರಮ ಕ್ರೇಜಿ ಪ್ರೀ- ರಿಲೀಸ್ ಇವೆಂಟ್

ನಂದಿ ಲಿಂಕ್ಸ್ ಗ್ರೌಂಡ್​​ನಲ್ಲಿ ಜಗಮಗಿಸಲಿರೋ ವೇದಿಕೆ

ಕನಸುಗಾರ ಕ್ರೇಜಿಸ್ಟಾರ್​ ರವಿಚಂದ್ರನ್ ದ್ವಿತೀಯ ​ಪುತ್ರ ವಿಕ್ರಮ್​ ಅಭಿನಯದ ಚೊಚ್ಚಲ ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದೆ. ಇದೇ ತಿಂಗಳ ಜೂನ್​ 24ಕ್ಕೆ ತ್ರಿವಿಕ್ರಮ ಚಿತ್ರದ ಭರಾಟೆಗೆ ಪ್ರೇಕ್ಷಕರು ಥ್ರಿಲ್ ಆಗೋದು ಪಕ್ಕಾ ಆಗಿದೆ. ಹೊಸ ಪ್ರಯತ್ನ, ಹೊಸ ಕಥೆಯ ಜೊತೆ ವಿಕ್ರಮ್​​ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಲಿದ್ದಾರೆ. ಈಗಾಗ್ಲೇ ಚಿತ್ರದ ಎಲ್ಲಾ ಹಾಡುಗಳು ಹಿಟ್​ ಮೇಲೆ ಹಿಟ್​ ದಾಖಲಿಸಿ ಕ್ರೇಜ್​ ಹುಟ್ಟಿಸಿವೆ.

ಸದ್ಯ, ತ್ರಿವಿಕ್ರಮ ಚಿತ್ರದ ಹೊಸ ಹಾಡು ಎಲ್ಲೆಲ್ಲೂ ಧೂಳೆಬ್ಬಿಸ್ತಿದೆ. ಕ್ರೇಜಿ ತನಯ, ಶಕುಂತಲಾ ಶೇಕ್​ ಎ ಬಾಡಿ ಪ್ಲೀಜ್​ ಅಂತಾ ಬಿಂದಾಸ್​ ಸ್ಟೆಪ್ಸ್​ ಹಾಕಿದ್ದಾರೆ ವಿಕ್ರಮ್​​. ಈ ಹಾಡಿನ ಗಾನಬಜಾನಕ್ಕೆ ಎಲ್ಲರೂ ಮೈಕೈ ಕುಣಿಸುತ್ತಿದ್ದಾರೆ. ವಿಕ್ರಮ್​ ಜೊತೆ ನಟಿ ಆಕಾಂಕ್ಷಾ ಶರ್ಮಾ ಸೊಂಟ ಬಳುಕಿಸಿರುವ ಪರಿಗೆ ಸಿನಿಪ್ರೇಮಿಗಳು​ ಫಿದಾ ಆಗಿದ್ದಾರೆ.

ಶಾಕುಂತಲಾ ಹಾಡಿಗೆ ಬೃಹತ್​ ಸೆಟ್​ ಹಾಕಿ ಅದ್ಧೂರಿಯಾಗಿ ಚಿತ್ರೀಕರಿಸಲಾಗಿತ್ತು. ಕಲರ್​ಫುಲ್​ ಕಾಸ್ಟ್ಯೂಮ್ಸ್​​ನೊಂದಿಗೆ ಸಖತ್​ ರಿಚ್​ ಆಗಿ ಮೂಡಿ ಬಂದಿರೋ ಈ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಈಗಾಗ್ಲೇ ತ್ರಿವಿಕ್ರಮ ರಿಲೀಸ್​ಗೂ ಮುನ್ನವೇ ನಿರೀಕ್ಷೆಗೂ ಮೀರಿ ಹೈಪ್​ ಕ್ರಿಯೇಟ್​ ಮಾಡಿದೆ. ಸೆಂಚೂರಿ ಸ್ಟಾರ್​ ಶಿವಣ್ಣ ಕೂಡ ಸಿನಿಮಾ ಬಗ್ಗೆ ಎಗ್ಸೈಟಿಂಗ್​ ಸ್ಟೇಟ್​​ಮೆಂಟ್ ನೀಡಿದ್ರು.

ಚಿತ್ರತಂಡ ತುಮಕೂರು, ಚಿತ್ರದುರ್ಗ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ​​ನಗರಗಳಲ್ಲಿ ಭರ್ಜರಿ ಪ್ರಮೋಷನ್ಸ್​ ಮಾಡಿದೆ. ಬಳ್ಳಾರಿ, ಹೊಸಪೇಟೆ ಮುಗಿಸಿ ಬೆಂಗಳೂರಿಗೆ ಆಗಮಿಸಲಿರೋ ಚಿತ್ರತಂಡ ಈ ತಿಂಗಳ 19ನೇ ತಾರೀಖಿನಂದು ಪ್ರೀ- ರಿಲೀಸ್​ ಇವೆಂಟ್​​ಗೆ ದೊಡ್ಡ ಸಿದ್ಧತೆ ಮಾಡಿಕೊಂಡಿದೆ. ಈ ಅದ್ಧೂರಿ ಸಮಾರಂಭಕ್ಕೆ  ರವಿಚಂದ್ರನ್​​, ಡಾಲಿ ಧನಂಜಯ, ಧ್ರುವ ಸರ್ಜಾ, ಶರಣ್​​, ಅಜಯ್​ರಾವ್​​, ವಶಿಷ್ಠ ಸಿಂಹ,  ನೀನಾಸಂ ಸತೀಶ್​​ ಆಗಮಿಸಲಿದ್ದಾರೆ.

ತ್ರಿವಿಕ್ರಮ ಚಿತ್ರದಲ್ಲಿ ಸಾಧುಕೋಕಿಲ, ಸುಚೇಂದ್ರ ಪ್ರಸಾದ್​​, ಆದಿಲೋಕೇಶ್​​ ಸೇರಿದಂತೆ ಮುಂತಾದವರ ತಾರಬಳಗವಿದೆ.  ರೋಸ್​, ಮಾಸ್​​ ಲೀಡರ್​​​​ ಖ್ಯಾತಿಯ ಸಹನಾಮೂರ್ತಿ ಆ್ಯಕ್ಷನ್​ ಕಟ್​ ಹೇಳಿದ್ದು, ಸೋಮಣ್ಣ ಟಾಕೀಸ್​ ಬ್ಯಾನರ್​ ಅಡಿಯಲ್ಲಿ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಅರ್ಜುನ್​ ಜನ್ಯಾ ಸಂಗೀತ, ಸಂತೋಷ್​ ರೈ ಪತಾಜೆ ಕ್ಯಾಮೆರಾ ಚಿತ್ರಕ್ಕೆ ಪ್ಲಸ್​ ಆಗಿಲಿದೆ. ಒಟ್ಟಾರೆ ಕನ್ನಡ ಸಿನಿಲೋಕದಲ್ಲಿ ತ್ರಿವಿಕ್ರಮನ ಹೊಸ ಅಧ್ಯಾಯ ಶುರುವಾಗಲಿದೆ.

ರಾಕೇಶ್​​ ಅರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES