ಬೆಳಗಾವಿ : ಇಂದು ಪಶ್ಚಿಮ ಶಿಕ್ಷಕರ, ವಾಯುವ್ಯ ಪದವೀಧರ, ಶಿಕ್ಷಕರ ಚುನಾವಣೆ ಫಲಿತಾಂಶ ಬೆಳಗಾವಿಯ ಕ್ಲಬ್ ರಸ್ತೆಯ ಜ್ಯೋತಿ ಕಾಲೇಜಿನಲ್ಲಿ ಮತ ಎಣಿಕೆಗೆ ಸಿದ್ಧತೆ ಮಾಡಲಾಗಿದೆ.
ಬೆಳಿಗ್ಗೆ 8ಗಂಟೆಯಿಂದ ಪ್ರಾರಂಭವಾಗಲ್ಲಿರುವ ಮತ ಎಣಿಕೆ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಲಿದ್ದು, ವಾಯುವ್ಯ ಪದವೀಧರ ಕ್ಷೇತ್ರದ ಒಟ್ಟು ಮತದಾರರು- 99598 ಪೈಕಿ 65,914ಮತ ಚಲಾವಣೆ ಮಾಡಿದ್ದಾರೆ. ಶೇಕಡಾ – 66.18%ಮತದಾನ ವಾಯುವ್ಯ ಶಿಕ್ಷಕರ ಕ್ಷೇತ್ರದ ಒಟ್ಟು ಮತದಾರರು- 25,38ಮತದಾರರ ಪೈಕಿ 21,401 ಮತ ಚಲಾವಣೆಯನ್ನು ಮಾಡಿದ್ದಾರೆ.
ಅದಲ್ಲದೇ ಶೇಕಡಾ- 84.30%ರಷ್ಟು ಮತ ಚಲಾವಣೆ ಮಾಡಿದ್ದು, ಪಶ್ಚಿಮ ಶಿಕ್ಷಕರ ಕ್ಷೇತ್ರದ ಒಟ್ಟು ಮತದಾರ- 17,973ಪೈಕಿ 15577ಮತ ಚಲಾವಣೆ ಆಗಿದೆ. ಶೇಕಡಾ- 86.67%ರಷ್ಟು ಮತದಾನ ಮೂರು ಕ್ಷೇತ್ರಗಳ ಮತ ಎಣಿಕೆಗೆ ಜ್ಯೋತಿ ಕಾಲೇಜಿನಲ್ಲಿ ಸಿದ್ಧತೆ ಮಾಡಲಾಗಿದ್ದು, ಪ್ರತಿ ಕ್ಷೇತ್ರದ ಮತ ಎಣಿಕೆಗೆ 11ಟೇಬಲ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಇನ್ನು, ಮತ ಎಣಿಕೆಗೆ 1000ಸಿಬ್ಬಂದ್ಧಿಗಳ ನೇಮಕ ಮಾಡಲಾಗಿದ್ದು, ಮತ ಎಣಿಕೆ ಸುತ್ತಮುತ್ತ ಮುಂಜಾಗ್ರತಾ ಕ್ರಮವಾಗಿ 144ಕಲಂ ಅನ್ವಯ ನಿಷೇದಾಜ್ಞೆ ಜಾರಿಯಾಗಿದೆ. ಬೆಳಿಗ್ಗೆ ಮೊದಲು ಸಿಂಧು- ಅಸಿಂಧು ಮತಗಳ ಬೇರ್ಪಡಿಕೆ ಕಾರ್ಯ ಆರಂಭಗೊಳ್ಳಲಿದ್ದು, ನಂತರ ಮತಗಳ ಕ್ರೂಡೀಕರಣ. 25ಮತಗಳ ಬಂಡಲ್ ಕಟ್ಟಿ ಮತ ಎಣಿಕೆ ಪ್ರಾಶಸ್ತ್ಯ ದ ಆಧಾರದ ಮೇಲೆ ಮತದಾನ ನಡೆದಿರುವುದರಿಂದ ಹೆಚ್ಚಿನ ಸಮಯಾವಕಾಶ ಪಡೆಯುವ ಸಾಧ್ಯತೆ ಇದೆ.