ಶಿವಮೊಗ್ಗ : ಪಠ್ಯ ಪುಸ್ತಕಗಳ ಪರಿಷ್ಕರಣೆ ಕುರಿತ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ನಾದಬ್ರಹ್ಮ ಹಂಸಲೇಖಾ ಅವರ ನೇತೃತ್ವದಲ್ಲಿ ಕುಪ್ಪಳ್ಳಿಯಿಂದ ಪ್ರತಿಭಟನೆ ಶುರುವಾಗಿದೆ.
ಈ ಸಂದರ್ಭದಲ್ಲಿ ಮಾತಾಡಿದ ಹಂಸಲೇಖ ಅವರು, ನಮಗೆ ಅಂದರೆ ಮಹಾಮನೆ ಕಲ್ಯಾ ಣ, ಗುರುಮನೆ ಕವಿಶೈಲ. ಬಸವ ಅಂದರೆ ಕನ್ನಡ ಮತ್ತು ಕುವೆಂಪು ಅಂದರೆ ಕರ್ನಾಟಕ, ಅವರಿಬ್ಬರಿಗೂ ಅವಮಾನ ಆಗಿದೆ. ನಮಗೆ ನಾಡಗೀತೆ ಇಲ್ಲ , ನಮ್ಮ ನಾಡೇ ನಮಗೆ ಗೀತೆ. ಈ ಹಿಂದೆ ಕನ್ನಡಕ್ಕಾಗಿ ಗೋಕಾಕ ಚಳವಳಿ ನಡೆದಂತೆ ಈಗ ನಾವು ಕುಪ್ಪಳ್ಳಿ ಕಹಳೆ ಊದುತ್ತಿದ್ದೇವೆ. ಇದು ನಾಡಿನಾದ್ಯಂತ ಮೊಳಗಬೇಕು. ನಮ್ಮನ್ನು ಭಾಷಾಂಧರು ಅಂತ ಕರೆದರೂ ಚಿಂತೆಯಿಲ್ಲ , ನಮ್ಮ ನಾಡಿನ ಮಹಾನುಭಾವರಿಗೆ ಆಗಿರುವ ಅವಮಾನಕ್ಕೆ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.