ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಸ್ಯಾಂಡಲ್ವುಡ್ನ ಲೀಡರ್ ಅಷ್ಟೇ ಅಲ್ಲ, ಅಪ್ಪಟ ಅಪರಂಜಿ. ಗುಣದಲ್ಲಿ ಕೊಹಿನೂರ್ ಡೈಮಂಡ್ಗಿಂತ ಕಾಸ್ಟ್ಲಿ. ಈ ಸರಳತೆಯ ಸಾಮ್ರಾಟನನ್ನ ನೋಡಲು ಲಂಡನ್ನಿಂದ ಒಬ್ಬ ಅಭಿಮಾನಿ ಬಂದು ಹೋಗಿದ್ದಾರೆ. ಇಷ್ಟಕ್ಕೂ ಯಾರು ಆತ ಏನು ಅದ್ರ ಅಸಲಿಯತ್ತು ಅನ್ನೋ ಇಂಟರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದೆ.
ಶಿವಣ್ಣನ ದರ್ಶನಕ್ಕೆ ಲಂಡನ್ನಿಂದ ಬಂದ ಅಭಿಮಾನಿ
ಅಪ್ಪು ಹೆಸ್ರಲ್ಲಿ ಹತ್ತು ಮಕ್ಕಳ ದತ್ತು ಪಡೆದ ಯಂಗ್ಸ್ಟರ್
ಲಂಡನ್ನಲ್ಲಿ ಇಂಟರ್ನ್ಯಾಷನಲ್ ಡೆಪ್ಯೂಟಿ ಕಾನ್ವರ್ಸೇಷನ್ ಆಫೀಸರ್ ಆಗಿ ಲಂಡನ್ನಲ್ಲಿ ಕಾರ್ಯನಿರ್ವಹಿಸ್ತಿರೋ ಈ ವ್ಯಕ್ತಿಯ ಹೆಸ್ರು ಹರ್ಷವರ್ಧನ್. ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಅನ್ನೋಹಾಗೆ 24ರ ಹರೆಯಕ್ಕೆ ಬಹುದೊಡ್ಡ ಕಂಪೆನಿ ಕಟ್ಟಿ, ಕೋಟ್ಯಂತರ ರೂಪಾಯಿ ಸಂಪಾದಿಸಿರೋ ಬ್ಯುಸಿನೆಸ್ಮ್ಯಾನ್ ಕೂಡ ಹೌದು.
ಕ್ರಿಕೆಟರ್ ರಿಷಬ್ ಪಂತ್ ಸಹೋದರಿ ಸಾಕ್ಷಿ ಪಂತ್ ಜೊತೆಗೂಡಿ ಎಲೈಟ್ ಇ2 ಪ್ರೈವೇಟ್ ಲಿಮಿಟೆಡ್ ಕಂಪೆನಿ ನಡೆಸ್ತಿರೋ ಇವ್ರು, ಅದ್ರಿಂದ ಬರೋ ಶೇಕಡಾ 20ರಷ್ಟು ಲಾಭದ ಹಾಣವನ್ನು ಸಮಾಜಮುಖಿ ಕೆಲಸಗಳಿಗೆ ಬಳಸುತ್ತಿದ್ದಾರೆ. ಅದ್ರಲ್ಲೂ ತಮ್ಮದೇ ಹರಿನಾ ಫೌಂಡೇಷನ್ ಮೂಲಕ ಪ್ರತೀ ಸೋಮವಾರ ಒಂದೊಂದು ಮಗುವನ್ನು ದತ್ತು ಪಡೆದು, ಅವ್ರ ಕಂಪ್ಲೀಟ್ ಲಾಲನೆ ಪಾಲನೆಯ ಜವಾಬ್ದಾರಿ ಹೊತ್ತಿದ್ದಾರೆ.
ದೇಶಾದ್ಯಂತ ಮಕ್ಕಳನ್ನ ದತ್ತು ಪಡೆಯುತ್ತಿದ್ದ ಹರ್ಷ, ಕಳೆದ ಅಪ್ಪು ಅವ್ರ ಬರ್ತ್ ಡೇಗೆ ಸುಮಾರು ಹತ್ತು ಮಕ್ಕಳನ್ನ ದತ್ತು ಪಡೆಯೋ ಮೂಲಕ ತಾನೊಬ್ಬ ರಾಜರತ್ನನ ಕಟ್ಟಾಭಿಮಾನಿ ಅಂತ ಸಾರಿದ್ದಾರೆ. ಅಷ್ಟೇ ಅಲ್ಲ, ಪುನೀತ್ ಜೊತೆಗಿನ ಒಡನಾಟವನ್ನು ನೆನೆದು ಭಾವುಕರಾಗ್ತಾರೆ. ಅದೇ ಕಾರಣಕ್ಕೆ ಬೆಂಗಳೂರಿನ ನಾಗವಾರದಲ್ಲಿರೋ ಶಿವರಾಜ್ಕುಮಾರ್ರನ್ನ ಹುಡುಕಿಕೊಂಡು ಬಂದಿದ್ದ ಹರ್ಷ, ಕೊನೆಗೂ ತಮ್ಮ ಮುಂದಿನ ಧ್ಯೇಯೋದ್ದೇಶಗಳನ್ನ ಹೇಳಿ, ಸನ್ ಆಫ್ ಬಂಗಾರದ ಮನುಷ್ಯನ ಆಶೀರ್ವಾದ ಪಡೆದಿದ್ದಾರೆ.
ಶಿವಣ್ಣ ಜೊತೆ ಸ್ವಲ್ಪ ಕಾಲ ಕಳೆಯೋ ಉದ್ದೇಶದಿಂದ ಲಂಡನ್ ಫ್ಲೈಟ್ ಕ್ಯಾನ್ಸಲ್ ಮಾಡಿಕೊಂಡ ಹರ್ಷ, ಅವ್ರ ಸ್ನೇಹ ಗಳಿಸಿ, ಸದ್ಯ ಬೆಂಗಳೂರಲ್ಲೇ ಉಳಿದುಕೊಂಡಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಡಾ. ಶಿವಣ್ಣ ಅವ್ರಿಗೆ ಸಿನಿಮಾ ಕೂಡ ನಿರ್ಮಿಸೋ ಯೋಜನೆಯಲ್ಲಿದ್ದಾರೆ. ಅವ್ರ ಕನಸುಗಳೆಲ್ಲಾ ನನಸಾಗಲಿ. ಮಕ್ಕಳನ್ನ ದತ್ತು ಪಡೆದು, ಸಮಾಜಸೇವೆ ಮಾಡ್ತಿರೋ ಅವ್ರಿಗೆ ದೊಡ್ಮನೆಯ ಅಭಿಮಾನಿ ದೇವರುಗಳು ಕೈಹಿಡಿಯಲಿ ಅನ್ನೋದೇ ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ