ರಾಮನಗರ: ಸಾಮಾನ್ಯ ಜನರಿಗೆ ರಿಯಾಯಿತಿ ದರದಲ್ಲಿ ನಿವೇಶನ ಕೊಡಬೇಕೆಂದು ನಿರ್ಮಿಸಿ ಬಡಾವಣೆ, ನಿರ್ಮಾಣವಾಗಿ 20 ವರ್ಷ ಕಳೆದ್ರೂ ಆ ಬಡಾವಣೆ ಮೂಲಭೂತ ಸೌಕರ್ಯವಿಲ್ಲದೆ ಹಾಳುಕೊಂಪೆಯಾಗಿದೆ, ಹೀಗಾಗಿ ನಿವೇಶನ ಕೊಂಡವರು ಮನೆ ಕಟ್ಟಲು ಹಿಂದೇಟು ಹಾಕ್ತಿದ್ದಾರೆ.
ರಾಮನಗರ ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಜೀಗೆನಹಳ್ಳಿ ಗ್ರಾಮದಲ್ಲಿಅಲ್ಲಲ್ಲೇ ಬಿದ್ದಿರೋ ಮದ್ಯದ ಬಾಟಲಿಗಳು, ಕಾಡಿನಂತೆ ಕಾಣುವ ಪ್ರದೇಶ, ಸಂಪರ್ಕವಿಲ್ಲದ ವಿದ್ಯುತ್ ಕಂಬಗಳು.
ಕಳೆದ 20 ವರ್ಷಗಳ ಹಿಂದೆ ರಾಮನಗರ ನಗರಾಭಿವೃದ್ಧಿ ಪ್ರಾಧೀಕಾರದ ಅಡಿಯಲ್ಲಿ ಸುಮಾರು 45 ಎಕರೆ ಪ್ರದೇಶದಲ್ಲಿ 720 ಕ್ಕೂ ಹೆಚ್ಚು ನಿವೇಶನಗಳನ್ನು ನಿರ್ಮಿಸಿದ್ರು, ರಾಮನಗರ ಜನತೆಗೆ ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆ ಮಾಡುವ ಕನಸು ಹೊತ್ತು ನಿರ್ಮಿಸಿದ ಬಡಾವಣೆ ಇದಾಗಿತ್ತು, ಆದ್ರೆ ಬಡಾವಣೆ ನಿರ್ಮಿಸಿ 20 ವರ್ಷ ಕಳೆದ್ರೂ ಇದುವರೆಗೂ ಆ ಬಡಾವಣೆಗೆ ಮೂಲಭೂತ ಸೌಕರ್ಯಗಳಾದ ವಿದ್ಯುತ್ ಸಂಪರ್ಕ, ವಾಟರ್ ಸಪ್ಲೈ, ಯುಜಿಡಿ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನೀಡದೇ ಪ್ರಾಧೀಕಾರ ನಿವೇಶನ ಕೊಂಡ ಮಾಲೀಕರಿಗೆ ವಂಚಿಸುತ್ತಿದೆ.
ಬಡಾವಣೆಯಲ್ಲಿ ನಿವೇಶನ ಕೊಂಡವರು ಸ್ವಂತ ಸೂರು ಕಟ್ಟಿಕೊಳ್ಳದೇ ಇನ್ನೂ ಬಾಡಿಗೆ ಮನೆಯಲ್ಲೇ ವಾಸ ಮಾಡ್ತಿದ್ದಾರೆ. ಬಡಾವಣೆಗೆ ಮೂಲಭೂತ ಸೌಕರ್ಯಗಳ ಕೊರತೆ ಒಂದು ಕಡೆ ಆದ್ರೆ ಮತ್ತೊಂದು ಕಡೆ ಸಂಜೆ ಆದ್ರೆ ಸಾಕು ಪೋಲಿ ಹುಡುಗರು ಗುಂಪು ಕಟ್ಟಿಕೊಂಡು ಬಡಾವಣೆಯಲ್ಲಿ ಎಣ್ಣೆ ಪಾರ್ಟಿ ನಡೆಸಿ ಬಡಾವಣೆ ಕುಡುಕರ ಅಡ್ಡೆಯಾಗಿ ನಿರ್ಮಾಣವಾಗಿದೆ. ಬಡಾವಣೆ ನಿರ್ಮಾಣವಾಗಿ 20 ವರ್ಷಗಳೇ ಆದ್ರೂ ಪ್ರಾಧಿಕಾರ ಮಾತ್ರ ಅಭಿವೃದ್ಧಿ ಮಾಡುವ ಚಿಂತನೆ ಮಾಡಿಲ್ಲ.
ಒಟ್ಟಾರೆ, ಹೇಗಾದರೂ ಒಂದು ಸ್ವಂತ ಸೂರು ಹೊಂದಬೇಕೆಂಬ ಆಸೆಯಿಂದ ಕಷ್ಟ ಪಟ್ಟು ನಿವೇಶನ ಕೊಂಡ ಜನ್ರೂ ಇದೀಗ ಬಾಡಿಗೆ ಮನೆಯಲ್ಲೇ ಇರುವಂತಾಗಿದೆ. ಇನ್ನಾದರೂ ಪ್ರಾಧಿಕಾರ ಇತ್ತ ಕಡೆ ಗಮನಹರಿಸಿ ಮೂಲ ಸೌಕರ್ಯಗಳನ್ನು ಕೊಟ್ಟು ಬಡಾವಣೆ ಅಭಿವೃದ್ಧಿ ಮಾಡಬೇಕಾಗಿದೆ.
ಪ್ರವೀಣ್ ಎಂ ಎಚ್ ಪವರ್ ಟಿವಿ ರಾಮನಗರ