Wednesday, January 22, 2025

ಬಜೆಟ್ ಮಂಡಿಸಿದ ಸಿಎಂಗಳೆಲ್ಲಾ ನಾನು ಆರ್ಥಿಕ ತಜ್ಞರೆಂದು ಹೇಳಿಕೊಂಡಿಲ್ಲ : ಪ್ರತಾಪ್ ಸಿಂಹ

ಮೈಸೂರು: ನನ್ನನ್ನು ರಾಜಕೀಯವಾಗಿ ಎದುರಿಸಲಾಗದೆ ಈ ರೀತಿ ವಿಚಾರ ತಿಳಿದು ವಿವಾದ ಮಾಡುತ್ತಾರೆ, ಮಾಡಲಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯನವರನ್ನ ವಯಕ್ತಿಕವಾಗಿ ಟೀಕಿಸಿದ್ದೇನೆ. ನೀವು ಆರ್ಥಿಕ ತಜ್ಞರಲ್ಲ, ನೀವು ಬರಿ ಎಲ್ ಎಲ್ ಬಿ ಲಾ ಪ್ರಾಕ್ಟೀಸ್ ಮಾಡಿರುವ ವ್ಯಕ್ತಿ ಎಂದು ಹೇಳಿದ್ದೇನೆ. ಇದರಲ್ಲಿ ವಕೀಲರ ಸಮೂಹಕ್ಕೆ ಅವಮಾನ ಮಾಡುವ ಪ್ರಶ್ನೆ ಎಲ್ಲಿಂದ ಬರುತ್ತೆ. ನನ್ನನ್ನು ನೀನು ಆರ್ಥಿಕ ತಜ್ಞ ಅಲ್ಲಾ ಬರಿ ಅಂಕಣಕಾರ ಎಂದರೆ ಅದು ಪತ್ರಕರ್ತರಿಗೆ ಮಾಡಿದ ಅವಮಾನಾನ ಎಂದರು.

ಅದಲ್ಲದೇ, ಸಿದ್ದರಾಮಯ್ಯ ಬಜೆಟ್ ಮಂಡಿಸಿ ಜಂಭದ ಕೋಳಿತರ ಓಡಾಡುತ್ತಿದ್ದರು. ಅಚರಿಗೆ ಆರ್ಥಿಕತೆಯ ಸಂಪೂರ್ಣ ಜ್ಞಾನ ಇಲ್ಲ ಎಂದು ಹೇಳಿದ್ದೇನೆ. ಬಜೆಟ್ ಮಂಡಿಸಿದ ಸಿಎಂಗಳೆಲ್ಲಾ ನಾನು ಆರ್ಥಿಕ ತಜ್ಞರೆಂದು ಹೇಳಿಕೊಂಡಿಲ್ಲಾ. ಕಳೆದ ಹತ್ತು ವರ್ಷಗಳಿಂದ ಬಜೆಡ್ ಸಿದ್ಧ ಮಾಡುತ್ತಿರುವವರು ಹಿರಿಯ ಐಎಎಸ್ ಅಧಿಕಾರಿ ಎ.ಎನ್.ಎಸ್ ಪ್ರಸಾದ್ ಅವರು ಬರೆದು ಕೊಟ್ಟಿದ್ದನ್ನ ಮುಖ್ಯಮಂತ್ರಿಗಳು ಓದುತ್ತಾರೆ. ಇದನ್ನೇ ಸಿದ್ದರಾಮಯ್ಯನವರು ನಾನು ಆರ್ಥಿಕ ತಜ್ಞ ಎಂಬ ರೀತಿ ಹೇಳಿಕೊಳ್ಳುತ್ತಾರೆ‌. ಇದನ್ನೇ ನಾನು ಪ್ರಶ್ನೆ ಮಾಡಿದ್ದೇನೆ. ಇದರಲ್ಲಿ ತಪ್ಪೇನಿದೆ. ಕಾಂಗ್ರೆಸ್​​ನವರು ಚಡ್ಡಿ ಸುಟ್ಟರು.‌ ಈಗ ನನ್ನ ಪೋಸ್ಟರ್ ಸುಡುತ್ತಿದ್ದಾರೆ ಸುಡಲಿ ಬಿಡಿ ನನ್ನನ್ನು ರಾಜಕೀಯವಾಗಿ ಎದುರಿಸಲಾಗದೆ ಈ ರೀತಿ ವಿಚಾರ ತಿಳಿದು ವಿವಾದ ಮಾಡುತ್ತಾರೆ, ಮಾಡಲಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

RELATED ARTICLES

Related Articles

TRENDING ARTICLES