Monday, December 23, 2024

ಮಿಲಿಯನ್ ಹಿಟ್ಸ್​ ದಾಖಲಿಸಿದ ‘ಓ ಮೈ ಲವ್’​ ಸಾಂಗ್​

ಸುಪ್ರೀಂ​​​ ಹೀರೋ ತನಯ ಅಕ್ಷಿತ್​ ಶಶಿಕುಮಾರ್​ ಪಕ್ಕಾ ಕ್ಲಾಸ್​, ಮಾಸ್​​ ರೋಲ್​ನಲ್ಲಿ ಮಿಂಚೋಕೆ ಸಜ್ಜಾಗಿದ್ದಾರೆ. ಕೆಜಿಎಫ್​​ ಮಾಸ್​ ಪ್ರೇಕ್ಷಕರನ್ನು ಸೆಳೆದರೆ, 777ಚಾರ್ಲಿ ಕ್ಲಾಸ್​ ಪ್ರೇಕ್ಷಕರನ್ನ ಇಂಪ್ರೆಸ್​ ಮಾಡಿತ್ತು. ಇದೀಗ ಕ್ಲಾಸ್​ ಅಂಡ್​ ಮಾಸ್​ ವೆಂಚರ್​ನಲ್ಲಿ ಅಬ್ಬರಿಸೊಕೆ ಓ ಮೈ ಲವ್​ ಸಿನಿಮಾ ಬರ್ತಿದೆ. ಹಾಡೊಂದು ಹೊಸ ದಾಖಲೆ ಬರೆದಿದೆ.

ಮಿಲಿಯನ್ ಹಿಟ್ಸ್​ ದಾಖಲಿಸಿದ ‘ಓ ಮೈ ಲವ್’​ ಸಾಂಗ್​

ಎಲ್ಲಾ ಪ್ಲಾಟ್​ಫಾರ್ಮ್​ಗಳಲ್ಲೂ ಡ್ಯಾಡಿ ಸಾಂಗ್​ ವೈರಲ್​

ಹಿರಿಯ ನಟ ಶಶಿಕುಮಾರ್​ ಅವ್ರ ಪುತ್ರ ಅಕ್ಷಿತ್​ ಶಶಿಕುಮಾರ್​ ಅಭಿನಯದ ಮೋಸ್ಟ್​ ಎಕ್ಸ್​​ಪೆಕ್ಟೆಡ್​​ ಸಿನಿಮಾ ಓ ಮೈ ಲವ್​​. ಸ್ಯಾಂಡಲ್​​ವುಡ್​ನ​ ಮೂಲೆ ಮೂಲೆಯಲ್ಲೂ ಓ ಮೈ ಲವ್​ ಚಿತ್ರದ ಬಗ್ಗೆಯೇ ಟಾಕು. ಟೀಸರ್ ಹಾಗೂ ಸಾಂಗ್ಸ್ ನೋಡಿ ಕಾತರರಾಗಿರೋ ಸಿನಿಪ್ರಿಯರು, ರಿಲೀಸ್ ಡೇಟ್​​ನೇ ಎದುರು ನೋಡ್ತಿದ್ದಾರೆ. ಅಕ್ಷಿತ್​ ಮ್ಯಾನರಿಸಂ, ರೊಮ್ಯಾಂಟಿಕ್​ ಲುಕ್, ಆ್ಯಕ್ಷನ್​ಗೆ ಫಿದಾ ಆಗಿದ್ದು, ಕನ್ನಡಕ್ಕೊಬ್ಬ ಭರವಸೆಯ ನಾಯಕನಟನ ಆಗಮನ ಆಗ್ತಿದೆ.

ಈಗಾಗ್ಲೇ  ಪ್ರತಿ ಹಂತದಲ್ಲೂ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ರಿಯಲ್ ಸ್ಟಾರ್​ ಉಪೇಂದ್ರ, ಚಿತ್ರದ ಮೊದಲ ಹಾಡನ್ನ ಲಾಂಚ್ ಮಾಡಿ ಶುಭ ಹಾರೈಸಿದ್ರು. ಇದಾದ ನಂತ್ರ, ಟಾಲಿವುಡ್​ ಚಿತ್ರಬ್ರಹ್ಮ  ಕೆ. ರಾಘವೇಂದ್ರರಾವ್​ ಟೀಸರ್​ ವೀಕ್ಷಿಸಿ ಮೇಕಿಂಗ್​ ಸ್ಟೈಲ್​​​, ಹಾಗೂ ಸಿನಿಮಾ ಟೀಂ  ಪರಿಶ್ರಮಕ್ಕೆ ಫುಲ್​ ಫಿದಾ ಆಗಿದ್ರು. ಜೊತೆಗೆ  ಬೆನ್ನು ತಟ್ಟಿ ಶುಭ ಹಾರೈಸಿದ್ದರು.

ಸದಾ ಕನ್ನಡದ ಸಿನಿಮಾಗಳ ಬಗ್ಗೆ ವಿಮರ್ಶೆ ಮಾಡುತ್ತಾ ಸುದ್ದಿಯಲ್ಲಿರೋ ಮಾಜಿ ಪೊಲೀಸ್​ ಆಯುಕ್ತರಾದ ಭಾಸ್ಕರ್​ ರಾವ್​, ನಿನ್ನ ಡ್ಯಾಡಿ ನಂಗೆ ಹಾಡನ್ನ ರಿಲೀಸ್ ಮಾಡಿ ಚಿತ್ರದ ಕುರಿತು ಪ್ರಶಂಸೆಯ ಮಾತುಗಳನ್ನಾಡಿದ್ರು. ಹೀಗೆ, ರಿಲೀಸ್​ಗೂ ಮುನ್ನವೇ ಬೇಜಾನ್​ ಹೈಪ್​ ಕ್ರಿಯೇಟ್​ ಮಾಡಿರೋ ಓ ಮೈ ಲವ್ ಸಿನಿಮಾ, ಮತ್ತೊಮ್ಮೆ ಯೂಟ್ಯೂಬ್​ನಲ್ಲಿ ಟಾಪ್​ ಟ್ರೆಂಡಿಂಗ್​ ಸೆಟ್​​ ​ಮಾಡಿದೆ. ನಿನ್ನ ಡ್ಯಾಡಿ ನಂಗೆ ಸಾಂಗ್​ ಮಿಲಿಯನ್​ ಹಿಟ್ಸ್​ ದಾಖಲೆ ಬರೆಯುವ ಮೂಲಕ ಸಖತ್​ ಸೌಂಡ್​ ಮಾಡ್ತಿದೆ.

ಯ್ಯೂಟ್ಯೂಬ್​​, ಟಿಕ್​ ಟಾಕ್​​, ಫೇಸ್​​ಬುಕ್​​​, ಇನ್​ಸ್ಟಾಗ್ರಾಂ, ಮೋಜೊ, ಹೀಗೆ ಎಲ್ಲಾ ಸೋಶಿಯಲ್​ ಮೀಡಿಯಾದಲ್ಲೂ ಈ ಹಾಡು ಎಲ್ಲರ ಗುಂಗಿಡಿಸಿದೆ. ನಿನ್ನ ಡ್ಯಾಡಿ ನಂಗೆ ಸಾಂಗಿನ ಮತ್ತಿನಲ್ಲಿ ಎಲ್ಲರೂ ತಲೆದೂಗುತ್ತಿದ್ದಾರೆ. ಅಕ್ಷಿತ್​ ಶಶಿಕುಮಾರ್​​, ಕೀರ್ತಿ ಆರ್​ ಕಲ್ಕೇರಿ ಹಾಡಿನಲ್ಲಿ ಮಸ್ತ್​ ಸ್ಟೆಪ್ಸ್​ ಹಾಕಿದ್ದಾರೆ. ಡಾ ವಿ. ನಾಗೆಂದ್ರ ಪ್ರಸಾದ್​ ಕ್ಯಾಚಿ ಸಾಹಿತ್ಯಕ್ಕೆ ಎಲ್ಲರೂ ಮರುಳಾಗಿದ್ದಾರೆ. ಜಿ ರಾಮಾಂಜಿನಿ ನಿರ್ಮಾಣದಲ್ಲಿ, ಸ್ಮೈಲ್ ಶ್ರೀನು ನಿರ್ದೇಶನಕ್ಕೆ ಪ್ರೇಕ್ಷಕರು ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಸಾಧು ಕೋಕಿಲ, ಪವಿತ್ರಾ ಲೋಕೇಶ್​ ತಾರಾಗಣದಲ್ಲಿ ಸದ್ಯದಲ್ಲೇ ಓ ಮೈ ಲವ್​ ಪ್ಯಾರ್​ ಕಹಾನಿ ತೆರೆಕಂಡು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲಿದೆ.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES