Sunday, October 6, 2024

ಇನ್ನೂ ಬಗೆಹರೆಯದ ಈದ್ಗಾ ಭೂಮಾಲಿಕತ್ವ ವಿವಾದ

ಚಾಮರಾಜನಗರ :  ಕಗ್ಗಂಟಾಗಿ ಉಳಿಯುತ್ತಿದೆ ಚಾಮರಾಜಪೇಟೆ ಈದ್ಗಾ ಮೈದಾನ ಪ್ರಕರಣ ಹೀಗಾಗಿ ವಕ್ಫ್ ಬೋರ್ಡ್ ಗೆ ನೋಟಿಸ್ ನೀಡಲು ಬಿಬಿಎಂಪಿ ಮುಂದಾಗಿದೆ.

ಬಿಬಿಎಂಪಿ – ವಕ್ಫ್ ಬೋರ್ಡ್ ಪರಸ್ಪರ ಮೈದಾನ ನಮ್ಮ ಸ್ವತ್ತು ಎನ್ನುತ್ತಿವೆ. ಸದ್ಯದ ಮಟ್ಟಿಗೆ ಕಾನೂನು ಹೋರಾಟವೇ ಬಿಬಿಎಂಪಿಗೆ ಅನಿವಾರ್ಯವಾಗಿದ್ದು, ಈ ಹಿನ್ನೆಲೆ ವಕ್ಫ್ ಬೋರ್ಡ್ ಕಮಿಟಿಗೆ ನೋಟೀಸ್ ರೆಡಿ ಮಾಡಿದೆ, ಇಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತರಿಂದ ವಕ್ಫ್ ಬೋರ್ಡ್ ಗೆ ನೋಟೀಸ್ ನೀಡಲಾಗಿದ್ದು, ಚಾಮರಾಜಪೇಟೆ ಈದ್ಗಾ ಮೈದಾನದ ಕುರಿತು ದಾಖಲೆ ಸಲ್ಲಿಸುವಂತೆ ಸೂಚನೆಯನ್ನು ನೀಡಿದ್ದಾರೆ.

ಅದಲ್ಲದೆ, ಮೂರು ದಿನದೊಳಗೆ ನೋಟೀಸ್ ಗೆ ದಾಖಲೆ ಸಹಿತ ಉತ್ತರಿಸುವಂತೆ ಸೂಚನೆ ನೀಡಿದ್ದು, ಮೈದಾನದ ಕೆಲ ಮೂಲ ದಾಖಲೆಗಳು, ಖಾತಾ ಸುಪ್ರಿಂ ಕೋರ್ಟ್ ಆದೇಶದ ಪ್ರತಿಗಳು ಬಿಬಿಎಂಪಿ ಬಳಿ ಇದೆ. ಅದೇ ರೀತಿ ವಕ್ಭ್ ಬೋರ್ಡ್ ಬಳಿ ಕೆಲ ದಾಖಲೆಗಳಿವೆ ಅಂತಿವೆ. ಈ ಕಾರಣಕ್ಕೆ ಈಗಾಗಲೇ ಕಾನೂನು ಮೊರೆ ಹೋಗಿರುವ ಬಿಬಿಎಂಪಿ ವಕ್ಫ್ ಬೋರ್ಡ್ ದಾಖಲೆ ಪರಿಶೀಲಿಸಿ ‌ನಂತರ ಗ್ರೌಂಡ್ ಬಗ್ಗೆ ಅಂತಿಮ ತೀರ್ಮಾನ ನಿರ್ಧರಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳ ಉನ್ನತ ಮೂಲಗಳಿಂದ ಖಚಿತ ಮಾಹಿತಿಯನ್ನು ಪಡೆಯಲಿದ್ದಾರೆ.

RELATED ARTICLES

Related Articles

TRENDING ARTICLES