Monday, December 23, 2024

ರಿಷಬ್ ಶೆಟ್ಟಿ & ಟೀಂ ಹರಿಕಥೆ ಕೇಳಿ ಸುಸ್ತಾದ ಖಾಕಿ ಪಡೆ

ರಿಷಬ್​ ಶೆಟ್ಟಿ ಸಿನಿಮಾಗಳಂದ್ರೆ ಕೇಳ್ಬೇಕಾ. ಮಸ್ತ್​ ಮನರಂಜನೆ. ಒಂದೊಳ್ಳೆ ಮೆಸೇಜ್​​. ಲವ್ವು, ಆ್ಯಕ್ಷನ್​​, ಕಾಮಿಡಿ ಎಲ್ಲಾ ಮಸಾಲೆ ಬೆರಸಿದ ರುಚಿಯಾದ ಭೋಜನ. ರಿಷಬ್​​ ಕಾಲ್​​ ಶೀಟ್ ಸದ್ಯ ಸಿಗಲ್ಲ ಬಿಡಿ. ಹರಿಕಥೆ ಕೇಳಿದವ್ರಿಗೆ ವಿಭಿನ್ನವಾಗಿ ಗಿರಿಕಥೆ ಹೇಳೋಕೆ ಬರ್ತಿದ್ದಾರೆ ರಿಷಬ್ ಶೆಟ್ಟಿ. ಸದ್ಯ ಎಲ್ಲೆಲ್ಲೂ ಈ ಚಿತ್ರದ  ಟ್ರೈಲರ್​ದೇ ಟಾಕು. ಸಿಕ್ಕಾಪಟ್ಟೆ ನಗಿಸ್ತಿರೋ ಟ್ರೈಲರ್​​ ಕರಾಮತ್ತಿನ ಬಗ್ಗೆ ತಿಳಿಸ್ತೀವಿ.

ರಿಷಬ್ ಶೆಟ್ಟಿ & ಟೀಂ ಹರಿಕಥೆ ಕೇಳಿ ಸುಸ್ತಾದ ಖಾಕಿ ಪಡೆ

ಶೆಟ್ರ ಕಾಮಿಡಿ ಕಚಗುಳಿಗೆ  ಫುಲ್​ ಫಿದಾ ಆಗಿರೋ ಫ್ಯಾನ್ಸ್​

ನೆಕ್ಸ್ಟ್​​ ಲೆವೆಲ್​ ಟ್ರೈಲರ್​​.. ನೆಕ್ಸ್ಟ್​​ ಲೆವೆಲ್ ಕಾಮಿಡಿ..!

ರಿಲೀಸ್​ ಆದ ಕೆಲವೇ ಕ್ಷಣಗಳಲ್ಲಿ ಲಕ್ಷಗಟ್ಟಲೆ ವೀವ್ಸ್

ದೇವಸ್ಥಾನಗಳ ಮುಂದೆ ರಾತ್ರಿ ಇಡೀ ಹರಿಕಥೆ  ಕೇಳಿದವ್ರಿಗೆ ಈ ಸಿನಿಮಾ ಕೂಡ ಪೌರಾಣಿಕ ಕಥೆ ಅನಿಸಬಹುದು. ಅದ್ರೆ, ಒಮ್ಮೆ ಹರಿಕಥೆ ಅಲ್ಲ ಗಿರಿಕಥೆ ಟ್ರೈಲರ್​ ನೋಡಿ. 2 ನಿಮಿಷ 40 ಸೆಕೆಂಡುಗಳ ಕಾಲ ನಕ್ಕು ನಕ್ಕು ಸುಸ್ತಾಗ್ತೀರಾ. ಟ್ರೈಲರ್​ನಲ್ಲೇ ಈ ಪಾಟಿ ಕಿಕ್​​ ಕೊಟ್ಟಿರೋ ಚಿತ್ರತಂಡ, ಸಿನಿಮಾ ಪೂರ ನಗೆಯ ಕಡಲಲ್ಲಿ ಪ್ರೇಕ್ಷಕರನ್ನು ತೇಲಿಸೋದು ಮಾತ್ರ 100% ಪಕ್ಕಾ ಆಗಿದೆ.

ಸಿನಿಮಾ ಸೆಟ್ಟೇರಿದಾಗ್ಲೇ ಎಲ್ಲರಿಗೂ ಸಖತ್​ ಹೋಪ್​ ಇತ್ತು. ರಿಷಬ್​ ಶೆಟ್ಟಿ ಸಿನಿಮಾಗಳನ್ನು ಕಾದು ನೋಡೋ ಅಭಿಮಾನಿ ಬಳಗವಿದೆ. ಇನ್ನು ಪೋಸ್ಟರ್​​, ಟೀಸರ್​​ ನೋಡಿದವ್ರು ಕ್ಲೀನ್​ ಬೋಲ್ಡ್​ ಆಗಿದ್ರು. ಅಂತೂ, ಈ ಬಾರಿ ಶೆಟ್ರು ನಗಿಸೋಕೆ ರೆಡಿಯಾಗಿ ನಿಂತಿದ್ದಾರೆ. ಗಿರಿ ಕಥೆ ಹೇಳೋಕೆ  ಜೂನ್​ 23ಕ್ಕೆ ಸಿಲ್ವರ್​ ಸ್ಕ್ರೀನ್ ಮೇಲೆ ಗ್ರ್ಯಾಂಡ್​ ಎಂಟ್ರಿ ಕೊಡ್ತಿದ್ದಾರೆ. ಈ ಮುಂಚೆ ಚಿತ್ರತಂಡದಿಂದ ಟ್ರೈಲರ್​ ರಿಲೀಸ್​ ಆಗಿದ್ದು, ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡೋ ಮನ್ಸೂಚನೆ ಕೊಟ್ಟಿದೆ.

ಚಿತ್ರದ ಟ್ರೈಲರ್​ ಅನಂದ್​ ಅಡಿಯೋ ಯೂಟ್ಯೂಬ್​ ಚಾನಲ್​ನಲ್ಲಿ ರಿಲೀಸ್​ ಆಗ್ತಿದ್ದಂತೆ ಲಕ್ಷಗಟ್ಟಲೆ ವೀವ್ಸ್ ಕಂಡಿದೆ. ರಿಪೀಟ್​ ಮೋಡ್​​ನಲ್ಲಿ ವಿಭಿನ್ನ ಟ್ರೈಲರ್​ ನೋಡಿ ಎಂಜಾಯ್ ಮಾಡ್ತಿದ್ದಾರೆ ಸಿನಿರಸಿಕರು. ಕಾಮಿಡಿ ಪಂಚ್​​, ಡೈಲಾಗ್ಸ್​​ ಎಲ್ಲವೂ ಪ್ರೇಕ್ಷಕರಿಗೆ ಮೋಡಿ ಮಾಡಿದೆ. ಟ್ರೈಲರ್​ನಲ್ಲಿ ಕೃಷ್ಣ ಅವ್ರ ಮಗ ಗಿರಿಯಾಗಿ ಎಲ್ಲರಿಗೂ ಕಥೆ ಹೇಳೋಕೆ ಹೊರಟಿದ್ದಾರೆ ರಿಷಬ್​​. ನಾನೊಬ್ಬ ಒಳ್ಳೆ ಡೈರೆಕ್ಟರ್​​. ಸೂಪರ್ ಅಗಿ ಕಥೆ ಮಾಡಿದೀನಿ. 100% ಹಿಟ್ ಆಗೋದು ಗ್ಯಾರೆಂಟಿ ಅಂತ ಎಲ್ಲರಿಗೂ ತಲೆ ತಿಂತಿದ್ದಾರೆ ಶೆಟ್ರು.

ಖಾಕಿ ಖದರ್​ನಲ್ಲಿ ಪ್ರಮೋದ್​ ಶೆಟ್ಟಿ, ರಿಷಬ್​​ ಅವ್ರಿಗೆ ಏರೋಪ್ಲೇನ್​ ಹತ್ತಿಸ್ತಿದ್ದಾರೆ. ಪ್ರಮೋದ್​ ಶೆಟ್ಟಿಗೆ ಚಳ್ಳೆ ಹಣ್ಣು ತಿನ್ನಿಸೋಕೆ ರಿಷಬ್​ ಶೆಟ್ಟಿ ಸುಳ್ಳಿನ ಮೇಲೆ ಸುಳ್ಳು ಹೇಳ್ತಿದ್ದಾರೆ. ಇದ್ರ ಜೊತೆಗೆ ವಿಕಟಕವಿ ಯೋಗರಾಜ್​ ಭಟ್​ ಕೂಡ ಸಾಥ್​ ಕೊಟ್ಟಿದ್ದಾರೆ. ಕನ್ನಡ ಇಂಡಸ್ಟ್ರಿಯಲ್ಲಿ ವಿನೂತನವಾಗಿ ಪಕ್ಕಾ ಲವಲವಿಕೆಯಿಂದ ಕೂಡಿರೋ ಈ ಟ್ರೈಲರ್​ಗೆ ಸ್ಯಾಂಡಲ್​ವುಡ್​​ ಸೇರಿ ಚಿತ್ರರಸಿಕರೆಲ್ಲಾ ಸಖತ್​ ಫಿದಾ ಆಗಿದ್ದಾರೆ.

ಸಿಹರಿಕಥೆಯಲ್ಲ ಗಿರಿಕಥೆ ಚಿತ್ರದ ಹಾಡುಗಳು ಸಿಕ್ಕಾಪಟ್ಟೆ ಹಿಟ್​ ಆಗಿವೆ. ಸ್ಟಾರ್​ ಕಾಸ್ಟಿಂಗ್​ ಕೂಡ ಚ್ಯೂಸಿಯಾಗಿದೆ. ನಾಯಕಿಯಾಗಿ ತಪಸ್ವಿನಿ ಪೂಣಚ್ಚ, ಹೆಂಗೇ ನಾವು ಖ್ಯಾತಿಯ ರಚನಾ ಇಂದರ್, ಹೊನ್ನವಳ್ಳಿ ಕೃಷ್ಣ, ಯೋಗರಾಜ್​ ಭಟ್​​, ಪ್ರಮೋದ್​ ಶೆಟ್ಟಿ ದೊಡ್ಡ ಕಲಾವಿದರ ದಂಡೇ ಇದೆ. ರಿಷಬ್​ ಮೇಲಿನ ನಂಬಿಕೆಗೆ ಸಂದೇಶ್​ ನಾಗರಾಜ್​ ಈ ಸಿನಿಮಾ ನಿರ್ಮಾಣಕ್ಕೆ  ಕೈ ಹಾಕಿದ್ದಾರೆ.

ಕರಣ್​ ಅನಂತ್ ಹಾಗೂ​ ಅನಿರುದ್ಧ್​​ ಮಹೇಶ್ ಜಂಟಿ​ ನಿರ್ದೇಶನದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆಯಂತೆ. ವಾಸುಕಿ ವೈಭವ್​ ಮ್ಯೂಸಿಕ್​ ಜ್ಯೂನಿಯರ್​ ಮೊನಾಲಿಸಾ ಹಾಡಿನಲ್ಲಿ ಎದ್ದು ಕಾಣುತ್ತದೆ. ಸಂದೇಶ್​​ ಪ್ರೊಡಕ್ಷನ್​ ಬ್ಯಾನರ್​ ಅಡಿಯಲ್ಲಿ ಚಿತ್ರ ಮೂಡಿ ಬಂದಿದೆ.  777ಚಾರ್ಲಿ ಎಲ್ಲರನ್ನೂ ಅಳಿಸಿದ್ರೆ, ನಕ್ಕು ನಗಿಸೋಕೆ ಶೆಟ್ರ ಗ್ಯಾಂಗ್​ ಜೂನ್​ 23ಕ್ಕೆ ತೆರೆಗೆ ಬರೋಕೆ ಸಜ್ಜಾಗಿದೆ. ಗಿರಿಕಥೆಗೆ ಎಲ್ರೂ ಆಲ್​ ದಿ ಬೆಸ್ಟ್ ಹೇಳೋಣ.

ರಾಕೇಶ್​ ಅರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES