Monday, May 20, 2024

ಕಾರ್ಮಿಕ ಇಲಾಖೆಯ ಸಚಿವರ ಸ್ವ ಕ್ಷೇತ್ರದಲ್ಲಿ ಇನ್ನೂ ಸಿಕ್ಕಿಲ್ಲ ನೆರೆ ಪರಿಹಾರ

ಕಾರವಾರ : ಪ್ರವಾಹದಲ್ಲಿ ಮನೆ ಕೊಚ್ಚಿ ಹೋಗಿ ಮೂರು ವರ್ಷವಾದರೂ ಇನ್ನೂ ಪರಿಹಾರ ಸಿಗಲಿಲ್ಲ. ಹೀಗಾಗಿ ಮನೆ ಮಠ ಇಲ್ಲದೆ ಮೂರು ವರ್ಷದಿಂದ ಸಂಕಷ್ಟದಲ್ಲಿ ಸಿಲುಕಿದ್ದಾರೆ.

2019ರಲ್ಲಿ ಉಂಟಾಗಿದ್ದ ಪ್ರವಾಹಕ್ಕೆ ನೆಲಸಮವಾಗಿದ್ದ ಮನೆ ರಾತ್ರೋ ರಾತ್ರಿ ಉಟ್ಟ ಬಟ್ಟೆಯಲ್ಲೆ ಓಡಿ ಹೋಗಿ ಬದುಕುಳಿದ ಕುಟುಂಬ ಇನ್ನೂ ಪರಿಹಾರ ಸಿಗದೆ ಇರುವುದರಿಮದ ಆತ್ಮಹತ್ಯೆ ಒಂದೆ ದಾರಿ ಎನ್ನುತ್ತಿರುವ ಕುಟುಂಬ ಪೂರ್ತಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ ಅಂದಿನ ಸರಕಾರ ಕೇವಲ 95ಸಾವಿರ ನೀಡಿ ಅಧಿಕಾರಿಗಳು ಸುಮ್ಮನಾಗಿದ್ದಾರೆ.

ಅದಲ್ಲದೇ, ಅಂದಿನ ಜಿಲ್ಲಾ ಉಸ್ತುವಾರಿ ಜಗದೀಶ ಶೆಟ್ಟರ್ ಸಹ ಭೇಟಿ ನೀಡಿ ಶೀಘ್ರದಲ್ಲಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಯಲ್ಲಾಪುರ ತಾಲೂಕಿನ ಗುಳ್ಳಾಪುರದ ನಾಗರಾಜ ಪೂಜಾರಿ ಕುಟಂಬ ಇದೀಗೂ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಇನ್ನು, ಐದು ಲಕ್ಷ. ಪರಿಹಾರ ಸಿಗಬಹುದು ಎಂದು ಸಾಲ ಮಾಡಿ ಮನೆ‌ ನಿರ್ಮಾಣಕ್ಕೆ ಕೈ ಹಾಕಿದ ನಾಗರಾಜ ಪೂಜಾರಿ ಮನೆ ಪೂರ್ತಿ ನಿರ್ಮಾಣ ಮಾಡಲಾಗದೆ ಅರ್ಧಕ್ಕೆ ಕಾಮಗಾರಿ ಸ್ಥಗಿತವಾಗಿದೆ. ಅತ್ತ ಪರಿಹಾರವು ಇಲ್ಲದೆ ಇತ್ತ ಸಾಲ ತೀರಿಸಲಾಗಿದೆ ಪರದಾಟ ಮಾಡುತ್ತಿದ್ದು, ನಾಗರಾಜ ಪೂಜಾರಿ ಕುಟುಂಬ ಸಂಕಷ್ಟದಲ್ಲಿ ಕಾಲ ಕಳೆಯುತ್ತಿದೆ. ಪರಿಹಾರಕ್ಕಾಗಿ ಮೂರು ವರ್ಷದಿಂದ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿರುವ ನಾಗರಾಜ ಪೂಜಾರಿ ಶೀಘ್ರದಲ್ಲಿ ಪರಿಹಾರ ನೀಡದೆ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪವರ್ ಟಿವಿ ಮುಂದೆ ಕಣ್ಣಿರು ಹಾಕಿದ್ದಾರೆ.

RELATED ARTICLES

Related Articles

TRENDING ARTICLES