Friday, April 4, 2025

ಮೋದಿ ನಾಯಿಗಿಂತ ಕಡೆಯಾಗಿ ಸಾಯ್ತಾನೆ: ಶೇಖ್‌ ಹುಸೇನ್‌

ನವದೆಹಲಿ : ರಾಹುಲ್‌ ಗಾಂಧಿಗೆ ಇಡಿ ವಿಚಾರಣೆ ವಿಚಾರವಾಗಿ ಕಾಂಗ್ರೆಸ್‌ ಪ್ರತಿಭಟನೆ ಜೋರಾಗ್ತಿದೆ. ಈ ಮಧ್ಯೆ, ಪ್ರೊಟೆಸ್ಟ್‌ ವೇಳೆ, ಕಾಂಗ್ರೆಸ್‌ ನಾಯಕರನ್ನು ವಶಕ್ಕೆ ಪಡೆಯಲಾಗಿತ್ತು. ಜೊತೆಗೆ ಹಲ್ಲೆ ಮಾಡಲಾಗಿದೆ ಎಂದು ಕೈ ಪಡೆ ಆರೋಪಿಸಿದೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿಚಾರಣೆ ನಡೆಸಲಾಗುತ್ತಿದೆ. ಆದ್ರೆ, ರಾಹುಲ್‌ಗಾಂಧಿ ED ವಿಚಾರಣೆಗೆ ಕೈ ಪಡೆ ಕೆರಳಿ ಕೆಂಡವಾಗಿದೆ. ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಸುತ್ತಿದೆ. ದೆಹಲಿಯಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಹಲವೆಡೆ ಟೈರ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು.

ಇಡಿ ಕಚೇರಿ ಮುಂದೆಯೇ ಹೈಡ್ರಾಮಾ ಕ್ರಿಯೇಟ್‌ ಆಗಿತ್ತು. ಕಾಂಗ್ರೆಸ್ ಪ್ರತಿಭಟನೆಯಲ್ಲಿ ರಾಜಧಾನಿಯಲ್ಲೂ ಕನ್ನಡಿಗರ ಆರ್ಭಟ ಜೋರಾಗಿತ್ತು. ಡಿ.ಕೆ.ಸುರೇಶ್ ರಣಕೇಕೆ ಹಾಕಿದ್ರು. ಬಿ.ವಿ.ಶ್ರೀನಿವಾಸ ಡ್ರಾಮಾ ಗಮನ ಸೆಳೆಯಿತು.

AICC ಕಚೇರಿ ಎದುರು ವಾಗ್ವಾದ, ತಳ್ಳಾಟ, ನೂಕಾಟ ಹೆಚ್ಚಾಗಿತ್ತು. ಪೊಲೀಸ್ ಅಧಿಕಾರಿಗೆ ಗಾಯ, ಪ್ರತಿಭಟನಾಕಾರರನ್ನ ಎಳೆದಾಡಿದ್ರು ಪೊಲೀಸರು.. ಈ ವೇಳೆ ಕಾಂಗ್ರೆಸ್‌ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ರಾಹುಲ್‌ಗಾಂಧಿ ವಿಚಾರಣೆಗೆ ಹಾಜರಾಗ್ತಿದ್ದಾರೆ.. ಆದ್ರೆ, ಅವರು ಇಡಿಗೆ ಸ್ಪಂದಿಸ್ತಿದ್ದಾರಾ..? ಅದಕ್ಕೆ ಉತ್ತರ ಶೂನ್ಯ.. ಹೌದು, ಕಳೆದ ಎರಡು ದಿನಗಳ ವಿಚಾರಣೆಯಲ್ಲಿ ತುಟಿ-ಪಿಟಿಕ್‌ ಎನ್ನದೆ ಅದೇ ರಾಗಾ ಅದೇ ಹಾಡು ಎನ್ನುವಂತಾಗಿದೆ.. ಹೌದು, ಮೂರನೇ ದಿನದ ವಿಚಾರಣೆ ವೇಳೆ ರಾಹುಲ್‌ ಸ್ಪಿನ್‌ಗೆ ಇಡಿ ಭರ್ಜರಿ ಕೌಂಟರ್‌ ಕೊಟ್ಟಿದೆ.

ಹಗರಣದ ಸಂಪೂರ್ಣ ಮಾಹಿತಿ ಕಲೆ ಹಾಕಲು ರಾಹುಲ್‌ ಮೇಲೆ ಎಷ್ಟೇ ಒತ್ತಡ ಹಾಕಿದ್ರೂ ಕಮಕ್‌ ಕಿಮಕ್‌ ಎನ್ನುತ್ತಿಲ್ಲ. ED ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಕಾಂಗ್ರೆಸ್ ನಾಯಕನನ್ನ ಗಿರಿಗಿಟ್ಲೆ ಹೊಡೆಸಿದ್ರು.
ಆದ್ರೆ, ಇಡಿ ಇಷ್ಟಕ್ಕೆ ಬಿಡಲ್ಲ ಅನ್ನೋ ಸೂಚನೆ ನೀಡಿದೆ ಜಾರಿ ನಿರ್ದೇಶನಾಲಯ. ಈ ಮಧ್ಯೆ, ಕಾಂಗ್ರೆಸ್‌ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರುತ್ತಿದ್ದಾರೆ.

‘ಕೈ’ ಮುಖಂಡ ಶೇಖ್ ಹುಸೇನ್ ವಿರುದ್ಧ FIR ದಾಖಲು :

ಇಷ್ಟಕ್ಕೆ ನಿಂತಿಲ್ಲ ಕಾಂಗ್ರೆಸ್‌ನವರ ಪ್ರತಿಭಟನೆಯ ವೈಖರಿ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಪ್ರತಿಭಟನೆ ವೇಳೆ ನಾಲಿಗೆ ಹರಿಬಿಟ್ಟಿದ್ದಾರೆ ಕಾಂಗ್ರೆಸ್‌ ಮುಖಂಡ ಶೇಖ್‌ ಹುಸೇನ್‌. ‘ನರೇಂದ್ರ ಮೋದಿ ನಾಯಿಗಿಂತ ಕಡೆಯಾಗಿ ಸಾಯ್ತಾನೆ ಎಂದು ಹೇಳಿಕೆ ಕೊಟ್ಟು ವಿವಾದದ ಕೇಂದ್ರ ಬಿಂದುವಾದರು.

ಸದ್ಯ ಪ್ರಧಾನಿ ವಿರುದ್ಧ ವಿವಾದಾತ್ಮಾಕ ಹೇಳಿಕೆ ಸಂಬಂಧ ಬಿಜೆಪಿ ದೂರು ನೀಡಿದ್ದು, ಈ ಸಂಬಂಧ FIR ದಾಖಲಾಗಿದೆ. ಒಟ್ಟಿನಲ್ಲಿ, ದೇಶಾದ್ಯಂತ ಕಾಂಗ್ರೆಸ್‌ ತೀವ್ರ ಪ್ರತಿಭಟನೆ ಮಾಡ್ತಿದೆ. ಆದ್ರೆ, ರಾಹುಲ್‌ ಗಾಂಧಿಗೆ ಇಡಿ ಗ್ರಿಲ್‌ ಚೋರಾಗಿದೆ.

ಸಂತೋಷ್‌ ಹೊಸಹಳ್ಳಿ, ಪವರ್‌ ಟಿವಿ, ನವದೆಹಲಿ

RELATED ARTICLES

Related Articles

TRENDING ARTICLES