Tuesday, November 5, 2024

ಜನಗಣಮನ ನೆನಪಿಸ್ತಿರೋ ಸತೀಶ್​ರ ಡಿಯರ್ ವಿಕ್ರಂ

ಚಂಬಲ್ ಚಿತ್ರದಲ್ಲಿ ಡಿಕೆ ರವಿ ಕಥೆಯನ್ನ ಹೊತ್ತು ಬಂದು ಸಂಚಲನ ಮೂಡಿಸಿದ್ದ ಅಭಿನಯ ಚತುರ ನೀನಾಸಂ ಸತೀಶ್, ಮತ್ತೊಮ್ಮೆ ಅಂಥದ್ದೇ ಸೆನ್ಸಿಬಲ್ ಸ್ಟೋರಿ ಜೊತೆ ಬರ್ತಿದ್ದಾರೆ. ಹುಟ್ಟು ದರಿದ್ರ ಆದ್ರೂ ಸಾವು ಚರಿತ್ರೆ ಆಗ್ಬೇಕು ಅಂತ ಸಮಾಜಕ್ಕಾಗಿ ಹೋರಾಡೋ ಯೂತ್ ಐಕಾನ್ ಆಗಿ ಸಿಡಿಯಲಿದ್ದಾರೆ.

ಜನಗಣಮನ ನೆನಪಿಸ್ತಿರೋ ಸತೀಶ್​ರ ಡಿಯರ್ ವಿಕ್ರಂ

ಚಂಬಲ್ ಹಾದಿಯಲ್ಲೇ ಮತ್ತೊಂದು ಹೊಸ ಪ್ರಯೋಗ

ಜೇಕಬ್ ಆ್ಯಕ್ಷನ್​​ ಕಟ್​.. ಶ್ರದ್ಧಾ ಜೊತೆ ಅಭಿನಯ ಚತುರ

ಗೋದ್ರಾ… ಈ ಟೈಟಲ್​​ನಲ್ಲಿ ಈ ಹಿಂದೆ ತಯಾರಾದ ನೀನಾಸಂ ಸತೀಶ್​ರ ಎಕ್ಸ್​ಪೆರಿಮೆಂಟಲ್ ಮೂವಿ ಇಂದು ಡಿಯರ್ ವಿಕ್ರಂ ಆಗಿ ಬದಲಾಗಿದೆ. ಹೌದು.. ಯಾವುದೇ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾದ ಸಿನಿಮಾ ಇದಲ್ಲ. ಹಾಗಾಗಿ ವಿವಾದಗಳಿಗೆ ಗುರಿ ಆಗಬಾರದು ಅನ್ನೋ ಕಾರಣಕ್ಕೆ ಚಿತ್ರತಂಡ ಡಿಯರ್ ವಿಕ್ರಂ ಆಗಿ ಟೈಟಲ್ ಬದಲಿಸಿ, ರಿಲೀಸ್​ಗೆ ಸಜ್ಜಾಗಿ ನಿಂತಿದೆ.

ಕ್ರಾಂತಿ ಹಾಗೂ ಪ್ರೀತಿಯ ಸುತ್ತ ಹೆಣೆದಿರೋ ಈ ಚಿತ್ರದ ಕಥೆ, ಪ್ರತಿ ಹೆಜ್ಜೆಯಲ್ಲೂ ಸಮಾಜದ ಹುಳುಕನ್ನು ತೀಕ್ಷ್ಣವಾಗಿ ಪ್ರಶ್ನಿಸುವ ಧೈರ್ಯ ಮಾಡಿದೆ. ಪ್ರಸ್ತುತ ರಾಜಕೀಯ ಅರಾಜಕತೆಯ ಕೈಗನ್ನಡಿಯಂತಿರೋ ಈ ಸಿನಿಮಾ, ಹತ್ತಾರು ಸೂಕ್ಷ್ಮ ವಿಚಾರಗಳನ್ನು ಟಚ್ ಮಾಡಲಿದೆಯಂತೆ.

ಜೇಕಬ್ ವರ್ಗೀಸ್ ಌಕ್ಷನ್ ಕಟ್ ಹೇಳಿರೋ ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಹಾಗೂ ಅಭಿನಯ ಚತುರ ನೀನಾಸಂ ಸತೀಶ್ ಲೀಡ್​ನಲ್ಲಿ ಕಾಣಸಿಗಲಿದ್ದು, ಅಚ್ಯುತ್ ಕೂಡ ಗಮನ ಸೆಳೆಯೋ ಪಾತ್ರ ಮಾಡಿದ್ದಾರೆ. ಅಂದಹಾಗೆ ಇದ್ರ ಹೊಸ ಟೀಸರ್ ಝಲಕ್, ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಮಲಯಾಳಂನ ಪೃಥ್ವಿರಾಜ್ ಸುಕುಮಾರನ್​ರ ಜನಗಣಮನ ಚಿತ್ರವನ್ನು ನೆನಪಿಸ್ತಿದೆ. ಅಷ್ಟರ ಮಟ್ಟಿಗೆ ಕಂಟೆಂಟ್​ನಲ್ಲಿ ಸತ್ವವಿರೋದು ಪಕ್ಕಾ ಆಗಿದೆ.

ಥಿಯೇಟ್ರಿಕಲ್ ರಿಲೀಸ್ ಮಾಡದೆ ಈ ಸಿನಿಮಾನ ಒಟಿಟಿ ಮೂಲಕ ರಿಲೀಸ್ ಮಾಡ್ತಿದೆ ಟೀಂ. ಅಂದಹಾಗೆ ಜೇಕಬ್- ಸತೀಶ್ ಕಾಂಬೋನಲ್ಲಿ ಐಎಎಸ್ ಆಫೀಸರ್ ಡಿಕೆ ರವಿ ಕುರಿತ ಚಂಬಲ್ ಸಿನಿಮಾ ಎಲ್ಲರ ಗಮನ ಸೆಳೆದಿತ್ತು. ಇದೀಗ ಕಮಲ್ ಹಾಸನ್​ರ ವಿಕ್ರಂ ಪ್ಯಾನ್ ಇಂಡಿಯಾ ಕಮಾಲ್ ಮಾಡ್ತಿದ್ದು, ಡಿಯರ್ ವಿಕ್ರಂ ಕೂಡ ಅದಕ್ಕಿಂತ ದೊಡ್ಡ ಮಟ್ಟಕ್ಕೆ ಸದ್ದು ಮಾಡಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES