Friday, April 25, 2025

ಅಪ್ಪುಗೆ ‘ಭಾರತ ರತ್ನ’ ನೀಡಬೇಕೆಂದು ಕಾಲ್ನಡಿಗೆ

ಬೆಂಗಳೂರು: ಕರ್ನಾಟಕ ರತ್ನ, ಪವರ್ ಸ್ಟಾರ್, ದಿ. ನಟ ಡಾ.ಪುನೀತ್ ರಾಜ್‍ಕುಮಾರ್​ಗಾಗಿ ಅಭಿಮಾನಿಯೊಬ್ಬ ವಿಭಿನ್ನ ಕಾರ್ಯಕ್ಕೆ ಮುಂದಾಗಿದ್ದಾನೆ.

‘ಅಪ್ಪು’ಗೆ ‘ಭಾರತ ರತ್ನ’ ನೀಡಬೇಕೆಂದು ಬರೋಬ್ಬರಿ 2100 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದಾನೆ. ತೆಲಂಗಾಣದ 55 ವರ್ಷದ ನಿವೃತ್ತ CRPF ಇನ್ಸ್ ಪೆಕ್ಟರ್ ರವಿಕುಮಾರ್ ಪುನೀತ್‍ ಅವರಿಗಾಗಿ ಕಾಲ್ನಡಿಗೆಯ ಮೂಲಕ ವಿಭಿನ್ನ ಕಾರ್ಯವನ್ನು ಕೈಗೊಂಡಿದ್ದಾರೆ. 120 ದಿನಗಳಲ್ಲಿ 3200 ಕಿಲೋ ಮೀಟರ್ ನಡೆಯುವ ಗುರಿಯನ್ನು ಅವರು ಹೊಂದಿದ್ದಾರೆ.

ಪ್ರತಿನಿತ್ಯ ಬೆಂಗಳೂರಿನ ಮೆಜೆಸ್ಟಿಕ್‍ನಿಂದ ಶುರು ಮಾಡಿ ಕಬ್ಬನ್ ಪಾರ್ಕ್ ಮತ್ತು ಲಾಲ್‍ಬಾಗ್‍ನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ದಿನಕ್ಕೆ 6 ರಿಂದ 7 ಗಂಟೆಗಳ ಕಾಲ ಕಾಲ್ನಡಿಗೆ ಮಾಡುತ್ತಿರುವ ರವಿಕುಮಾರ್ ಈಗಾಗಲೇ 2100 ಕಿ.ಮೀ. ಕಂಪ್ಲೀಟ್ ಮಾಡಿದ್ದಾರೆ. 98 ದಿನಗಳ ಹಿಂದೆ ರವಿಕುಮಾರ್ ಕಾಲ್ನಡಿಗೆ ಶುರು ಮಾಡಿದ್ದು, 120 ದಿನದೊಳಗಡೆ 3200 ಕಿಲೋ ಮೀಟರ್ ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದಾರಂತೆ.

RELATED ARTICLES

Related Articles

TRENDING ARTICLES