Sunday, December 22, 2024

ಪಾನಿಪುರಿ ಕಿಟ್ಟಿಯಿಂದ ಯಶ್ ಫಿಟ್ನೆಸ್ ಸೀಕ್ರೆಟ್ ರಿವೀಲ್

ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ ಅನ್ನೋ ಬಿಲಿಯನ್ ಡಾಲರ್ ಪ್ರಶ್ನೆ ತರಹ, ಇದೀಗ ಟ್ರೆಂಡಿಂಗ್​ನಲ್ಲಿರೋ ಮ್ಯಾಟರ್ ಅಂದ್ರೆ ಯಶ್ ಮುಂದಿನ ಪ್ರಾಜೆಕ್ಟ್. ಚಾಪ್ಟರ್ ಮೂರಾ ಅಥ್ವಾ ನರ್ತನ್ ವೆಂಚರ್ರಾ ಅಂತ ಅತೀವ ಕೌತುಕದಿಂದ ಕಾಯ್ತಿದ್ದ ಸಿನಿಪ್ರಿಯರಿಗೆ ಫಿಲ್ಮಿ ಪವರ್ ಟೀಂ ಎಕ್ಸ್​​ಕ್ಲೂಸಿವ್ ಮಾಹಿತಿ ಹೊತ್ತು ಬಂದಿದೆ. ರಾಕಿಭಾಯ್ ರಾಕಿಂಗ್ ಖಬರ್ ಜೊತೆ ಅವ್ರ ಫಿಟ್ನೆಸ್ ಸೀಕ್ರೆಟ್ ಹಾಗೂ ಡಯೆಟ್ ಸೀಕ್ರೆಟ್ ಕೂಡ ಹೇಳ್ತೀವಿ ನೋಡಿ.

ಪವರ್ ಟಿವಿಯಲ್ಲಿ ರಾಕಿಭಾಯ್ ನೆಕ್ಸ್ಟ್ ಪ್ರಾಜೆಕ್ಟ್ ಡಿಟೇಲ್ಸ್

#Y19 ಫಿಕ್ಸ್.. ನರ್ತನ್ ಸಿನಿಮಾ ಬಗ್ಗೆ ಎಕ್ಸ್​​ಕ್ಲೂಸಿವ್ ಅಪ್ಡೇಟ್ಸ್

ಪಾನಿಪುರಿ ಕಿಟ್ಟಿಯಿಂದ  ಯಶ್ ಫಿಟ್ನೆಸ್ ಸೀಕ್ರೆಟ್ ರಿವೀಲ್

ಫ್ಯಾನ್ಸ್​​ಗೆ ಶುಭ ಸುದ್ದಿ.. ಮಾಸ್ಟರ್​ಪೀಸ್ ಜೊತೆ ಪೂಜಾ..!

ತಾವು ನಟಿಸಿದ ಸಿನಿಮಾವೊಂದು 1500 ಕೋಟಿ ಗಳಿಸಿದೆ ಅಂದ್ರೆ ಆ ಚಿತ್ರದ ಸ್ಟಾರ್​ಗೆ ಸಹಜವಾಗಿಯೇ ಟೆನ್ಷನ್ ಜಾಸ್ತಿ ಆಗುತ್ತೆ. ಮುಂದಿನ ಹೆಜ್ಜೆ ಹೇಗಿಡಬೇಕು..? ಯಾರ ಜೊತೆ ಇಡಬೇಕು..? ಜನರ ನಿರೀಕ್ಷೆ ಗೆ ತಕ್ಕನಾದ ಯೋಜನೆಗಳು ರೂಪಿಸೋದು ಹೀಗೆ ಒಂದಾ ಎರಡಾ..? ಯೆಸ್.. ಸದ್ಯ ನ್ಯಾಷನಲ್ ಸ್ಟಾರ್ ಯಶ್ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಜಿಎಫ್ 2 ಅಭೂತಪೂರ್ವ ಯಶಸ್ಸು ರಾಕಿಭಾಯ್​​ನ ಬಿಗ್ ಕನ್ಫ್ಯೂಷನ್​ನಲ್ಲಿಟ್ಟಿತ್ತು. ಆದ್ರೀಗ ಆ ಕನ್ಫ್ಯೂಷನ್ ಕ್ಲಿಯರ್ ಆಗಿದೆ.

ಕೆಜಿಎಫ್ ಚಾಪ್ಟರ್-3 ಕಿಕ್​ಸ್ಟಾರ್ಟ್​ ಮಾಡ್ತಾರೆ ಅಂತ ಎಲ್ರೂ ಊಹಿಸುತ್ತಿರಬೇಕಾದ್ರೆ, ಇಲ್ಲ ಮಫ್ತಿ ಡೈರೆಕ್ಟರ್ ನರ್ತನ್ ಜೊತೆ ಕ್ಯಾಮೆರಾ ಮುಂದೆ ನಿಲ್ತೇನೆ ಅಂತ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ರಾಕಿಭಾಯ್. ಕೆವಿಎಣ್ ಪ್ರೊಡಕ್ಷನ್ಸ್​​ನಡಿ ತಯಾರಾಗಲಿರೋ ಯಶ್ 19ನೇ ಪ್ರಾಜೆಕ್ಟ್​​ಗೆ ನಾಯಕಿ ಪೂಜಾ ಹೆಗ್ಡೆ ಕೂಡ ಫಿಕ್ಸ್ ಆಗಿದ್ದು, ನಮ್ಮ ಮಾಸ್ಟರ್​ಪೀಸ್ ಜೊತೆ ಬಣ್ಣ ಹಚ್ಚೋಕೆ ತುದಿಗಾಲಲ್ಲಿ ನಿಂತಿದ್ದಾರಂತೆ ಈ ಗ್ಲಾಮರ್ ಡಾಲ್.

ಅಂದಹಾಗೆ ಯಶ್​ರ ಮುಂದಿನ ಸಿನಿಮಾ ನರ್ತನ್ ಜೊತೆಗೇನೇ ಅನ್ನೋದನ್ನ ಮಾನ್​ಸ್ಟರ್ ರಾಕಿಭಾಯ್ ಅತ್ಯಾಪ್ತ ಪಾನಿಪುರಿ ಕಿಟ್ಟಿ ನಮ್ಮ ಪವರ್ ಟಿವಿಗೆ ಹೇಳಿದ್ದಾರೆ. ಈ ಎಕ್ಸ್​ಕ್ಲೂಸಿವ್ ಸುದ್ದಿಯನ್ನ ಫಿಲ್ಮಿ ಪವರ್ ಟೀಂ ಬ್ರೇಕ್ ಮಾಡಿದ್ದು, ಸದ್ಯದಲ್ಲೇ ಅಫಿಶಿಯಲಿ ಅನೌನ್ಸ್ ಆಗಲಿದೆ ಈ ನೂತನ ಪ್ರಾಜೆಕ್ಟ್.

ಇನ್ನು ರಾಕಿಭಾಯ್​ಗೆ ಪರ್ಸನಲ್ ಫಿಟ್ನೆಸ್ ಟ್ರೈನರ್ ಕೂಡ ಆಗಿರೋ ಪಾನಿಪುರಿ ಕಿಟ್ಟಿ, ಕೆಜಿಎಫ್-2 ಚಿತ್ರದಲ್ಲಿ ಕಾಣೋ ರಾಕಿ ಬೇರ್ ಬಾಡಿ ಹಿಂದಿನ ಸೂತ್ರದಾರನೂ ಹೌದು. ಸದ್ಯ ಅವ್ರ ಫಿಟ್ನೆಸ್ ವರ್ಕೌಟ್ ಹೇಗಿದೆ..? ಡಯೆಟ್ ಫುಡ್ ಏನು ಅನ್ನೋದ್ರ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

ಸಿನಿಮಾದಲ್ಲಿ ವೆಯ್ಟ್ ಹೆಚ್ಚಿಸಿಕೊಳ್ಳೋಕೆ ಹಾಗೂ ತೂಕ ಇಳಿಸಿಕೊಳ್ಳೋಕೆ ಯಶ್ ಸಿಕ್ಕಾಪಟ್ಟೆ ಎಫರ್ಟ್​ ಹಾಕ್ತಾರಂತೆ. ಅದ್ರಲ್ಲೂ ಕೊರೋನಾ ಟೈಮ್​ನಲ್ಲಿ ದೇಹದ ಫಿಟ್ನೆಸ್ ಕಾಪಾಡಿಕೊಳ್ಳೋದು ತುಂಬಾ ಕಷ್ಟವಾಗಿತ್ತಂತೆ. ಸದ್ಯ ಮುಂದಿನ ಸಿನಿಮಾಗಾಗಿ ಶೂಟಿಂಗ್ ವೇಳೆ ಇವ್ರೇ ಪರ್ಸನಲ್ ಆಗಿ ಮನೆಯಲ್ಲೇ ಟ್ರೈನ್ ಮಾಡಲಿದ್ದು, ಹಿಂದೆಂದೂ ಕಾಣದೇ ಇರೋ ರೇಂಜ್​ಗೆ ಕಾಣಸಿಗಲಿದ್ದಾರಂತೆ.

ಒಟ್ಟಾರೆ ಪಾನಿಪುರಿ ಕಿಟ್ಟಿ ಅವ್ರಿಂದ ಸಿಕ್ಕಿರೋ ಈ ಅಧಿಕೃತ ಮಾಹಿತಿ ಪ್ರಕಾರ ಸದ್ಯದಲ್ಲೇ ಪೂಜಾ ಹೆಗ್ಡೆ- ಯಶ್​ರ ಹೊಸ ಸಿನಿಮಾದ ನ್ಯೂಸ್ ಹೊರಬರಲಿದೆ. ನರ್ತನ್ ಕೂಡ ಒಂದೊಳ್ಳೆ ಬೌಂಡ್ ಸ್ಕ್ರಿಪ್ಟ್ ಮಾಡಿಕೊಂಡು ಬಹಳ ಕಾತರದಿಂದ ಕಾಯ್ತಿದ್ದು, ಆ್ಯಕ್ಷನ್ ಕಟ್ ಹೇಳೋ ದಿನಗಳು ಬಹಳ ದೂರ ಉಳಿದಿಲ್ಲ ಅನ್ನೋದು ಸ್ಪಷ್ಟವಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES